ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮಂಗಳೂರು: ಭಾರತೀಯ ಕಲೆಗಳ ಕೇಂದ್ರ ರಂಗಭಾರತಿ, ಮಂಗಳೂರು ಕೊಡಮಾಡುತ್ತಿರುವ 8ನೇ ವರ್ಷದ ಪನ್ನಾಭ ಪುರಸ್ಕಾರಕ್ಕೆ ಬಂಟ್ವಾಳ ತಾಲೂಕಿನ ಕೆದಿಲದ ಮುದ್ರಜೆಯಲ್ಲಿ ನೆಲೆಸಿರುವ ಬ್ರಹ್ಮಶ್ರೀ ವೇ ಮೂ ಪುರೋಹಿತ ಮಿತ್ತೂರು ತಿರುಮಲೇಶ್ವರ ಭಟ್ಟರನ್ನು ಆಯ್ಕೆಮಾಡಲಾಗಿದೆ.'ತಿಮ್ಮಣ್ಣ ಭಟ್ರು' ಎಂದೇ ಜನಜನಿತರಾಗಿರುವ 74 ವರ್ಷ ಪ್ರಾಯದ ತಿರುಮಲೇಶ್ವರ ಭಟ್ಟರ 55 ವರ್ಷಗಳ ಪೌರೋಹಿತ್ಯ, ಮಾರ್ಗದರ್ಶನಾನುಭವ ಮತ್ತು ಶಿಷ್ಯವರ್ಗದ ಮೇಲಿನ ಅನ್ಯಾದೃಶ ವಾತ್ಸಲ್ಯವನ್ನು ಪರಿಗಣಿಸಿ, ಈ ಆಯ್ಕೆ ಮಾಡಲಾಗಿದೆ.

ಡಾ ಎಮ್. ಮೋಹನ್ ಆಳ್ವ, ಹರಿಕೃಷ್ಣ ಪುನರೂರು, ಉಚ್ಚ ನ್ಯಾಯಾಲಯದ ನ್ಯಾಯವಾದಿ ಎಂ. ಸುಧಾಕರ್ ಪೈ, ಪನ್ನಾಭರ ಪುತ್ರಿ ಈಶ್ವರೀ ರಾಮಕೃಷ್ಣ ಭಟ್ ಅವರನ್ನೊಳಗೊಂಡ ಆಯ್ಕೆ ಸಮಿತಿ ತಿಮ್ಮಣ್ಣ ಭಟ್ಟರ ಹೆಸರನ್ನು ಅಂತಿಮಗೊಳಿಸಿದೆ.

ಜನವರಿ 24ರಂದು ಕಬಕ ಪುತ್ತೂರಿಗೆ ಸಮೀಪದ ಮುದ್ರಜೆಯ ಅವರ ನಿವಾಸದಲ್ಲಿ ಸಂಜೆ 6.30 ಗಂಟೆಗೆ ಪುರಸ್ಕಾರ ಪದಾನ ಕಾರ್ಯಕ್ರಮ ನಡೆಯಲಿದೆ. ರೂಪಾ 5 ಸಾವಿರ ನಗದು, ಮಾನಪತ್ರ ಸಹಿತ ಸಮ್ಮಾನ ಪರಿಕರಗಳನ್ನು ಪನ್ನಾಭ ಪುರಸ್ಕಾರ ಒಳಗೊಂಡಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು,
ಡಾ ಎಂ. ಮೋಹನ್ ಆಳ್ವ, ಕರಾವಳಿ ಸಮೂಹ ವಿದ್ಯಾ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್, ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ಧನ ಭಟ್, ಹಿರಿಯ ರಂಗನಟ ಚಿದಾನಂದ ಕಾಮತ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಕೆ.ಟಿ. ಭಟ್, ಹಿರಿಯ ಸಾಹಿತಿ ವಿ. ಬಿ. ಅರ್ತಿಕಜೆ, ನ್ಯಾಯವಾದಿ ಮಹೇಶ್ ಕಜೆ, ಡಾ ಸುಧಾ ಎಸ್. ರಾವ್ ಮತ್ತಿತರ ಗಣ್ಯರು ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಳಿಕ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅದ್ಭುತ ಬಾಲ ಕಲಾವಿದೆ ಕು ಅಯನಾ. ವಿ. ರಮಣ್ ಅವರಿಂದ ನೃತ್ಯ - ಪ್ರತಿಭಾ ಪ್ರದರ್ಶನ ನಡೆಯಲಿದೆ ಎಂದು ರಂಗಭಾರತಿ ಮಂಗಳೂರು ಇದರ ನಿರ್ದೇಶಕ ಕೆ.ವಿ.ರಮಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 comments:

Post a Comment