ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:32 PM

ನೆನಪುಗಳೇ...

Posted by ekanasu


ಈ ನೆನಪುಗಳು ಅದೆಷ್ಟು ಸುಂದರ ಅಲ್ವಾ?? ಕಳೆದು ಹೋದ ದಿನಗಳನ್ನು, ಹೊಸ ಉತ್ಸಾಹದ ಬಯಕೆಯನ್ನು, ಮನದ ಮೂಲೆಯಲ್ಲಿ ಕಟ್ಟಿಟ್ಟುಬಿಡುತ್ತೆ. ಜೀವನದ ಪಯಣದಲಿ ಅದೆಷ್ಟೋ ಜನರು ಸಿಗುತ್ತಾರೆ ಪರಿಚಯವಾಗುತ್ತಾರೆ.ಆದರೆ ಮರೆತು ಹೋಗುವುದು ಬಹಳ ವಿರಳ. ಈ ಮನಸ್ಸೆಂಬ ಮರ್ಕಟವು ಆಲೋಚನೆಯಲ್ಲಿ ಮುಳುಗಿ ಮುಳುಗಿ ಎಲ್ಲವನ್ನೂ ಕೆದಕಿ ಬಿಡುತ್ತೆ.. ವ್ಯಕ್ತಿಗಳು ಒಂದಷ್ಟು ದಿನ ಜೊತೆಗಿದ್ದು ಮರೆಯಾದರೂ ನೆನಪುಗಳು ಮಾತ್ರ ಪದೇ ಪದೇ ದಿನಗಳನ್ನು ಕ್ಷಣಗಳನ್ನು ಲೆಕ್ಕ ಹಾಕುತ್ತಾ ಕುಳಿತಿರುತ್ತದೆ.

ಎಂದೋ ಸಿಗಬಹುದಾದ ನಿರೀಕ್ಷೆಯಲ್ಲಿ ಭರವಸೆಯ ಬೆಳಕಿನಲಿ ಕಾಯುತ್ತಾ ಇರುತ್ತದೆ..ಕಳೆದು ಹೋದ ಕ್ಷಣಗಳು ಮರಳಿ ಬರಲಾರದಾದರೂ ಕಳೆದಿರುವ ಕ್ಷಣಗಳ ನೆನಪಿನ ಬುತ್ತಿಯನು ಜೀವನದುದ್ದಕ್ಕೂ ಇಟ್ಟುಕೊಂಡಿರುತ್ತದೆ..
ನೆನಪುಗಳೆಂದರೇ ಹಾಗೆ..ಈ ನೆನಪುಗಳಿಗೆ ಎಲ್ಲೆ ಎಂಬುದಿಲ್ಲ. ಪ್ರತೀ ದಿನವೂ ಹಳೆಯ ನೆನಪುಗಳೊಂದಿಗೇ ಬದುಕಿರುತ್ತದೆ.. ದೂರವಾಗುವುದೆಂದರೆ ಅಷ್ಟು ಸುಲಭವೇನಲ್ಲ. ಎಂದೋ ದಾರಿಯಲಿ ಸಿಕ್ಕವರು , ಬಸ್ಸಿನಲಿ ಪರಿಚಯವಾದವರು, ಯಾವುದೋ ಅಂಗಡಿಯವರು, ಒಟ್ಟಿಗೆ ಓದಿದವರು, ಪಾಠ ಕೇಳುವಾಗ ಅತ್ತಿತ್ತ ಸುಳಿಯುತ್ತಿರುವವರು ಎಲ್ಲವೂ ಒಂದಲ್ಲ ಒಂದು ದಿನ ನೆನಪಾಗುತ್ತದೆ..ನೆನಪೆಂದರೆ ವ್ಯಕ್ತಿಗಳೇ ಆಗಬೆಕೆಂದಿಲ್ಲ..ಅಂದು ಕೊಂಡುಕೊಂಡ ಹೊಸ ಬಳೆಯೂ ಇಂದು ನೆನಪಾಗಬಹುದು ಅದೆಷ್ಟು ಚೆನ್ನಾಗಿತ್ತು ಎಂದು..

ಕೆಲವೊಮ್ಮೆ ಬದುಕು ಎಲ್ಲವನ್ನೂ ಮುಚ್ಚುತ್ತದೆ.. ಅಂದುಕೊಂಡಿದ್ದೇನೋ ಆದರೆ ಆಗುವುದು ಬೆರೇ ಏನೋ ಆಗಿರುತ್ತದೆ ..ಆದರೆ ಕಟ್ಟಿಕೊಂಡ ಕನಸುಗಳು , ಭರವಸೆಯ ಆಲೋಚನೆಗಳು ಆ ದಿನ ಆ ಕನಸನ್ನು ಕಂಡಿದ್ದೇನಲ್ಲ ಎಂದು ನೆನಪಾಗಿ ಬಿಡುತ್ತೆ. ಎಲ್ಲಾ ಆ ನೆನಪುಗಳನ್ನು ಮತ್ತೊಮ್ಮೆ ಮಗದೊಮ್ಮೆ ಕೊಟ್ಟುಬಿಡು ಎಂದು ಪ್ರಾರ್ಥಿಸುವುದಷ್ಟೆ ನಮ್ಮ ಕೆಲಸ..

ಬರಹ: ಪದ್ಮಾ ಭಟ್
ಎಸ್.ಡಿ.ಎಂ ಕಾಲೇಜ್ ಉಜಿರೆ

0 comments:

Post a Comment