ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಧನ ಸಹಾಯ ನೀಡಿದ ಲಲಿತಾ ತಿಮ್ಮಯ್ಯ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವೇಣೂರು: ಶ್ರೀ ಸೂರ್ಯನಾರಾಯಣ ಕ್ಷೇತ್ರ , ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಅಂಗರಕರಿಯ ಎಂಬಲ್ಲಿ ಕಂಡು ಬಂದ ಅತ್ಯಂತ ಕಾರಣೀಕ, ಪ್ರಾಚೀನ, ಐತಿಹಾಸಿಕ ಶ್ರೀ ಸೂರ್ಯನಾರಾಯಣ ಕ್ಷೇತ್ರದ ಜೀಣರ್ೋದ್ಧಾರದ ಪೂರ್ವಭಾವಿಯಾಗಿ ಪ್ರತೀ ಶನಿವಾರ ನಡೆಸಿಕೊಂಡು ಬರುತ್ತಿರುವ ಶ್ರೀ ಮಹಾಗಣಪತಿ ಯಾಗದ ತೃತೀಯ ಉದ್ಯಾಪನಾ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಿಲ್ಲಂಬುಗುತ್ತು ಭೋಜರಾಜ ಹೆಗ್ಡೆ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಂದ ಮನಃಶಾಂತಿ ಪ್ರಾಪ್ತವಾಗುತ್ತದೆ. ದೇವರ ಸೇವೆಯಿಂದ ಉಂಟಾಗುವ ಅಪರಿಮಿತ ಆನಂದ ಬೇರೆ ಯಾವುದರಿಂದಲೂ ದೊರಕಲು ಅಸಾಧ್ಯ ಎಂದರು.
ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಧನ ಸಹಾಯ ನೀಡಿದ ಲಲಿತಾ ತಿಮ್ಮಯ್ಯ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕೈಮಾರು ಶ್ರೀ ಸುಬ್ರಹ್ಮಣ್ಯ ಉಡುಪರ ಪೌರೋಹಿತ್ಯದಲ್ಲಿ ಧಾಮರ್ಿಕ ವಿಧಿ ವಿಧಾನಗಳು ನಡೆದವು. ಅಜಿಲ ಸೀಮೆಯ ತಂತ್ರಿಗಳಾದ ಬ್ರಹ್ಮಶ್ರೀ ವೇ.ಮೂ. ಉದಯ ಪಾಂಗಣ್ಣಾಯ ಉಪಸ್ಥಿತರಿರುವರು.

0 comments:

Post a Comment