ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:56 PM

ಕೈಲಾದ ಸಹಾಯ ಮಾಡಿ

Posted by ekanasu


ಮಂಗಳೂರು : ಜೀವನದಲ್ಲಿ ಹಲವು ಕನಸುಗಳನ್ನು ಕಂಡಿರುವ ಸವಿತಾ ಎಚ್ ನಾಯ್ಕ್ ಕನಸುಗಳೊಂದಿಗೆ ಜೀವನ ಮುಗಿಸಬೇಕಾಗಿರುವ ಮಾರಣಾಂತಿಕ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದಾಳೆ. ಈಕೆಗೆ ಈಕೆಗೆ ಮಂಗಳೂರಿನ ಕೆಎಂಸಿಯಲ್ಲಿ ಚಿಕಿತ್ಸೆ ಮುಂದುರಿದಿದೆ. ಈಕೆಯ ಈ ರೋಗಕ್ಕೆ ದುಬಾರಿ ಚಿಕಿತ್ಸೆ ನಡೆಸಲು ಸಾಮರ್ಥ್ಯವಿಲ್ಲದ ಕಡು ಬಡತನದಲ್ಲಿರುವ ಕುಟುಂಬ ಇದೀಗ ದಾನಿಗಳ ನೆರವಿಗಾಗಿ ಮನವಿ ಮಾಡಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮದ ಸವಿತಾಳಿಗೆ (21) ರಕ್ತ ಕ್ಯಾನ್ಸರ್ ತಗುಲಿರುವುದು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಗೊತ್ತಾಗಿದೆ. ಅನ್ಯ ಚಿಕಿತ್ಸೆ ಕಾರಣಕ್ಕಾಗಿ ಕುಳಾಯಿಯಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದ ಈಕೆಗೆ ಸುರತ್ಕಲ್ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದಾಗಲೇ ಕ್ಯಾನ್ಸರ್ ತಗುಲಿರುವುದು ಬೆಳಕಿಗೆ ಬಂದಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿಗೆ ಸೇರಿಸಲಾಗಿದೆ.

ಮಂಗಳೂರು ಕೆಎಂಸಿ ಕ್ಯಾನ್ಸರ್ ತಜ್ಞ ಡಾ ಕೃಷ್ಣ ಪ್ರಸಾದ್ ಅವರ ಪ್ರಕಾರ ಈ ಬಗೆಯಾದ ಕ್ಯಾನ್ಸರ್ಗೆ ನಿರಂತರ ಚಿಕಿತ್ಸೆ ಅಗತ್ಯವಿದ್ದು, ಚಿಕಿತ್ಸೆ ವೆಚ್ಚ ದುಬಾರಿಯಾಗಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಬೀಳುತ್ತದೆ ಎಂದಿದ್ದಾರೆ. ಆದರೆ ನಾಲ್ವರು ಹೆಣ್ಣು ಮಕ್ಕಳ ತಾಯಿ-ತಂದೆಗೆ ಇಷ್ಟೊಂದು ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲದಂತಾಗಿದ್ದು, ದಾನಿಗಳತ್ತ ಮುಖ ಮಾಡಿದ್ದಾರೆ.

ಯಾವುದೇ ಆರ್ಥಿಕ ಬೆಂಬಲವಿಲ್ಲದ ಸವಿತಾಳ ಪಾಲಕರು ಕಿತ್ತು ತಿನ್ನುವಂತಹ ಬಡತನದೊಂದಿಗೆ ವಾಸಿಸುತ್ತಿದ್ದಾರೆ. ದಯಾಳುವಾದ ತಾವು ಈಕೆಯ ಚಿಕಿತ್ಸೆ ಹಾಗೂ ಕನಸುಗಳು ನನಸಾಗುವಲ್ಲಿ ಸಹಕರಿಸುವಿರಾಗಿ ಸಾರ್ವಜನಿಕರಲ್ಲಿ ಬೇಡಿಕೊಂಡಿದ್ದಾರೆ ಪಾಲಕರಾದ ಹನುಮಂತ ನಾಯ್ಕ್ ಮತ್ತು ಸುಂದರಿ ನಾಯ್ಕ್.

ಸಹೃದಯಿ ದಾನಿಗಳು ಸಂಪರ್ಕಿಸಬೇಕಾದ ವಿಳಾಸ ಹೀಗಿದೆ : ಸವಿತಾ ಎಚ್ ನಾಯ್ಕ್, ಹನುಮಂತ ನಾಯ್ಕ್ ಪುತ್ರಿ, ಕಾಮತ್ ಕಂಪೌಂಡ್, ವಿದ್ಯಾನಗರ, ಕುಳಾಯಿ, ಮಂಗಳೂರು ತಾಲೂಕು-575019 ಅಥವಾ ಸವಿತಾಳ ಸಿಂಡಿಕೇಟ್ ಬ್ಯಾಂಕ್ ಖಾತೆ (ಕುಳಾಯಿ ಬ್ರಾಂಚ್) 01552200077768 (ಐಎಫ್ಎಸ್ಸಿ ನಂಬ್ರ : ಎಸ್ವೈಎನ್ಬಿ0000156 ಅಥವಾ ಮೊಬೈಲ್ ಸಂಖ್ಯೆ (ಸಹೋದರಿ ರೇಖಾ : 9945618113 ಸಂಪರ್ಕಿಸಬಹುದಾಗಿದೆ.

0 comments:

Post a Comment