ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ: ಮೋಹನ ಕುಂಟಾರ್, ಭಾಗ-3
ಮಲಯಾಳಂ ಜನರ ಪ್ರಭಾವದಿಂದ ಕೆಲವು ಪಾರಿಭಾಷಿಕ ಪದಗಳು ಕನ್ನಡದಲ್ಲಿಯೂ ಬಳಕೆಯಾಗುತ್ತಿವೆ. ಇವು ಆಯಾ ಸಮುದಾಯದ ಜನರು ಮತ್ತು ಕನ್ನಡ ಸಮುದಾಯದ ನಡುವಿನ ಸಾಂಸ್ಕೃತಿಕ ಬದುಕಿನ ಭಾಗವಾಗಿಯೇ ಕನ್ನಡಿಗರಲ್ಲಿಯೂ ಬಳಕೆಯಾಗುತ್ತಿವೆ. ಕೃಷಿ, ಕಟ್ಟಡ ನಿರ್ಮಾಣ ಹಾಗೂ ಇತರೆ ಸಾಮಾಜಿಕ ಸಂದರ್ಭಗಳಲ್ಲಿ ಇಂತಹ ಪದಗಳು ಯಥೇಚ್ಚವಾಗಿವೆ.

ಉದಾಹರಣೆಗೆ:
ಮಡಿ (ಮಡಿ)
ಮುಡಿ (ಅಳತೆಯ ಮಾನ)
ತೇಯಪ್ / ತೇಪು (ಸಾರಣೆ)
ತೋದ್ / ತೋದ (ಅಳತೆಯ ಪ್ರಮಾಣ)
ಕೋಲು (27 ಇಂಚಿನ ಉದ್ದ)
ಕೌಪಲೆ (ಪಕ್ಕಾಸು)
ಮೋಂದಾಯ (ಛಾವಣಿಯ ಉನ್ನತ ಭಾಗ ಅಥವಾ ನೆತ್ತಿ)
ಕುತ್ತಂಕೋಲು (ಕವರೆಕೋಲು)
ಕುತ್ತಿ ಕಾಲು (ಛಾವಣಿಯ ನೆತ್ತಿಗೆ ಆಧಾರವಾಗಿ ಒಳಭಾಗದಿಂದ ಆಧಾರವಾಗಿ ಕೊಡುವ ಕಂಬ.)
ಇರಿಮುಳ್ಳು (ಇಸಿ ಮುಳ್ಳು)
ಮಚ್ಚು / ಮವ್ (ಒಂದು ಬಗೆಯ ಕೊಡಲಿ)
ಕತ್ತಿ (ಕುಡುಗೋಲು)
ಸೈಂಗೋಲು (ಸರಳು)
ಪುಂಜ (ಸುಗ್ಗಿ)
ನೆಲ್ಲುಗೋರಿ (ಬತ್ತರಾಶಿ ಮಾಡಲು ಬಳಸುವ ಸಲಿಕೆಯಂತಹ ಮರದ ಉಪಕರಣ)
ಮಲಯಾಳಂ ಪ್ರಭಾವದಿಂದ ಕನ್ನಡದಲ್ಲಿ ಅನುವಾದಗಳಾಗಿ ಸೃಷ್ಟಿಯಾದ ಪದಗಳಿವೆ:
ಕೋಳಿ ಕಟ್ಟ (ಕೋಯಿ ಕೆಟ್ಟ್)
ಭಿಕ್ಷೆ (ಭಿಕ್ಷ - ಅಯ್ಯಪ್ಪನ ವ್ರತ ಸಂಬಂಧಿ)
ದಡೆ ಹಾಕು (ದಡೆ ಇಡು, ಮರವನ್ನು ಸೀಳುವುದಕ್ಕೆ ಅಟ್ಟಳಿಗೆ ಮೇಲೆ ಇಡು)
ಮಾಲೆ ಹಾಕು (ಮಾಲ ಇಡು - ಅಯ್ಯಪ್ಪನ ವ್ರತ ಸಂಬಂಧಿ)
ಹೊಳೆಕರೆ (ಪೊಯಕ್ಕರ)
ಕಟ್ಟಕಟ್ಟು (ಕೆಟ್ಟ್ ಕೆಟ್ಟ್ - ಅಯ್ಯಪ್ಪನ ವ್ರತ ಸಂಬಂಧಿ)
ಆಚೆಕರೆ (ಅಕ್ಕರ)
ಸಾರ ಇಲ್ಲ (ಸಾರವಿಲ್ಲ - ಪರವಾಗಿಲ್ಲ)
ಕೋಪೆ (ಕೋಪ - ಗೊಂಚಲಿನ ರೂಪದಲ್ಲಿ ಜೋಡಿಸಿದ)
ಸ್ವಾಸ್ಥ್ಯ ಸಚಿವ (ಸ್ವಾಸ್ಥ್ಯ ಮಂತ್ರಿ - ಆರೋಗ್ಯ ಮಂತ್ರಿ)
ಮಲಯಾಳಂ ಸಾಮಾಜಿಕ ಸಂದರ್ಭದಲ್ಲಿ ಕೆಲವು ಪದಗಳಿಗೆ ವಿಶಿಷ್ಟ ಅರ್ಥಗಳಿವೆ. ಅವು ವ್ಯವಹಾರಿಕವಾಗಿಯೂ ಇತರೇ ಸಂದರ್ಭಗಳಲ್ಲಿ ಸ್ಪಷ್ಟವಾದ ಅರ್ಥವ್ಯತ್ಯಾಸಗಳಲ್ಲಿ ಭಾಷಾಂತರ ಗೊಂಡು ಕನ್ನಡದಲ್ಲಿ ಅರ್ಥಸ್ವೀಕಾರ್ಯವಾಗುತ್ತದೆ. ಉದಾಹರಣೆಗೆ ಮುಸಲ್ಮಾನರೂ ಪುಯ್ಯಾಪ್ಲೆ/ಪುದಿಯಾಪ್ಳೆ ಎಂದರೆ ಮದುಮಗ ಎಂದರ್ಥ. ಅದೇ ಮದುಮಗ ನಂತರ ಅಳಿಯ ಎಂಬರ್ಥದಲ್ಲೂ ಪುದಿಯಾಪ್ಳೆಯಾಗಿರುತ್ತಾನೆ.

'ಅಚ್ಚ' ಎಂದರೆ ತಂದೆ ಎಂದರ್ಥ. ಸೊಸೆಯೂ ಅಚ್ಚ ಎಂದು ಗಂಡನ ತಂದೆಯನ್ನು ಕರೆಯುತ್ತಾಳೆ. ಇಲ್ಲಿ ಅಚ್ಚ ಎಂದರೆ ಮಾವ ಎಂದರ್ಥ. 'ಅಚ್ಚಮ್ಮಾರ್' ಎಂದರೆ ತೀಯ ಸಮುದಾಯದಲ್ಲಿ ಬರುವ ಧಾರ್ಮಿಕ ವ್ಯಕ್ತಿಗಳು ಎಂದರ್ಥ. ತೀಯಾ ಸಮುದಾಯದವರು ಯಾದವ ಸಮುದಾಯದ ಹಿರಿಯ ರನ್ನು 'ಅಚ್ಚ' ಎಂದೇ ಕರೆಯುತ್ತಾರೆ. ಹಾಗೆಯೇ ಅಮ್ಮ ಎಂಬ ಪದವು ಅಮ್ಮ ಮತ್ತು ಅತ್ತೆ ಎಂಬ ಅರ್ಥದಲ್ಲೂ ಮಲಯಾಳಂನಲ್ಲಿ ಬಳಕೆಯಾಗುತ್ತಿದೆ.

ಚೇಟ ಎಂದರೆ 'ಅಣ್ಣ' ಎಂದರ್ಥ. ಕೆಲವು ಮಲಯಾಳಂ ಸಮುದಾಯದಲ್ಲಿ ಹೆಂಡತಿಗೆ ಗಂಡನೂ ಚೇಟನೇ.
ಹಾಗಾಗಿ ಇಂತಹ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಮಲಯಾಳಂನ ಸಾಮಾಜಿಕ ಸಂದರ್ಭವನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯ.
ಮಲಯಾಳಂನಲ್ಲಿ ಸಂಬಂಧವಾಚಕದಲ್ಲಿ ಒಂದೇ ಸಂಬಂಧವನ್ನು ನಿದರ್ೆಶಿಸುವ ಹಲವು ಪದಗಳು ವಿವಿಧ ಸಮುದಾಯಗಳಲ್ಲಿವೆ. ಇವು ವ್ಯವಹಾರಿಕವಾಗಿಯೂ ಬರವಣಿಗೆಯ ಸಂದರ್ಭ ದಲ್ಲಿಯೂ ಬಳಕೆಯಾಗುತ್ತದೆ.
ಉದಾಹರಣೆಗೆ:

ತಂದೆ - ತಂದ: ಅಪ್ಪನ್, ಅಪ್ಪಾಯಿ, ಅಚ್ಚನ್, ಅಚ್ಚ, ಉಪ್ಪ, ಬಾಪ್ಪ
ಅಣ್ಣ - ಚೇಟ: ಏಟ, ಜ್ಯೇಷ್ಠನ್, ಇಕ್ಯಾಕ
ಅಕ್ಕ - ಜ್ಯೇಷ್ಠತ್ತಿ: ಏಟತ್ತಿ, ಏಟಿ, ಇಞ, ಓಪ್ಪೋಳ್
ಇವುಗಳನ್ನೆಲ್ಲ ಮಲಯಾಳಂನ ವಿವಿಧ ಜನಸಮುದಾಯಗಳ ನೆಲೆಯಿಂದ ಲಕ್ಷಿಸಬೇಕಾಗುತ್ತದೆ.
ರಾಜಕೀಯ ಸಂದರ್ಭ
ಭಾಷಾವಾರು ಪ್ರಾಂತ್ಯ ವಿಂಗಡಣೆಯ ತರುವಾಯ ರಾಜಕೀಯವಾಗಿ ಕರ್ನಾಟಕ ಹಾಗೂ ಕೇರಳದ ಗಡಿ ನಿರ್ಣಯವಾಯಿತಾದರೂ ಸಾಂಸ್ಕೃತಿಕವಾಗಿ ಇವೆರಡು ಸಂಸ್ಕೃತಿಗಳು ಸೀಮಾತೀತವಾಗಿ ಬೆಳೆದು ಬಂದಿವೆ. ಕೇರಳದ ಆಡಳಿತ ಭಾಷೆಯು ಮಲಯಾಳಂ ಆಗಿ ಅಧಿಕೃತವಾದ ನಂತರ ಅನೇಕ ಅರ್ಜಿ ನಮೂನೆಗಳು, ಸೂಚನಾ ಫಲಕಗಳು ಮಲಯಾಳಂನಲ್ಲಿ ಬರತೊಡಗಿದವು. ಕೇರಳದ ಆಡಳಿತ ಭಾಷೆಯಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳ ಪ್ರಭಾವವೇ ಅತ್ಯಂತ ಹೆಚ್ಚಾಗಿದೆ. ದ್ರಾವಿಡ ಮೂಲವಾದ ಅಚ್ಚ ಮಲಯಾಳಂ ಪದಗಳು ಆಡಳಿತ ಭಾಷೆಯ ಯಾವ ಸಂದರ್ಭದಲ್ಲಿಯೂ ತಲೆಹಾಕಿದಂತೆ ಕಾಣಿಸುವುದಿಲ್ಲ.

ಆಡಳಿತ ಭಾಷೆಯಲ್ಲಿ ಎಲ್ಲೆಲ್ಲಿ ಸಂಸ್ಕೃತ ಪದಗಳನ್ನು ಬಳಸಿದೆಯೊ ಅಲ್ಲೆಲ್ಲ ಪಯರ್ಾಯವಾಗಿ ಕನ್ನಡ ಭಾಷಾಂತರ ಅಥವಾ ಲಿಪ್ಯಂತರ ನಡೆದಿದೆ. ಆಡಳಿತಾತ್ಮಕವಾಗಿ ಇಂಗ್ಲಿಶ್ ಭಾಷೆಯನ್ನು ಮಲಯಾಳಂನಲ್ಲಿ ಬಳಸಿದಲ್ಲೆಲ್ಲ ಕನ್ನಡ ಲಿಪಿಯಲ್ಲಿ ಹಾಗೆಯೇ ಬಳಸಲಾಗಿದೆ. ಆಡಳಿತ ಭಾಷೆಗೆ ಸಂಬಂಧಿಸಿದಂತೆ ಕನ್ನಡದ ನೆಲೆಯಿಂದ ಅನುವಾದ ಮಾಡುವ ಪ್ರಕ್ರಿಯೆ ಇಲ್ಲಿ ಅಷ್ಟಾಗಿ ಗೋಚರಿಸು ತ್ತಿಲ್ಲ. ಇಲ್ಲಿ ಕೆಲವೊಂದು ಉದಾಹರಣೆಗಳನ್ನು ಗಮನಿಸಬಹುದು.

1 comments:

Anonymous said...

Kani Noduwudu = beligge edda koodale noduwa modala notakke kandaddu.

Post a Comment