ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ: ಆದಿತ್ಯ ಭಟ್


ಕ್ರಿಕೆಟ್, ಸಿನಿಮಾ, ಪತ್ರಿಕೋದ್ಯಮ, ಸಂಗೀತ ಯಾವುದೇ ಕ್ಷೇತ್ರವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಅಲ್ಲೆಲ್ಲ 8-10 ವರ್ಷಕ್ಕೊಮ್ಮೆ ಎಲ್ಲರ ಗಮನ ತನ್ನತ್ತ ಸೆಳೆಯಬಲ್ಲ charismatic ವ್ಯಕ್ತಿ ಬಂದಿದ್ದಾರೆ. ಬಹುಶಃ ಏಕತಾನತೆಯನ್ನು ನೋಡಿ-ನೋಡಿ ದೇವರಿಗೆ ಬೇಸರವಾದಾಗ ಇಂತಹ ಬಿರುಗಾಳಿಗಳನ್ನು ಸೃಷ್ಠಿಸುತ್ತಾರೆ ದೇವರು! ಏಕತಾನತೆಯಿಂದ ಆ ಕ್ಷೇತ್ರಗಳೆ ಕಳೆಗುಂದಿದಾಗ ಅದಕ್ಕೆ ಹೊಸ ಹುರುಪು ತುಂಬಲು ಅಂಥವರು ಅತ್ಯಗತ್ಯ.

ಕ್ರಿಕೆಟ್ನಲ್ಲಿ ದ್ರಾವಿಡ್ ಬಂದ, ಅದಾಗಿ ಸುಮಾರು ವರ್ಷದ ನಂತರ ಧೋನಿ. ಪತ್ರಿಕೋದ್ಯಮದಲ್ಲಿ ಟಿ.ಎಸ್.ಆರ್, ಖಾದ್ರಿ ಶ್ಯಾಮಣ್ಣ, ವೈಯೆನ್ಕೆ, ಲಂಕೇಶ್ ಮುಂತಾದವರು ಇತ್ತೀಚೆಗೆ ವಿಶ್ವೇಶ್ವರ್ ಭಟ್. ಇವರೆಲ್ಲ ಪ್ರಶ್ನಾತೀತ ಶ್ರೇಷ್ಠರಲ್ಲ. ಆದರೆ ಏಕತಾನತೆಯನ್ನು ಮೆಟ್ಟಿ ನಿಂತು ಬಿರುಗಾಳಿ ಎಬ್ಬಿಸಿದವರು. ನಂತರ ಅವರ ಕ್ಷೇತ್ರಗಳಲ್ಲಿರುವವರಿಗೆ ಸ್ಪರ್ಧೆಯಲ್ಲಿ ಉಳಿಯಲು ಬಿರುಗಾಳಿ ಎಬ್ಬಿಸುವುದು ಅನಿವಾರ್ಯವಾಗುತ್ತದೆ. ಕೊನೆಯಲ್ಲಿ ಅವರ ಕ್ಷೇತ್ರವೇ ಏಕತಾನತೆಯಿಂದ ಹೊರಬಂದು ಚುರುಕಾಗುತ್ತದೆ.

ಎಡಪಂಥಿಯ ಅಥವಾ ಲೆಫ್ಟ್ (ಕಮ್ಯುನಿಸ್ಟ್ ಸಿದ್ಧಾಂತ) ಎನ್ನುವುದು ಜಗತ್ತನ್ನು ನೋಡುವ, ವಿಶ್ಲೇಷಣೆ ಮಾಡುವ ಒಂದು ದೃಷ್ಠಿ ಅಷ್ಟೆ. ಅದೊಂದು set of thinking ಹೊರತು ಅದೇ ಸತ್ಯವಲ್ಲ. ಅದಕ್ಕಾಗಿ ಅಂಥವರನ್ನು Marxist historians ಎನ್ನುತ್ತೇವೆ ಹೊರತು ಕೇವಲ Historians ಎಂದಾಗಲಿ real historians ಎಂದಾಗಲಿ ಹೇಳುವುದಿಲ್ಲ. ಆದರೆ ಭಟ್ರು ವಿಜಯ ಕರ್ನಾಟಕದ ಸಂಪಾದಕರಾಗುವ ಮೊದಲು ಪತ್ರಿಕೆಗಳಲ್ಲಿ ಎಡಪಂಥಿಯರು ಹೇಳಿದ್ದೆ ಅಂತಿಮವಾಗಿತ್ತು. ಬುದ್ಧಿಜೀವಿ ಎಂದು ಎಡಪಂಥಿಯರನ್ನು ಮಾತ್ರ ಕರೆಯಲಾಗುತ್ತಿತ್ತು.

ಬೈರಪ್ಪರಂತಹ ಶ್ರೇಷ್ಠ ವಿದ್ವಾಂಸರನ್ನು ಬುದ್ಧಿಜೀವಿಗಳು ಎನ್ನದೆ ಕೋಮುವಾದಿ ಎಂದೇ ಕರೆಯಲಾಗುತ್ತಿತ್ತು. ಭಟ್ರು ಸಂಪಾದಕರಾದ ನಂತರ ಪತ್ರಿಕೋದ್ಯಮದಲ್ಲಿ ಬಹಳ ದೊಡ್ಡ ಕ್ರಾಂತಿ ಆಯಿತು. ಅವರು ಬಲಪಂಥಿಯ ವಿಚಾರಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. ಪತ್ರಿಕೆಯನ್ನು ನಂ. 1 ಸ್ಥಾನಕ್ಕೆ ತಂದರು. ರಾಜ್ಯದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪತ್ರಿಕೆಯಾದ್ದರಿಂದ ಬಲಪಂಥಿಯ ವಿಚಾರಗಳು ಮನೆ-ಮನೆ ತಲುಪಿತು. ಎಡಪಂಥಿಯ ಕೃಪಾಪೋಷಿತ ಪತ್ರಿಕೆಗಳು ಹೇಳುತ್ತಿರುವುದು ಸತ್ಯವಲ್ಲ. ಅದು ಅವರ ದೃಷ್ಠಿ ಮಾತ್ರ ಎಂದು ಜನರಿಗೆ ಮನವರಿಕೆಯಾಯಿತು.

ಸ್ವಾತಂತ್ರ್ಯ ಹೋರಾಟ ಎಂದ ತಕ್ಷಣ ಗಾಂಧಿ-ನೆಹರು ಹೇಳುತ್ತಿದ್ದ ಜನರು ಗಾಂಧೀಜಿಯನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಭಗತ್ಸಿಂಗ್ ನೆಹರು ಸ್ಥಾನ ಪಡೆದರು. ಭಟ್ರು ಬಿರುಗಾಳಿ ಎಬ್ಬಿಸುವ ಮುಂಚೆ ಕೆಲವು ಸಂಘಟನೆಗಳು ಹಾಗೂ ಕೆಲವು ಜನರು ಮಾತ್ರ ಭಗತ್ಸಿಂಗ್ರನ್ನು ಹೀರೋ ಎಂದು ಪರಿಗಣಿಸಿದ್ದರು. ಭಟ್ರ ಪತ್ರಿಕೆ ಭ್ರಷ್ಟ ಬಿ.ಜೆ.ಪಿ. ಸರಕಾರದ ವಿರುದ್ಧವೂ ಧ್ವನಿ ಎತ್ತಿತ್ತು. ಭಟ್ರು ಬಲಪಂಥಿಯರಲ್ಲ ತಟಸ್ಥರು ಎಂದು ಜನರಿಗೆ ಅರಿವಾಯಿತು.

ಕೊಳಕು ರಾಜಕೀಯದ ಬಗ್ಗೆ ಎಷ್ಟೆ ಬರೆದರು ಭಟ್ರ ಸೂಕ್ಷ್ಮ ಮನಸ್ಸು ಸಾಯಲಿಲ್ಲ. ಯುದ್ಧದ ನಡುವೆ ಇದ್ದಾಗಲು ಅವರೊಮ್ಮೆ ಹಳೆ ಮನೆಯಲ್ಲಿ ಟಿವಿ ನೋಡುವಾಗ ತಲೆಯ ಎಣ್ಣೆ ಗೋಡೆಗಳನ್ನು ತಾಗಿರುತ್ತದೆ. ಹೊಸ ಮನೆಯಲ್ಲಿ ಅದೆಲ್ಲ ಸಿಗುವುದಿಲ್ಲ ಎಂದು ಬರೆದಿದ್ದರು! ಅದ್ಹೇಗೆ ಅಂತಹ ಸೂಕ್ಷ್ಮತೆ ಉಳಿಸಿಕೊಂಡಿದ್ದಾರೊ...

ಕರ್ನಾಟಕಕ್ಕೆ ಪರ್ಯಾಯ ವಿಚಾರಧಾರೆಯನ್ನುsecond option of thinking ಬಲುದೊಡ್ಡ ಪ್ರಮಾಣದಲ್ಲಿ ನೀಡಿದ ಭಟ್ರಿಗೆ ಗೌರವ ಡಾಕ್ಟರೇಟ್ ಇನ್ನೇನು ಸಿಗುತ್ತದೆ ಎನ್ನುವಾಗ sadist ಯಾರೋ ತಪ್ಪಿಸಿದರು. ಇರಲಿ ಮುಗಿಲೆತ್ತರಕ್ಕೆ ಬೆಳೆದ ಭಟ್ರಿಗೆ ಗೌ.ಡಾ ದಿಂದ ಆಗಬೇಕಾದದ್ದು ಏನಿಲ್ಲ.

ಭಯೋತ್ಪಾದಕ, ಅಪರಾಧಿ ಅಫ್ಜಲ್ ಗುರುಗೆ ಈಗ ಗಲ್ಲು ಶಿಕ್ಷೆಯಾಗಿದೆ. ಅವನನ್ನು ಇನ್ನೂ ಆರೋಪಿ ಎಂದು ಗೌರವಪೂರ್ವಕವಾಗಿ ಕರೆಯುವ ಎಡಬದಿಯ ಪತ್ರಕರ್ತರಿದ್ದಾರೆ. ಸುಪ್ರಿಂ ಕೋರ್ಟ್ ಗಲ್ಲು ನೀಡಿದರೂ ಅದು ಸರಿಯಲ್ಲ ಎಂದು ಪರೋಕ್ಷವಾಗಿ ಹೇಳುವ ಸಿ.ಎನ್.ಎನ್. - ಐ.ಪಿ.ಎನ್. ನಂತಹ ಚಾನೆಲ್ಗಳು ಇವೆ. ಇವರೆಲ್ಲ ಎಡಪಂಥಿಯ ಕೃಪಾಪೋಷಿತರು ಎಂದು ತೋರಿಸಿಕೊಟ್ಟವರೇ ಭಟ್ರು. ಇಲ್ಲದಿದ್ದರೆ ಅದೆಷ್ಟೊ ಜನ ಅಫ್ಜಲ್ ಮುಗ್ಧನಾಗಿದ್ದಂತೆ ಎಂದೇ ಹೇಳುತ್ತಿದ್ದರು. ಈಗ ಪೂಲನ್ದೇವಿ, ವೀರಪ್ಪನ್ ಬಗ್ಗೆ ಮಾತನಾಡುವುದಿಲ್ಲವೆ ಹಾಗೆ.
ಎಲ್ಲಾ ವಿವಾದಗಳ ನಡುವೆಯು ಭಟ್ರಿಗೊಂದು ಸಲಾಮ್ ಹೇಳಲೇಬೇಕು. ಏಕತಾನತೆಯಿಂದ ಬಳಲುತ್ತಿದ್ದ ಪತ್ರಿಕೋದ್ಯಮಕ್ಕೆ ಚಲನಶೀಲತೆ ತಂದಿದ್ದಕ್ಕಾಗಿ, ಪತ್ರಿಕೋದ್ಯಮವನ್ನು ಎಡಬದಿಯಿಂದ ಎಳೆದು ತಂದದ್ದಕ್ಕಾಗಿ.

0 comments:

Post a Comment