ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಕನ್ನಡ ವೃತ್ತಿ ರಂಗಭೂಮಿ ಕಲಾವಿದರ ಜೀವನ ಬಲು ವಿಶಿಷ್ಟ. ಬದುಕಿನ ರೀತಿಯೆಂದರೆ ಡೇರೆ ಕಟ್ಟು, ನಾಟಕವಾಡು, ಅಲ್ಲಿಂದೆದ್ದು ಹೋಗು! ಇದೊಂದು ಜೀವನಕ್ರಮವೇ ಆಗಿದ್ದವರ ಬಾಳು ಹೇಗಿರುತ್ತಿತ್ತು? ಈಗ ಹೇಗಿದೆ? ಗುಬ್ಬಿ ವೀರಣ್ಣನವರ ಕಾಲದಲ್ಲಿ ಕರ್ನಾಟಕದ ನಾಟಕ ಕಂಪೆನಿಗಳಲ್ಲಿ ಎರಡೆರಡು ಅಡುಗೆ ಮನೆಗಳಿರುತ್ತಿದ್ದ ಸಂದರ್ಭವಿತ್ತು . ನಟರಿಗೆ ಅವರು ಕೇಳಿದಷ್ಟು ಅನ್ನ, ಸಾರು, ಪಲ್ಯ, ತುಪ್ಪ, ಮಜ್ಜಿಗೆ ಇತ್ಯಾದಿ ಸಿಗುತ್ತಿತ್ತು . ಅದು ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಯುಗ. ರಂಗಸ್ಠಗಳಲ್ಲಿ ರಂಗಸಜ್ಜಿಕೆಯ ಮೆರುಗು, ಜೊತೆಗೆ ಸ್ಪೆಶಲ್ ಇಫೆಕ್ಟ್ ಗಳು, ಮಧುರ ರಂಗ ಗೀತೆಗಳು, ಸ್ಪಷ್ಟ ಉಚ್ಚಾರಣೆಯ ಸಂಭಾಷಣೆಗಳು, ರಥಗಳು, ನರ್ತಕಿಯರು, ಆನೆಗಳು – ಎಲ್ಲವೂ ಇರುತ್ತಿದ್ದವು.

ಇಂದು ಕರ್ನಾಟಕದಾದ್ಯಂತ ಹಲವು ’ನಾಟಕ ಕಂಪೆನಿ’ ಗಳು ತಮ್ಮ ಪ್ರೇಕ್ಷರನ್ನು ಅರಸಿ ಅಲೆದಾಡುತ್ತಿವೆ. ಇವು ಹೆಚ್ಚಾಗಿ ಹಳೆಯ ಸಾಮಾಜಿಕ ನಾಟಕಗಳನ್ನು ಈಗಿನ ಕಾಲಕ್ಕೆ ಹೊಂದಿಸಿಕೊಂಡು ಹೆಸರು ಬದಲಾಯಿಸಿ ಆಡುತ್ತಿವೆ. ರಂಗಸಜ್ಜಿಕೆ ಬರಿದಾಗಿದೆ. ರಂಗಗೀತೆಯ ಬದಲು ಸಿನಿಮಾ ರೆಕಾರ್ಡುಗಳಿಗೆ ತುಟಿಗಳನ್ನು ಅಲುಗಾಡಿಸಿ ಕುಣಿಯುವ ಅಮದು ಕಲಾವಿದರು ಹಾಗೂ ಅಶ್ಲೀಲ ಸಂಭಾಷಣೆ. ಕಂಪೆನಿ ಮಾಲಿಕರು ಕಲಾವಿದರಿಗಾಗಿ ನಡೆಸುವ ಅಡುಗೆ ಮನೆಯಲ್ಲಿ ದೊರೆಯುವುದು ಬರೀ ಅನ್ನ ಮತ್ತು ಸಾರು.

’ಅನ್ನ ಸಾರು (ರೈನ್ ಎಂಡ್ ರಸಂ)’ ನಾಟಕ ಕಂಪೆನಿಗಳ ಜೊತೆಗೆ ಅಂಟಿಕೊಂಡಿದ್ದ ಕಲಾವಿದರ ಅಲೆಮಾರಿ ಜೀವನದ ಕೆಲ ಕ್ಷಣಗಳನ್ನು ತೋರಿಸುವ ೫೨ ನಿಮಿಷಗಳ ಸಾಕ್ಷ್ಯ ಚಿತ್ರ. ಕಂಪೆನಿ ನಾಟಕದ ಕ್ಷೇತ್ರದಲ್ಲಿ ಒಳ್ಳೆಯ ನಿರ್ಮಾಪಕರು ಎನಿಸಿಕೊಂಡ ರಾಜಣ್ಣ ಜೇವರ್ಗಿಯವರ ಮುತುವರ್ಜಿಯಲ್ಲಿ ನಡೆಯುತ್ತಿರುವ ಎರಡು ಕಂಪೆನಿಗಳ ಕಲಾವಿದರು ಒಂದೂರಿಂದ ಇನ್ನೊಂದಕ್ಕೆ ಅಲೆದಾಡುತ್ತ , ಜಿಂಕ್ ಶೀಟ್ ಗಳಡಿಯ ನಿತ್ಯ ಬದುಕಿನಲ್ಲಿ ಕಾಣುವ ಸತ್ಯಗಳನ್ನು , ಅವರ ಸುಖ ಕಷ್ಟಗಳನ್ನು , ಆಕಾಂಕ್ಷೆ ಆತಂಕಗಳನ್ನು - ಈ ಚಿತ್ರ ಬೆಂಬತ್ತುತ್ತದೆ. ಗುಬ್ಬಿ ವೀರಣ್ಣನವರ ಮೊಮ್ಮಗ ಗುಬ್ಬಿ ನಾಗೇಶ್ ಹಾಗೂ ಅವರ ಪರಿವಾರದ ಸದಸ್ಯರಾದ ಮಡದಿ ಮಂಜುಳ ಗುಬ್ಬಿ, ಮಗ ಪ್ರಶಾಂತ್ ಗುಬ್ಬಿ, ಮಗಳು ಶ್ವೇತ ಬೆಳಗಿ ಮತ್ತು ಸೊಸೆ ಸುಜಾತ ಗುಬ್ಬಿ ಈ ಸಾಕ್ಷ್ಯ ಚಿತ್ರದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

ಕರ್ನಾಟಕದ ಜೇವರ್ಗಿ, ಕುಡಿತಿನಿ, ಹೊಸಪೇಟೆ, ಕುಕನೂರು, ಕೊಪ್ಪಳ, ಮಣ್ಣೂರು ಹಾಗೂ ದಾವಣಗೆರೆಯಲ್ಲಿ ಚಿತ್ರಿತಗೊಂಡ ಈ ಸಾಕ್ಷ್ಯ ಚಿತ್ರ ಈಗಾಗಲೇ ೨೦೧೨ ರಲ್ಲಿ ದೆಹಲಿಯ ’ಓಪನ್ ಫ್ರೇಮ್’ ಡಾಕ್ಯುಮೆಂಟರಿ ಚಲನಚಿತ್ರೋತ್ಸವ ಹಾಗೂ ಚೆಕ್ ರಿಪಬ್ಲಿಕ್ ದೇಶದ ಪ್ರಾಗ್ ಶಹರದಲ್ಲಿ ನಡೆದ ’ಪ್ರಾಗ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ ನಲ್ಲಿ ಪಾಲ್ಗೊಂಡಿದೆ. ಇದೀಗ ಫೆಬ್ರವರಿಯಲ್ಲಿ ೨೦೧೩ ರಲ್ಲಿ ಕೇರಳದ ತ್ರಿಚ್ಚಿ ಯ ’ವಿಬ್ ಗ್ಯೋರ್’ ಡಾಕ್ಯುಮೆಂಟರಿ ಚಲನಚಿತ್ರೋತ್ಸವ ಮತ್ತು ಮೇ ೨೦೧೩ ತಿಂಗಳಲ್ಲಿ ಸ್ಪೇಯಿನ್ ದೇಶದ ಮೇಡ್ರಿಡ್ ಶಹರದಲ್ಲಿ ನಡೆಯಲಿರುವ ’ಇಮೇಜಿನ್ ಇಂಡಿಯಾ’ ಚಲನಚಿತ್ರೋತ್ಸವಕ್ಕಾಗಿಯೂ ಆಯ್ಕೆಗೊಂಡಿದೆ.
ದೆಹಲಿಯ ಪಬ್ಲಿಕ್ ಸರ್ವಿಸ್ ಬ್ರಾಡ್ಕಾಸ್ಟ್ ಟ್ರಸ್ಟ್ (ಪಿ. ಎಸ್. ಬಿ. ಟಿ.) ನ ರಾಜೀವ್ ಮೆಹರೋತ್ರ ಈ ಸಾಕ್ಷ್ಯ ಚಿತ್ರದ ನಿರ್ಮಾಪಕರು ಹಾಗೂ ತುಲಿಕ ಸ್ರೀವಾತ್ಸವ ಕಾರ್ಯಕಾರಿ ನಿರ್ಮಾಪಕರು . ಚಿತ್ರದ ನಿರ್ದೇಶನ, ಕ್ಯಾಮರ ಹಾಗೂ ಸಂಕಲನದ ಹೊಣೆಯನ್ನು ಸ್ವತಃ ರಾಮಚಂದ್ರ ಅವರೇ ಹೊತ್ತಿದ್ದಾರೆ. ಧ್ವನಿ ಸಂಯೋಜಕರು ವಿ. ಪಿ. ಮೋಹನ್ ದಾಸ್. ಮುಂಬಯಿಯಲ್ಲಿ ನೆಲೆಸಿರುವ, ಹುಬ್ಬಳ್ಳಿ ಮೂಲದ ಸುರೇಶ್ ಗುಜರ್ ಈ ಚಿತ್ರದ ಸಹ ನಿರ್ದೇಶಕರಾಗಿದ್ದಾರೆ.
0 comments:

Post a Comment