ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ವಿಚಾರ: ಧನಂಜಯ ಜೀವಾಳ ಬಿ.ಕೆ.
ಹೆದ್ದಾರಿ ವಿಸ್ತರಣೆ ಸಾರಿಗೆ ಸಂಪರ್ಕ ವ್ಯವಸ್ಥೆಗೆ ಅನಿವಾರ್ಯ ಅಗತ್ಯವಾಗಿದೆ. ದಶಕಗಳ ಹಿಂದಿನಿಂದ ರಸ್ತೆಯ ಎರಡೂ ಪಕ್ಕದಲ್ಲಿರುವ ಮರಗಳು ಪರಿಸರ ಸಮತೋಲನ ಕಾಪಾಡುವಲ್ಲಿ, ಅಹ್ಲಾದಕರ ನೆರಳು ನೀಡುವಲ್ಲಿ, ಪಶು-ಪಕ್ಷಿಗಳ ಆವಾಸವಾಗುವಲ್ಲಿ, ಹೆದ್ದಾರಿಯ ಅಂದ ಹೆಚ್ಚಿಸುವಲ್ಲಿ ನೀಡಿರುವ ಕೊಡುಗೆ ಅನನ್ಯ ಮತ್ತು ಅಮೂಲ್ಯವಾದುದು. ಈಗ ಅನಿವಾರ್ಯವಾಗಿರುವ ರಸ್ತೆ ಅಗಲೀಕರಣದಿಂದ ಈ ವೃಕ್ಷ ಸಂಪತ್ತು ತನ್ನ ಪ್ರಾಣತ್ಯಾಗ ಮಾಡಬೇಕಾಗಿರುವುದು ವಿಷಾದನೀಯ. ಹಾಗಾಗಿ ರಸ್ತೆ ಅಗಲೀಕರಣದ ನಂತರ ರಸ್ತೆಯುದ್ದಕ್ಕೂ ಪ್ರತೀ ಐವತ್ತು ಅಡಿಗೊಂದು ಪಶು ಪಕ್ಷಿಗಳಿಗೆ ಆಶ್ರಯ ನೀಡಬಲ್ಲಂಥ ಸ್ಥಳೀಯ ಪ್ರಭೇದದ ಮರದ ಸಸಿಗಳನ್ನು ಕಡ್ಡಾಯವಾಗಿ ನೆಟ್ಟು ಕನಿಷ್ಠ ಐದು ವರ್ಷ ಸಲಹುವ ಕರಾರನ್ನು ರಸ್ತೆ ನಿರ್ಮಾಣ ಸಂಸ್ಥೆಯೊಂದಿಗೆ ಸರಕಾರ ಮಾಡಿಕೊಳ್ಳಬೇಕು.

ಇಷ್ಟು ವರ್ಷ ರಸ್ತೆ ಬದಿಯ ಸಂಪನ್ಮೂಲಗಳ ಸಹಾಯದಿಂದ ಬೆಳೆದಿರುವ ಈ ವೃಕ್ಷ ಸಮೂಹವನ್ನು ರಸ್ತೆ ವಿಸ್ತರಣಾ ಯೋಜನೆಯಡಿ ವ್ಯವಸ್ಥಿತವಾಗಿ ಲೂಟಿಹೊಡೆಯಲು ದೊಡ್ಡಮಟ್ಟದ ಲಾಬಿಯೊಂದು ಅಧಿಕಾರಿ-ವ್ಯಾಪಾರಿ ಪಾಲುದಾರಿಕೆ ಸೂತ್ರದಡಿಯಲ್ಲಿ ತಯಾರಾಗಿ ನಿಂತಿರುವಂತೆ ಕಾಣುತ್ತಿದೆ. ಇಡೀ ಸಮಾಜದ ಹಾಗೂ ಜೀವ ಮಂಡಲದ ಆಸ್ತಿಯಾಗಿರುವ ಈ ಮರಗಳ ಸದುಪಯೋಗ ಎಲ್ಲರಿಗೂ ದೊರೆಯುವಂತೆ ರಸ್ತೆಯ ಗುಂಟ ಪ್ರತೀ 999 ಮರಗಳಿಗೆ ಎ-1 - ಎ-999 ರಂತೆ ಝೆಡ್-1 -ಝೆಡ್-999 ರ ವರೆಗೆ ಗುರುತಿನ ಸಂಖ್ಯೆ ನೀಡಿ ಪ್ರತೀ ಒಂದೊಂದು ಮರವನ್ನೂ ಈ ರೀತಿಯ ಸಂಖ್ಯೆ ಆಧರಿಸಿ ಸಾರ್ವಜನಿಕವಾಗಿ ಬಿಡ್ ಕರೆದು ಬಹಿರಂಗವಾಗಿ ವಿಲೇವಾರಿ ಮಾಡಬೇಕು. ಬಿಲಿಯನ್ ಬೆಲೆಬಾಳುವ ಮರಗಳನ್ನು ಯಾರೋ ಒಬ್ಬ ಉದ್ಯಮಿ ದೊಡ್ಡ ಮೊತ್ತದ ಹಣ ನೀಡಿ ಸಗಟಾಗಿ ಖರೀದಿಸಿದಾಗ 1-2 ಲಕ್ಷ ಬೆಲೆಬಾಳುವ ಒಂದೊಂದು ಮರವೂ ಕೇವಲ 2-3 ಸಾವಿರ ರೂಪಾಯಿಗಳಿಗೆ ಬಿಕರಿಯಾಗುತ್ತದೆ. ಈ ರೀತಿ ಈ ಮರಗಳನ್ನು ಕಾಪಾಡಿದ ಸಮಾಜದ ಕಟ್ಟ ಕಡೆಯ ಮನುಷ್ಯನ ಅಮಾಯಕತೆಯನ್ನು ಧನವಂತ ವ್ಯಾಪಾರಿಯೊಬ್ಬ ದುರುಪಯೋಗಪಡಿಸಿಕೊಂಡು, ಸರಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ರಾಜಧನ ಸಿಗುವುದನ್ನು ತಪ್ಪಿಸಲು ಸಕಲ ಸಿದ್ಧತೆಯು ತೆರೆಯ ಮರೆಯಲ್ಲಿ ನಡೆಯಲಿದೆ. ಹೆಚ್ಚು ಬಂಡವಾಳವಿಲ್ಲದ ಚಿಲ್ಲರೆ ಖರೀದಿದಾರರೂ ಸಹಾ ತಮ್ಮ ಅಗತ್ಯ ಹಾಗೂ ಸಾಮಥ್ರ್ಯಗಳಿಗನುಗುಣವಾಗಿ ಒಂದೆರಡು ಮರಗಳನ್ನು ಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ.

ಈ ಕ್ರಮ ಕೈಗೊಳ್ಳದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಸರಕಾರದ ಖಜಾನೆಗೆ ನಷ್ಠ ಮಾಡುವುದರ ಜೊತೆಗೆ ಉದ್ಯಮಿಗಳಿಗೆ ಲಾಭ ಮಾಡಿಕೊಡಲಿಕ್ಕಾಗಿ ಸಗಟು ಮಾರಾಟ ಮಾಡಿಕೊಡಲು ಹಾದಿ ಸುಗಮ ಮಾಡಿಕೊಟ್ಟಿದ್ದಾರೆಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಹತ್ತಾರು ವರ್ಷಗಳಿಂದ ಈ ಮರಗಳುನ್ನು ಸಾಕಿ ಸಲಹಿದ ಜನ ಸಾಮಾನ್ಯನು ಈ ಮರಗಳ ಅಂತಿಮ ಪ್ರಯೋಜನವನ್ನು ಪಡೆಯಲು ನಿರಾಕರಿಸುವ ಮೂಲಕ ಮಾನವ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿರುವರೆಂದು ವೇದ್ಯವಾಗುತ್ತದೆ. ಈ ರೀತಿ ಚಿಲ್ಲರೆ ವಿಲೇವಾರಿಗೆ ಕಾನೂನಿನ ಪ್ರಕಾರ ನೀತಿನಿಯಮಗಳಲ್ಲಿ ಅವಕಾಶವಿಲ್ಲವೆಂದು ಕಾರಣ ಹೇಳುವುದಾದರೆ, ನಮ್ಮ ಕಾನೂನು ಕಟ್ಟಳೆಗಳು ಇಡೀ ಸಮಾಜದ ಒಳಿತಿಗೇ ಇರಬೇಕಾದ್ದೆಂದು ಪರಿಗಣಿಸಿ ಆ ನೀತಿ ನಿಯಮಗಳ ಸೂಕ್ತ ಮಾರ್ಪಾಟಿನೊಂದಿಗೆ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಸೂತ್ರದಡಿ ಕಾರ್ಯತತ್ಪರರಾಗಬೇಕು. ಮರಗಳನ್ನು ಸಗಟಾಗಿ ವಿಲೇವಾರಿ ಮಾಡಿದ ನಂತರ ಎಲ್ಲಾ ಆಗಿಹೋಗಿದೆ ಎಂದು ಆಕಾಶ ತೋರಿಸುವುದನ್ನು ಬಿಟ್ಟು ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಕಡೆಗೆ ಯಾರೂ ಆಯ್ಕೆ ಮಾಡಿಕೊಳ್ಳದೇ ಉಳಿದ ಮರಗಳನ್ನು ಕಾಲಮಿತಿಯಲ್ಲಿ ಸಗಟಾಗಿ ಮಾರಾಟ ಮಾಡಲು ಎರಡನೇ ಹಂತದ ಟೆಂಡರ್ ಕರೆಯಬಹುದಾಗಿದೆ. ಯಾರೂ ಕೇಳದಿದ್ದರೆ ಯಾರ್ಯಾರಿಗೋ ಲಾಭ ಮಾಡಿಕೊಡಬಲ್ಲ ಈ ರೀತಿಯ ಒಳ ಒಪ್ಪಂದಗಳು ಪ್ರತೀ ದಿನವೂ ಯಾರ ಗಮನಕ್ಕೂ ಬಾರದೇ ನಡೆದುಕೊಂಡು ಹೋಗುತ್ತಲೇ ಇರುತ್ತವೆ.

0 comments:

Post a Comment