ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:00 AM

ನಿಶ್ವಾಸಿತ ಹಾದಿ

Posted by ekanasu

ಸಾಹಿತ್ಯ: ವಿವೇಕ್ ಘಾಟೆ

ಹರಿವ ನದಿಯ ತಟದಲಿ ನಿಂತು
ಏನೇನೋ ಯೋಚನೆ ಅತಿಕ್ರಮಿಸುವಾಗ
ಬೆಂದ ಜೀವ ಮತ್ತೆ ಉಸಿರಿಗೆ ಬಂದು
ಮುಳುಗಿಸಲು ನನ್ನ ಅವತರಿಸಿತಾಗ

ನಯನದೆದುರು ಬರೆದರೂ ದಾರಿ
ಬೇಡವೆಂದೆ.. ನಿದ್ರಿಸಲು ಮನವು
ಬೆರೆಲ್ಲರಿಗೂ ಹಂಚಿತು ಭಾರಿ ಬಾರಿ
ಜಾಗರೂಕತೆಯಲ್ಲೇ ಇತ್ತು ತಣ್ಣನೆಯ ತನುವು

ಮಡಚಿದ ಕೈಯ ತೆರೆದೆನು ನಾನು
ಉಂಗುರವಿಲ್ಲ, ಬರೆಯು ಮಾತ್ರ ಕಂಡಿತು,
’ಏಕೆ ಹೀಗಾಗಿಸಿದೆ ನನ್ನ ಬದುಕು ನೀನು’
ಹೇಳು ದೇವಾ.. ಎನ್ನಲು ಕಾಲು ಜಾರಿತು

ಉರುಳುತ್ತಾ ಸೇರಿದೆ ಮೀನ ಮನೆಯ
ಚಂಚಲ ರೇಖೆಯಲ್ಲಿ ಬಿಸಿಲಿನ ಮಾತು,
ಸಂತಸದಿ ಸ್ವೀಕರಿಸುತ್ತಾ ಬಂದ ಅತಿಥಿಯ
ಶರೀರವಿರದೆ ಬೆಚ್ಚಗಿದ್ದೆ... ಹಾಗೇ ನಾನು!

ನನ್ನದೆಂಬ ಹಾಡಿನ ರಾಗವನು ಸೇರಿಸಿ
ಕಿತ್ತುಕೊಂಡಿತು ಸಮಯ ಅನ್ಯೂನ ಭಾವ
ತೆರೆಯ ಹಿಂದೆ ನಿಂತವನ ಮೀರಿಸಿ
ಹಿಡಿದಿದ್ದೆ ಬಯಲ ಅನ್ವರ್ಥ ಜೀವ...


0 comments:

Post a Comment