ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:38 PM

ಮನದ ಗೋಡೆ ಬರಹ

Posted by ekanasu

ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ
ಅಳಿಸಲಾರೆ ನಾನೆಂದು ಮನದ ಗೋಡೆ ಬರಹ
-ಜಯಂತ್ ಕಾಯ್ಕಿಣಿಹೆಚ್ಚು ಕಡಿಮೆ ನಮ್ಮೆಲ್ಲರ ಲೈಫ್ ಸ್ಟೋರಿ ಹೀಗೆ ಇರುತ್ತೆ. ಹುಟ್ಟಿದಾಗ ಅಪ್ಪ ಅಮ್ಮ ಒಂದ್ ಐವತ್ತು ಹೆಸರು ಹುಡುಕಿ, ಯವುದೋ ಒಂದು ಹೊಸ ಹೆಸರಿಡ್ತಾರೆ. ಟಾಮಿ ಅಂತ ಕರೆದ ತಕ್ಷಣ ನಮ್ಮ ನಿಮ್ಮ ಮನೆ ನಾಯಿ ಹೇಗೆ ಖುಷಿಯಿಂದ ಓಡಿ ಬರುತ್ತೋ ಹಾಗೆ ನಮ್ಮ ಹೆಸರು ಕರೆದ ತಕ್ಷಣ ನಾವೂ ಖುಷಿಯಿಂದ ಓಡಿ ಬರ್ತೀವಿ. ಆಮೇಲೆ ಅಳುತ್ತಾ ಸ್ಕೂಲ್ ಸೇರ್ತೀವಿ. ಹಿಂಗೆ ಯಾವಾಗಾದ್ರೂ ಮೊದಲ ರಾಂಕ್ ಬಂದ್ರೆ ಗೇಟ್ ರ್ಯಾಂಕಿಂಗ್ ಬಂದೋರ ಥರ ಆಡ್ತೀವಿ, ಆಮೇಲೆ ಕಾಲೇಜ್ ಸೇರ್ತೀವಿ, ಅಲ್ಲಿ ಯಾರೋ ಒಂದು ಹುಡುಗಿ ಇಷ್ಟ ಆಗ್ತಾಳೆ, ಅವಳು ಯಾವತ್ತೂ ಸಿಗೋದೇ ಇಲ್ಲ, ಎಜುಕೇಷನ್ ಮುಗಿತಾ ಇದ್ದ ಹಾಗೆ ಕೆಲಸ, ಆಮೇಲೆ ಮದುವೆ, ಮಕ್ಕಳು, ರಿಟೈರ್ಮೆಂಟ್, ಬ್ಯಾಟರಿ ಲೋ, ಸ್ವಿಚ್ ಆಫ್.

ನಮ್ ಜೀವನ ಇಷ್ಟೊಂದು ನೀರಸ ಆಗಿರುತ್ತೆ ಅಂತ ನನಿಗೂ ಗೊತ್ತಿರಲಿಲ್ಲ. ಆದ್ರೂ ಕೂಡ ನಾವು ಯಾವುದೋ ಕಾರಣಕ್ಕೆ ಖುಷಿಯಾಗಿರ್ತೀವಿ. ನನ್ನ ಮುಂದಿನ ಜೀವನದಲ್ಲಿ ನಾನೇನಾದ್ರೂ ಖುಷಿಯಾಗಿರ್ತೇನೆ ಅಂದ್ರೆ ಅದಕ್ಕೆ ನನ್ನ ಕಾಲೇಜ್ ಲೈಫೇ ಕಾರಣ ಕಣ್ರಿ. ಹಿಂಗೆ ಕಾಲೇಜ್ನಲ್ಲಿ ಇದ್ದಾಗ ಒಂದು ದಿನ ನಮ್ ಹುಡುಗರ ಜೊತೆ ಸುಮ್ನೆ ನಿಂತಿದ್ದೆ. ಎಲ್ಲಿಂದಲೋ ಅವಳು ಬಂದಳು, ಹೋದಳು. ಅವಳು ನನ್ನ ಮನಸ್ಸು ಕದ್ದು ಹೋಗಿದ್ದಳು. ಆಮೇಲೆ ನಾವು ಪಟ್ಟಿರೋ ಕಷ್ಟ ಕಡಿಮೆ ಏನಲ್ಲ. ಈ ಥರ ನಿಮ್ಮ ಜೀವನದಲ್ಲೂ ಆಗಿರುತ್ತೆ. ಅಂಥವರ ಹೆಸರನ್ನು ಮನಸ್ಸಿನ ಗೋಡೆಯ ಯಾವುದೋ ಒಂದು ಮೂಲೆಯಲ್ಲಿ ಬರೆದಿರುತ್ತೇವೆ. ನಿಮ್ಮ ವಯಸ್ಸು ಎಷ್ಟೇ ಆಗಿರಬಹುದು. ಈ ಥರ ಮನಸ್ಸು ಕಳೆದುಕೊಂಡಿರೋ ಘಟನೆಗಳು ನಿಮ್ಮ ಲೈಫಲ್ಲೂ ಇರುತ್ತೆ. ಹಂಗೆ ಒಂದು ರೌಂಡು ಫ್ಲಾಷ್ಬ್ಯಾಕ್ಗೆ ಹೋಗಿ ಬನ್ನಿ. ಈ ಆರ್ಟಿಕಲ್ನ ಮೊದಲಲ್ಲಿ ಬರೆದಿರೋ ಹಾಡಿನ ಸಾಲು ನಿಮಗೂ ಇಷ್ಟ ಆಗುತ್ತೆ.

ಅರುಣ್ ಕುಮಾರ್ ಪಿ.ಟಿ.


3 comments:

Anonymous said...

ಗುಡ್, ಚೆನ್ನಾಗಿದೆ...ಒಂದೇ ಉಸಿರಿಗೆ ಓದಿ ಮುಗಿಸಿದೆ. ನನ್ನ ಹಳೆ ನೆನಪುಗಳು ಮತ್ತೆ ನೆನಪಾಯಿತು.... ಬರೀತಿರಿ...
- ರಾಂ ಪ್ರಸಾದ್ ಕಾಸರಗೋಡು
ಬದಿಯಡ್ಕ

Anonymous said...

ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ
ಅಳಿಸಲಾರೆ ನಾನೆಂದು ಮನದ ಗೋಡೆ ಬರಹ... ಪ್ರಿಯ ಇಂಧು...ನೀನೆಂದೆಂದಿಗೂ ನನ್ನ ಮನದ ಗೋಡೆ ಬರಹದಲ್ಲಿದ್ದಿಯಾ...
ಇಂತು ನಿನ್ನ ಸೋನು...

Anonymous said...

ಯಾರಪ್ಪಾ ನಿಮ್ಮ ಮನದ ಗೋಡೆಯಲ್ಲಿರೋರು...ನಮ್ಗೂ ಹೇಳ್ರೀ...
ಸುಭಾಶ್

Post a Comment