ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮಂಗಳೂರು: ಫೆಬ್ರವರಿ 1 ಮತ್ತು 2 ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯ ಬಳಿಯ ಸರಕಾರಿ ಹಿರಿಯ ಮಾದರಿ ಶಾಲೆಯ ಆವರಣದಲ್ಲಿ ನಡೆಯಲಿರುವ 18ನೇ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಡಾ.ಶಿಮಂತೂರು ಎನ್.ನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ.ಯಕ್ಷಗಾನ ಮತ್ತು ಶಾಸ್ತ್ರೀಯ ವಿದ್ವತ್ ವಿಭಾಗದ ಅತಿ ವಿರಳ ವಿದ್ವಾಂಸರಾದ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರು ಹಳೆಗನ್ನಡ ಭಾಷೆ ಮತ್ತು ಸಾಹಿತ್ಯ, ಛಂದಸ್ಸು, ಯಕ್ಷಗಾನ ಪ್ರಸಂಗ ರಚನೆ ಕ್ಷೇತ್ರಗಳ ಶ್ರೇಷ್ಠ ತಜ್ಞರಲ್ಲಿ ಒಬ್ಬರು. ತುಳು ಕನ್ನಡ ಭಾಷೆಗಳ ಅಂದವನ್ನೂ ಮರ್ಮವನ್ನೂ ಅರಿತ ರಸಿಕ ಪಂಡಿತರು.

ಯಕ್ಷಗಾನ ಛಂದಸ್ಸಿನ ಕ್ಷೇತ್ರದಲ್ಲಿ ದಶಕಗಳ ಕಾಲ ಚಿಂತನ ಮಂಥನ ನಡೆಸಿ ಅದರ ಫಲವಾಗಿ - ಈ ಕ್ಷೇತ್ರದ ಆಚಾರ್ಯ ಕೃತಿಗಳೆನಿಸಿದ ಯಕ್ಷಗಾನ ಛಂದೋಂಬುಧಿ, ಅನಘ್ರ್ಯ ಛಂದೋ ರತ್ನಗಳು, ಚಿತ್ರಾತ್ರಿಪದಿ, ಹಲವು ಬಿಡಿಲೇಖನಗಳ ಮೂಲಕ ಆಚಾರ್ಯ ಕೃತಿಗಳನ್ನು ರಚಿಸಿ, ಯಕ್ಷಗಾನ ಪದಗಳ ರಚನೆಯ ಮೂಲಕ ಆ ಕ್ಷೇತ್ರಕ್ಕೆ ವಿಶೇಷ ಗೌರವವನ್ನು ತಂದಿತ್ತವರು. ತಾಳ, ಛಂದಸ್ಸು ಮತ್ತು ಸಾಹಿತ್ಯದ ಸಂಬಂಧದ ಬಗೆಗೆ ಅಧಿಕೃತವಾಗಿ ವಿವರಿಸಬಲ್ಲ ಕೆಲವೇ ವಿದ್ವಾಂಸರಲ್ಲಿ ಓರ್ವರು. ಕಿನ್ನಿಗೋಳಿ ಪ್ರದೇಶದ ಶಿಮಂತೂರಿನಲ್ಲಿ ಅಧ್ಯಾಪಕರಾಗಿದ್ದು, ಸಂಶೋಧನೆಯನ್ನು ತೀವ್ರ ಆಸಕ್ತಿಯಾಗಿ ಹಚ್ಚಿಕೊಂಡ ಶಿಮಂತೂರು ನಾರಾಯಣ ಶೆಟ್ಟಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಿ.ಲಿಟ್. ಪದವಿ ಪುರಸ್ಕೃತರು. ರಾಜಮುದ್ರಿಕೆ, ಸೊರ್ಕೆದ ಸಿರಿಗಿಂಡೆ, ಬಿರ್ದೆದ ಬೈರವೆರ್, ಕಟೀಲು ಕ್ಷೇತ್ರ ಮಹಾತ್ಮೆ ದೀಕ್ಷಾ ಕಂಕಣ ಮೊದಲಾದ ಹದಿನೈದು ಪ್ರಸಂಗಗಳನ್ನು ರಚಿಸಿದ್ದು ಅವೆಲ್ಲವೂ ರಂಗದಲ್ಲಿ ಯಶಸ್ವಿಯಾಗಿದೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು. ಡಿ.ಎಲ್.ಎನ್, ಸೇಡಿಯಾಪು, ಕುಕ್ಕಿಲ, ವಿ. ವಿ ವೆಂಕಟಾಚಾಲಶಾಸ್ತ್ರಿ ಸಾಲಿನ ಈಗ ವಿರಳವಾಗುತ್ತಿರುವ ಪಂಡಿತ ಪಂಕ್ತಿಯ ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯು ಯಕ್ಷಗಾನ ಮತ್ತು ಶಾಸ್ತ್ರೀಯ ವಿದ್ವತ್ತಿಗೆ ಸಂದ ಗೌರವವಾಗಿದೆ.

ಫೆಬ್ರವರಿ 1 ಮತ್ತು 2 ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯ ಬಳಿಯ ಸರಕಾರಿ ಹಿರಿಯ ಮಾದರಿ ಶಾಲೆಯ ಆವರಣದಲ್ಲಿ ಸಮ್ಮೇಳನ ತಯಾರಿ, ಸ್ವಾಗತ ಸಮಿತಿಯ ಪೂರ್ಣ ಉಸ್ತುವಾರಿಯಲ್ಲಿ ಈಗಾಗಲೆ ಭರದಿಂದ ಸಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


0 comments:

Post a Comment