ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಬಹಳ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಕರೆಯುವ ಭಾರತದಲ್ಲಿ ಅಷ್ಟೇ ಪ್ರಮಾಣದ ರಾಜಕೀಯ ಇತಿಹಾಸವು ನೆಲೆಗೂಡಿದೆ. ಜಾತಿ ರಾಜಕಾರಣ, ಧರ್ಮ ಸಂಘರ್ಷ ಮುಂತಾದ ಚಟುವಟಿಕೆಗಳಲ್ಲಿ ಭಾರತ ವಿಶ್ವದ ಗಮನ ಸೆಳೆದುದ್ದಲ್ಲದೆ ಬಹುತೇಕ ಹಲವು ಲಕ್ಷ ಕೋಟಿ ರೂಗಳ ಹಗರಣಗಳ ಸರಮಾಲೆಯನ್ನು ಸಹ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಭಾರತದಲ್ಲಿ ಅದರಲ್ಲೂ ಭಾರತದ ಜನರ ನರನಾಡಿಯಲ್ಲೂ ಸಹ ರಾಜಕೀಯ ಅನ್ನುವುದು ಮನೆಮಾಡಿದೆ. ಜೊತೆ ಜೊತೆಗೆ ಕೆಲ ಗಂಭೀರ ಸಮಸ್ಯೆಗಳೂ ಸಹ ಅಂತರಿಕ ಮುಖಪುಟದಲ್ಲಿ ಕಾಣಸಿಗುತ್ತದೆ.

ಇಂತಹ ಗಂಭೀರ ಸಮಸ್ಯೆಯನನು ಒಳಗೊಂಡಿರುವ ಮತ್ತು ನುರಿತ ಹಾಗೂ ಚಿಂತನಾಶೀಲ ಸಮಾಜದಲ್ಲಿ ಈ ನೈಜ ಸಮಸ್ಯೆಗಳನ್ನು ಗುರುತಿಸಿ ಹೊರಹಾಕುವ ಪ್ರಯತ್ನವನ್ನು ನಾನು ಮಾಡಿದ್ದೇನೆ.
ಭಾರತ ಎಲ್ಲರಿಗೂ ತಿಳಿದಿರುವಂತೆ ವೈವಿಧ್ಯತೆಯಿಂದ ಕೂಡಿದ ದೇಶ. ಇಲ್ಲಿ ಹಲವಾರು ಜಾತಿ, ಧರ್ಮ, ಮತ, ಜನಾಂಗ, ಭಾಷೆ ಇವೆ. ಇವುಗಳಲ್ಲಿ ಐಕ್ಯತೆಯನ್ನು ಕಂಡ ದೇಶ ನಮ್ಮದು ' Benedict Anderson’ ' ರವರ ಮಾತಿನಂತೆ Nation is an imagined community ಅಂದರೆ ನಾವು ಎಲ್ಲರೂ ಬೇರೆ ಬೇರೆ ಮತ, ಜಾತಿ ಇತ್ಯಾದಿಗಳಿಗೆ ಸೇರಿದ್ದರೂ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ವ್ಯಕ್ತ ಪಡಿಸುತ್ತೇವೆ. ವಾಸ್ತವಿಕತೆಯನ್ನು ನೋಡುತ್ತಾ ಬಂದಾಗ ಒಳನೋಟದಲ್ಲಿ ಜನರು ತಮ್ಮ ಅಸ್ಮಿತೆಯ ಬಗೆಗೆಯೇ ಹೆಚ್ಚಿನ ಹೊಡೆದಾಟ ಮಾಡುತ್ತಿದ್ದಾರೆ. ಅಸ್ಮಿತೆಯನ್ನು ಅನನ್ಯತೆ ಎಂಬ ಪದದಿಂದ ಕೂಡಾ ಕರೆಯಬಹುದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಜನರು ತಾನು ಮೇಲು ಮತ್ತು ಇತರರು ಕೀಳು ಎಂಬ ಪರಿಕಲ್ಪನೆಯಲ್ಲಿ ಪರಸ್ಪರ ಕಿತ್ತಾಟ ನಡೆಸುತ್ತಿದ್ದಾರೆ. ಇಲ್ಲಿ ಪ್ರಮುಖವಾಗಿ ತನ್ನನ್ನು ತಾನು ಇತರದೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನ ಪಡುತ್ತಿರುತ್ತಾನೆ ಅಂದರೆ ತಾನು ಯಾರು? ತನ್ನ ಗೌರವ ಏನು ಈ ಸಮಾಜದಲ್ಲಿ ಇಂತಹ ವಿಷಯಗಳು ಸದಾ ಅವನ ವ್ಯಕ್ತಿಗತ ಮನಸ್ಸಿನಲ್ಲಿ ವ್ಯಕ್ತ ಪಡಿಸುತ್ತಾನೆ.

ಒಬ್ಬನು ಇನ್ನೊಬ್ಬನಿಂದ ನಾನಾ ವಿಧದ ಅಸ್ಮಿತೆಗಳಿಂದ ಗುರುತಿಸಲ್ಪಡುವ ಪ್ರಕ್ರಿಯೆಯೇ ಅಸ್ಮಿತೆಯ ಪ್ರಕ್ರಿಯೆ. 'ಅಸ್ಮಿತೆ' ಎಂದರೆ ವ್ಯಕ್ತಿಯನ್ನು ಗುರುತಿಸುವ ಬಗೆ ಹೀಗೆ ನಾನಾ ‘MARKER’ ' ಗಳಿಂದ ತನ್ನನ್ನು ಇತರರುಗಳಿಂದ ಗುರುತಿಸಲ್ಪಡಲು ಇಚ್ಚಿಸುತ್ತಾನೆ. ಇಲ್ಲಿ ಈ ತರಹದ ಪ್ರಕ್ರಿಯೆಗೆ ಎರಡನೇ ವ್ಯಕ್ತಿಯ ಅವಶ್ಯಕವಿರುತ್ತದೆ ಏಕೆಂದರೆ ಒಬ್ಬ ವ್ಯಕ್ತಿಯನ್ನು ವಿವಿಧ ಚಿಹ್ನೆಗಳಿಂದ ಗುರುತಿಸಬೇಕಾದರೆ ಅವನನ್ನು ಅವನೇ ಗುರುತಿಸಿಕೊಳ್ಳಲು ಸಾಧ್ಯವಿಲ್ಲ, ಬದಲಾಗಿ ಇತರರು ಅವನನ್ನು ಗುರುತಿಸಬೇಕಾಗುತ್ತದೆ. ಉದಾ : ತಾನು ಯಾರು? ತಾನು ಒಂದು ರಾಷ್ಟ್ರಕ್ಕೆ ಸೇರಿದವನು, ಪ್ರದೇಶಕ್ಕೆ ಸೇರಿದವನು, ಒಂದು ಭಾಷೆಯನ್ನು ಮಾತನಾಡುವವನು, ಧರ್ಮ, ಸಂಸ್ಕೃತಿ ಹೀಗೆ ಇತ್ಯಾದಿ.

ಇಲ್ಲಿ ಒಂದು ರಾಷ್ಟ್ರಕ್ಕೆ ಸೇರಿದಾಗ ರಾಷ್ಟ್ರೀಯ ಅಸ್ಮಿತೆ, ಪ್ರದೇಶಕ್ಕೆ ಸೇರಿದ್ದರೆ ಪ್ರಾದೇಶಿಕ ಅಸ್ಮಿತಿ, ಜಾತಿ ಅಸ್ಮಿತೆ, ಧಾರ್ಮಿಕ ಅಸ್ಮಿತೆ ಸಂಸ್ಕೃತಿಯ ಅಸ್ಮಿತೆಯಿಂದ ಗುರುತಿಸಲ್ಪಡುತ್ತಾನೆ. ಸುಲಭದಲ್ಲಿ ತಿಳಿ ಹೇಳುವುದಾದರೆ, ನಾನು ಯಾರು? ನಾನು ಭಾರತೀಯ ಇಂತಹ ಪ್ರದೇಶಕ್ಕೆ ಸೇರಿದವನು. ಪ್ರಾದೇಶಿಕ ಅಸ್ಮಿತೆ, ಈ ಧರ್ಮವನ್ನು ಅನುಸರಿಸುವವನು ಅಂದರೆ ಧರ್ಮದ ಅಸ್ಮಿತೆ ಹೀಗೆ ಇತ್ಯಾದಿ.

ಈ ಇಡೀ ಪ್ರಕ್ರಿಯೆಯಲ್ಲಿ ವ್ಯಕ್ತಿಯು ತನ್ನನ್ನು ತಾನು ರಾಷ್ಟ್ರ, ಧರ್ಮ, ಪ್ರದೇಶ, ಸಂಸ್ಕೃತಿ ಭಾಷೆ ಇತ್ಯಾದಿಗಳಿಂದ ಗುರುತಿಸಿಕೊಳ್ಳುವುದೇ ಅಸ್ಮಿತೆಯ ಸ್ವರೂಪ ಎನ್ನಬಹುದು. ಜನರು ತಾನು ಭಾರತಕ್ಕೆ ಸೇರಿದವನು, ಆದ್ದರಿಂದ ನಾನು ಭಾರತೀಯನೆಂಬIdentity ಯಲ್ಲಿ ಗುರುತಿಸಿಕೊಳ್ಳು ಇಚ್ಚಿಸುವುದಿಲ್ಲ ಏಕೆಮದರೆ ಭಾರತದಲ್ಲಿರುವ ಪ್ರತಿಯೊಬ್ಬ ನಾಗರೀಕನೂ ಈ ಅಸ್ಮಿತೆಯನ್ನು ಪಡೆದಿರುವುದರಿಂದ, ವಿನೂತನExclusive ಅಸ್ಮಿತೆಯಿಂದ ಗುರುತಿಸಲು ಇಚ್ಚಿಸುತ್ತಾನೆ ಅಂದರೆ ಆ ರೀತಿಯಾಗಿ ಅವನನ್ನು ಮಾತ್ರ ಗುರುತಿಸಬೇಕು ಮತ್ತು ನಾನು ಇತರಿಗಿಂತ ಭಿನ್ನ ಎಂದು ತೋರಿಸಿಕೊಳ್ಳುವುದೇ ಉದ್ದೇಶವಾಗಿರುತ್ತದೆ.

ಉದಾ: ವ್ಯಕ್ತಿ ಒಂದು ದೇಶದ ನಾಗರೀಕನಾಗಿ, ಮನೆಯಲ್ಲಿ ತಂದೆ/ ಮಗನಾಗಿ, ಶಾಲೆಯಲ್ಲಿ ವಿದ್ಯಾರ್ಥಿ/ ಅಧ್ಯಾಪಕನಾಗಿ, ಸ್ನೇಹಿತರ ಜೊತೆಗೆ ಸ್ನೇಹಿತನ ಅಸ್ಮಿತೆಯಿಂದ ಗುರುತಿಸಲ್ಪಡುತ್ತಾನೆ. ಆದರೆ ತನಗೊಬ್ಬನಿಗೆ ಸೇರಿದ ಅಸ್ಮಿತೆ, ಅಂದರೆ ರಾಷ್ಟ್ರಪತಿಯಾಗಿ, ಎಲ್ಲರಿಗೂ ರಾಷ್ಟ್ರಪತಿಯಾಗಲು ಸಾಧ್ಯವಿಲ್ಲ ಮತ್ತು ಒಂದೇ ಸಮಯದಲ್ಲಿ ಎಲ್ಲರಿಗೂ ಆ ರೀತಿಯಲ್ಲಿ ಗುರುತಿಸಲ್ಪಡಲು ಆಗುವುದಿಲ್ಲ.

ಈ ರೀತಿಯ ಅಸ್ಮಿತೆಗಳನ್ನು ಗಳಿಸಿಕೊಳ್ಳುವ ಹವಣಿಕೆಯ ಹಂಬಲದಿಂದ, ತನಗೆ ಹೆಚ್ಚಿನ 'ರಕ್ಷಣೆ' ಸಿಗಬಹುದು ಎಂಬ ಉದ್ದೇಶದಿಂದ ಎರಡಕ್ಕಿಂತ ಹೆಚ್ಚು Identity ಅಥವಾ ಅಸ್ಮಿತೆ ಅಥವಾ ಅನನ್ಯತೆಗಳಿಂದ ಗುರುತಿಸಲ್ಪಡಲು ಇಚ್ಚಿಸುತ್ತಾನೆ. ಈ ರೀತಿಯಾಗಿ ಜನರು ಬಯಸಿ ಒಬ್ಬ ತನ್ನ ವಿಶಿಷ್ಟ ರೀತಿಯ ಅಸ್ಮಿತೆಯನ್ನು ಪಡೆದಾಗ ಅವನು ಇತರ ವ್ಯಕ್ತಿಗಳ, ಜಾತಿಗಳು ಧರ್ಮಗಳ, ಸಂಸ್ಕೃತಿಯನ್ನು ಅನುಸರಿಸುವ ಜನರ ಅಸ್ಮಿತೆಗಳನ್ನು ಕೀಳು ಎಂದು ಪರಿಗಣಿಸಿದಾಗ ಮೇಲು ಕೀಳಿನ ಭಾವನೆ ಉಂಟಾಗುತ್ತದೆ. ಈ ರೀತಿಯಾಗಿ ಒಂದು ಅಸ್ಮಿತೆ ಮೇಲು, ಇನ್ನೊಂದು ಕೀಳು ಪರಿಗಣಿಸುವ ಭಾವನೆಯೇ ಅಸ್ಮಿತಾ ರಾಜಕೀಯ.

ಶೀತಲ ಸಮರವೆಂದಾಕ್ಷಣ ಎಲ್ಲರೂ ಶಕ್ತಿಬಣಗಳ ಯುದ್ಧ ಎಂಬ ಅಂತರಾಷ್ಟ್ರೀಯ ಸ್ತರದ ಯುದ್ದ ಮೇಲೆ ತನ್ನ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಇದು ದೇಶದೊಳಗೇ ನಡೆಯುತ್ತಿರುವ ಆಂತರಿಕ ಶೀತಲ ಸಮರ . ಶ್ರೇಷ್ಟತೆಯೇ ಅಸ್ಮಿತೆಯುಳ್ಳವರು ತನ್ನನ್ನು ತಾನು ಶ್ರೇಷ್ಟರೆಂದು ಭಾವಿಸಿ ಇತರರನ್ನು ಕಡೆಗಣಿಸಿದಾಗ ಅದು ಸಹಜವಾಗಿ ಸಂಘರ್ಷದ ಭಾವನೆಯನ್ನು ಸೃಷ್ಟಿಸುತ್ತದೆ. ಇದರಿಂದ ಜನರ ಮಧ್ಯೆ ವೈಷಮ್ಯದ ಭಾವನೆಯನ್ನು ಬೆಳೆಸುತ್ತದೆ. ಈ ರಾಜಕಾರಣದ ಕುರಿತು ಚರ್ಚೆ ಬಹಳ ಇತ್ತೀಚಿನ ಅಂದರೆ 19, 20ನೇ ಶತಮಾನದಲ್ಲಿ ಗಂಭೀರ ಸ್ವರೂಪವನ್ನಾಗಿ ಎತ್ತಿಕೊಂಡಿತು.

ಹಿಂದಿನಿಂದಲೂ ಇದು ನೆಲೆಮಾಡಿತ್ತು ಆದರೆ ಯಾರೂ ಕೂಡ ಗಂಭೀರ ಸಮಸ್ಯೆಗಳೆದುರು ಹೋರಾಡಿದರಾದರೂ, ಇಂತಹ ತೀಕ್ಷ್ಣ ವಿಷಯದ ಬಗ್ಗೆ ಯಾರೂ ಗಮನ ಹರಿಸಲೇ ಇಲ್ಲಿ ಕೆಲವೊಂದು ಅಸ್ಮಿತೆಗಳು ಈಗ ಮಾಯವಾಗಿದೆ, ಕೆಲವೊಂದು ಹಾಗೆಯೇ ಉಳಿದಿದೆ. ಅವುಗಳೆಂದರೆ, ಜಾತಿ ಅಸ್ಮಿತೆಯು ಹಿಂದೆ ಹೇಗಿತ್ತೋ ಈವಾಗಲೂ ಹಾಗೆಯೇ ಉಳಿದುಕೊಂಡಿದೆ. ಬದಲಾದ ಅಸ್ಮಿತೆಗಳೆಂದರೆ ಹಿಂದೆ ಚಪ್ಪಲಿ, ಶೂ ವ್ಯಾಪಾರಿಗಳು ಮತ್ತು ಕ್ಷೌರಿಕ ವೃತ್ತಿಯನ್ನು ಮಾಡಲು ಒಂದು ಜಾತಿ ಸೀಮಿತವಾಗಿತ್ತು. ಆದರೆ ಈಗ ಹಾಗಲ್ಲ, ಯಾರು ಬೇಕಾದರೂ ಕ್ಷೌರಿಕರಾಗಬಹುದು. ಈ ರೀತಿಯಲ್ಲಿ ಬದಲಾವಣೆಗಳು ಸಂಭವಿಸಿದೆ.

ಜಾತಿಯಲ್ಲಿ ಈ ರಾಜಕೀಯವನ್ನು ಗಮನಿಸಿದಾಗ, ಬ್ರಾಹ್ಮಣ ವರ್ಗದವರಾದ 'ಶಿವಳ್ಳಿ' ಬ್ರಾಹ್ಮಣರನ್ನು ಕೀಳಾಗಿ ನೋಡುವುದುಂಟು. ಹೀಗಾಗಿ ಜಾತಿಯನ್ನು ಪ್ರಬಲಗೊಳಿಸಲು ತನ್ನ ಜಾತಿಯ ಅಸ್ತಿತ್ವದ ಪ್ರಜ್ಞೆಯನ್ನು ತಮ್ಮವರಲ್ಲಿ ಮೂಡಿಸಲು ಪ್ರಯತ್ನ ಪಡುತ್ತಿದ್ದಾರೆ. ಉದಾ: ದಕ್ಷಿಣಕನ್ನಡದಲ್ಲಿ ಗಟ್ಟಿ ಸಮಾಜವು ಒಂದು ಕಾಲದಲ್ಲಿ Marginalise ಮಾಡಲ್ಪಟ್ಟ ಸಮುದಾಯವಾಗಿತ್ತು ಆದರೆ ಈಗ ಹಲವಾರು ಸಮಾರಂಭಗಳನ್ನು ಮಾಡುವುದರ ಮೂಲಕ ತನ್ನ ಜಾತಿಯನ್ನು ಒಗ್ಗೂಡಿಸುವ ಪ್ರಯತ್ನವನ್ನು ಮಾಡ್ತಾ ಇದ್ದಾರೆ.

ರಾಷ್ಟ್ರದ/ ರಾಷ್ಟ್ರೀಯ ಅಸ್ಮಿತೆಯಿಂದ ಜನರು ಹೆಚ್ಚಾಗಿ ಗುರುತಿಸಲ್ಪಡಲು ಇಚ್ಚಿಸುವುದಿಲ್ಲ ಎಲ್ಲರಿಗೂ ಈIdentity ಇರುವುದರಿಂದ ಹೆಚ್ಚಾಗಿ ಈ ರೀತಿ ತನ್ನನ್ನು ತಾನು ಗುರುತಿಸಿಕೊಳ್ಳಲು ಇಚ್ಛೆ ಪಡುವುದಿಲ್ಲ. ಇನ್ನು ಭಾಷೆಯ ವಿಷಯಕ್ಕೆ ಬಂದಾಗಲಂತೂ ರಾಜಕೀಯ ಎದ್ದು ಕಾಣುತ್ತದೆ.ಕೊಡಗಿನ ಕೂರ್ಗ್ ಗಳಲ್ಲಿ 'ಕೆಂಬಟ್ಟಿ ಎಂಬ ಕೆಳಸ್ತರದ ಜಾತಿಗಳಿದೇ ಕೆಂಬಟ್ಟಿ ಜಾತಿಗೆ ಸೇರಿದ ಜನರು ಮಾತನಾಡುವ ಭಾಷೆ ಕೀಳು ಮತ್ತು ಮೇಲ್ತ್ರದ/ ಮೇಲಿನ ಸ್ತರದ ಕೂರ್ಗಿ ಗಳು ಮಾತನಾಡುವ ಭಾಷೆ ಮೇಲು ಎಂದು ಭಾವಿಸುತ್ತಾರೆ. ಇದು ಭಾಷೆಯ ಮೇಲಿನ ಅಸ್ಮಿತೆಗಳಲ್ಲಾಗುವ ರಾಜಕೀಯವನ್ನು ಬಿಂಬಿಸುತ್ತದೆ.

ಸಂಸ್ಕೃತಿ ಕೂಡ ಅಸ್ಮಿತೆ ಒದಗಿಸುವ ಅಂಶ ಜನರು ತನ್ನದಲ್ಲದ ವಿಶಿಷ್ಟ ಸಂಸ್ಕೃತಿಯನ್ನು ಬಾಹ್ಯ ಜಗತ್ತಿನಲ್ಲಿ Remunerate ಮಾಡ್ತಾರೆ. ಯಾಕೆಂದರೆ ಬೇರೆಯವರ ಸಂಸ್ಕೃತಿಯನ್ನು ಇವರು ತೋರಿಸುವುದರಿಂದ ಸಂಸ್ಕೃತಿಯ ಅಸ್ಮಿತೆ ದೊರೆಯುತ್ತದೆ. ಮತ್ತು ಆ Exclusive Identityಇಂದ ಗುರುತಿಸಿಕೊಳ್ಳಬಹುದು ಎಂಬ ಭಾವನೆ. ಒಂದು ಕಡೆ, Mathew Arnold’ ತನ್ನ ‘Culture & Anarchy’ ಎಂಬ ಪುಸ್ತಕದಲ್ಲಿ ಬರಿತಾರೆ, ಇಂಗ್ಲೆಂಡಿನಲ್ಲಿ ಅಂದಿನ ಕಾಲದಲ್ಲಿ ಐಯರ್ಲೆಂಡ್ ನ ಜನರಿಂದ ದಾಳಿ ನಡೆದು ಇಂಗ್ಲೆಂಡಿನಲ್ಲಿ ಸಂಸ್ಕೃತಿಯ ಅರಾಜಕತೆ ನೆಲಮಾಡಿತು.
ನಂತರ ಪುನಃ ತನ್ನ ಸಂಸ್ಕೃತಿಯನ್ನು ಪುನರ್ ಸ್ಥಾಪಿಸಲು ಇಂಗ್ಲೆಂಡಿನ ಜನರು ಹಾತೊರೆಯಲು ಯತ್ನಿಸಿದರು. ವ್ಯಕ್ತಿಯು ತನ್ನ ಅರ್ಧ ಗಂಟೆಗಳಷ್ಟು ಸಮಯವನ್ನು ಪ್ರತೀ ದಿನವೂ ತನ್ನ ಸಂಸ್ಕೃತಿಯನ್ನು ಪ್ರದರ್ಶಿಸಲು ಕಾಲ ಕಳೆಯುತ್ತಿರುತ್ತಾನೆ ಎಂದು Arnold ರವರು ಹೇಳಿದ್ದರು.

ಹೀಗೆ ಸಂಸ್ಕೃತಿಯಲ್ಲಿ ತಾರತಮ್ಯ ಮಾಡಿಕೊಂಡು ಒಬ್ಬ ಆಚರಿಸುವ ಸಂಸ್ಕೃತಿ ಕೀಳು ಮತ್ತು ಮೇಲು ಎಂಬುದಾಗಿ ಪರಿಗಣಿಸುವುದೇ ಅಸ್ಮಿತಾ ರಾಜಕೀಯಕ್ಕೆ ಕಾರಣವಾಗುತ್ತದೆ. ಜನರು ತಮ್ಮ ಪ್ರದೇಶಕ್ಕೆ ಸೇರಿದವರಾಗಿಯೂ ಸಹ ಗುರುತಿಸಲ್ಪಡುತ್ತಾರೆ. ಒಂದು ವೇಳೆ ವ್ಯಕ್ತಿಯ ಪ್ರದೇಶ 'ಪುತ್ತೂರು' ಆದರೆ ಅವನು ಪುತ್ತೂರಿನ ಅಸ್ಮಿತೆಯನ್ನು ಪಡೆಯುತ್ತಾನೆ. ಇದು ಒಂದು ರೀತಿಯಲ್ಲಿ ‘Dangerous’ ಪ್ರಕ್ರಿಯೆಯಾಗಿದೆ. ಹೇಗೆಂದರೆ, ಪ್ರತಿಯೊಬ್ಬ ತನ್ನ ಅಸ್ಮಿತೆ ಮೇಲು ಮತ್ತು ಇತರರನ್ನು ಕೀಳು ಎಂದು ಪರಿಗಣಿಸಿದಾಗ ಅಲ್ಲಿ ಸಂಘರ್ಷ ಏರ್ಪಡುತ್ತದೆ. ಇದು ಅನೇಕ ವೈಷಮ್ಯಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅಸ್ಮಿತಾ ರಾಜಕೀಯವು ಒಂದು ಗಂಭೀರ ವಿಷಯವಾಗಿ ಪರಿಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ. ಪ್ರಮುಖ ಅಧ್ಯಯನ ವಿಷಯವಾಗಿ ಈ ರಾಜಕೀಯವನ್ನು ಪರಿಗಣನೆಗೆ ತೆಗೆದುಕೊಂಡು ಹಲವಾರು ಸಂಸ್ಥೆಗಳು ಇದರ ಬಗ್ಗೆ ಸಂಶೋಧನಾ ವರದಿಯನ್ನು ಮಂಡಿಸುತ್ತಾ ಇದೆ. ಈ ಸಮಸ್ಯೆ ಪ್ರಸಕ್ತವಾಗಿ ಗಂಭೀರ ಚರ್ಚೆಗೆ ಗ್ರಾಸವಾಸವಾಗಿ ಇದಕ್ಕೆ ಅಧ್ಯಯನದ ಸ್ವರೂಪವನ್ನು ನೀಡಲಾಗಿದೆ. ತಾತ್ವಿಕ ನೆಲೆಯಿಂದ ಈ ರಾಜಕೀಯವನ್ನು ಗಮನಿಸಿದಾಗ ಇದು ಬಲಿಷ್ಟರ ಉಳಿವಿಗಾಗಿ ಹೋರಾಟ ಎಂದು ಪರಿಗಣಿಸಿದರೂ, ಮಿತಿ ಮೀರಿದರೆ ದೇಶದಲ್ಲಿ ಇನ್ನೊಂದು ಇನ್ನೊಂದು ಸಮರವನ್ನು ಎದುರು ನೋಡಬೇಕಾದೀತು.

ಹರ್ಷ

0 comments:

Post a Comment