ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಮಿಯ್ಯಾರು: ಹೇಳುವುದು ಒಂದು...ಮಾಡುವುದು ಇನ್ನೊಂದು...ಇದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪಾಲಿಗಂತೂ ಅಕ್ಷರಶಃ ಸತ್ಯವಾದ ಮಾತು.


ಸೊಲ್ಲೆತ್ತಿದರೆ ಸರಕಾರದ ಸಹಕಾರವೇ ಕಾರ್ಕಳಕ್ಕೆ ಸಿಗುತ್ತಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಕಾರ್ಕಳದ ಶಾಸಕ ಗೋಪಾಲ ಭಂಡಾರಿಯವರು ತಮ್ಮ ಕ್ಷೇತ್ರದಲ್ಲಿ ಸರಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಅಥವಾ ಗೊಳ್ಳುತ್ತಿದೆ...? ಎಂಬುದರ ಬಗ್ಗೆ ಕಿಂಚಿತ್ತಾದರೂ ಗಮನ ಹರಿಸಿದರೆ ಉತ್ತಮವಾಗುತ್ತಿತ್ತು...

ಸರಕಾರದ ಹಣ ಅಕ್ಷರಶಃ ಇಲ್ಲಿ ಮಣ್ಣು ಪಾಲಾಗುತ್ತಿದೆ. ಲಕ್ಷ ಲಕ್ಷ ರುಪಾಯಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಹೆಸರಿನಲ್ಲಿ ಫಲಕ ಹಾಕಿ ಯೋಜನೆ ರೂಪಿಸುವ ಕಾರ್ಯಾರಂಭವಾದರೂ ಅನೇಕ ಪರಿಕರಗಳು ರಸ್ತೆ ಬದಿಯಲ್ಲಿ ಬಿದ್ದು ತುಕ್ಕು ಹಿಡಿಯುತ್ತಿದೆ. ಯೋಜನೆಯ ಅನುಷ್ಠಾನಕ್ಕೆ ಹಾಕಿದ್ದ ಕೆಸರು ಕಲ್ಲು ಕೆಸರೊಳಗೆ ಹೂತು ಹೋಗುವಂತಾಗಿದೆ.

ಹೌದು ಇಷ್ಟಕ್ಕೂ ಈ ಯೋಜನೆ ಯಾವುದು ಎಂಬ ಪ್ರಶ್ನೆ ನಿಮ್ಮ ಮುಂದೆ ಮೂಡದೇ ಇರಲಾರದು...
ಮಿಯಾರು ಪ್ರದೇಶದಲ್ಲಿ ಬೃಹದಾಕಾರದ ಪುರಾತನ ಕೆರೆಯೊಂದಿದೆ. ಇಡೀ ಈ ಭಾಗದಲ್ಲಿ ಜಲಾಶಯವನ್ನು ನಾಗರೀಕರಿಗೆ ಒದಗಿಸುವ ಈ ಕೆರೆ ಇಂದು ನಿಜಾರ್ಥದಲ್ಲಿ ಉಪಯೋಗ ಶೂನ್ಯವಾಗುವಂತಾಗಿದೆ. ಇದಕ್ಕೆ ಒಂದು ಕಾರಣ ಸರಕಾರದ ನಿರ್ಲಕ್ಷ್ಯವೂ ಹೌದು...

ಈ ಕೆರೆಯ ಅಭಿವೃದ್ಧಿಗೆ 10ಲಕ್ಷ ರುಪಾಯಿಯ ಹೊಸ ಯೋಜನೆಯೊಂದನ್ನು ರೂಪಿಸಲಾಯಿತು. ಕೆರೆಗೆ ಒಂದು ಕಿಂಡಿ ಅಣೆಕಟ್ಟು ನಿರ್ಮಿಸುವ ಕಾರ್ಯವೂ ನಡೆಯಿತು. ನಂತರ ಇತರ ಅಭಿವೃದ್ಧಿ ಕಾರ್ಯಯೋಜನೆ ಹಾಗೂ ಅಲ್ಲೇ ಮುಂಭಾಗದಲ್ಲಿ ಒಂದು ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಆದರೆ ಪಾರ್ಕ್ ನಲ್ಲಿ ಸಿಮೆಂಟ್ ಆಸನಗಳು, ಗೋಪುರಾಕೃತಿಗಳು ನಿರ್ಮಾಣಗೊಂಡಿವೆ. ಇದೀಗ ದನ, ಕರು, ಮೇಕೆ ಗಳ ವಿಶ್ರಾಂತಿಯ ತಾಣವಾಗಿ ಪರಿವರ್ತನೆಯಾಗಿದೆ. ರಸ್ತೆಯ ಅಂಚಿನಲ್ಲೇ ಈ ಪಾರ್ಕ್ ರಚಿಸಲಾಗಿದೆಯಾದರೂ ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲ. ಆವರಣಗೋಡೆ ನಿರ್ಮಾಣವಾಗಿಲ್ಲ. ಆವರಣ ನಿರ್ಮಾಣಕ್ಕಾಗಿ ತಂತಿ ಬೇಲಿಯ ಸುರಳಿಗಳು ತಂದು ರಸ್ತೆಬದಿಯಲ್ಲಿ ಹಾಕಲಾಗಿದೆಯಾದರೂ ಅದರ ನಿರ್ವಹಣೆ ಸಮರ್ಪಕವಾಗಿರದೆ ತುಕ್ಕು ಹಿಡಿಯಲಾರಂಭಿಸಿವೆ.
ಯಾರೊಬ್ಬರೂ ಕೇಳವವರಿಲ್ಲದೆ ಬೋರಲಾಗಿ ರಸ್ತೆ ಬದಿಯಲ್ಲಿ ಬಿದ್ದುಕೊಂಡಿವೆ.
ಕಾರ್ಕಳದ ಶಾಸಕ ಗೋಪಾಲ ಭಂಡಾರಿಯವರ ದಿವ್ಯ ಹಸ್ತದಿಂದ ಶಂಕುಸ್ಥಾಪನೆಯ ಯೋಗ ಪಡೆದುಕೊಂಡ ಈ ಯೋಜನೆಯ ಬಗ್ಗೆ ಪಾಪ ಶಾಸಕರಿಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಹೋಯಿತೇ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಇಲ್ಲಿ ಹೂಳು ತುಂಬುವುದು ಉಚಿತ ಯೋಜನೆ!
ಗುಡ್ಡದ ಮಣ್ಣು ಕೆರೆಗೆ!
ರಸ್ತೆಯ ಇನ್ನೊಂದು ಭಾಗ ಎತ್ತರದ ಗುಡ್ಡೆ. ಅದೊಂದು ಖಾಸಗೀ ಜಾಗ. ಆ ಜಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಗುಡ್ಡೆದ ಗರ್ಭ ಬಗೆದಿದ್ದಾರೆ. ಆ ಮಣ್ಣು ಅಲ್ಲಿಂದ ಚರಂಡಿಯ ಮೂಲಕ ನೇರ ಕೆರೆಗೆ ಬಂದು ಬೀಳುತ್ತಿದೆ. ಮಳೆಗಾಲದಲ್ಲಿ ಕೆಸರು ನೀರಿನಿಂದ ಕೂಡಿದ ಮಣ್ಣು ಈ ಕೆರೆಯೊಳಗೆ ಸೇರಿ ಮತ್ತೆ ಸಮಸ್ಯೆ ಉದ್ಭವಿಸುವಂತಾಗಿದೆ. ಮೊದಲೇ ಹೂಳು ತೆಗೆಯದೆ ತುಂಬಿ ತುಳುಕುವ ಈ ಕೆರೆಗೆ ಇದೀಗ ಮತ್ತಷ್ಟು ಹೂಳು ತುಂಬಿಸುವ ಯಶಸ್ವೀ ಕಾರ್ಯವೂ ನಡೆಯುತ್ತಿದೆ!
ಯಾವ ಪುರುಷಾರ್ತಕ್ಕೆ ಈ ಪಾರ್ಕ್ ?
ಅಷ್ಟಕ್ಕೂ ಯಾವ ಪುರುಷಾರ್ತಕ್ಕೆ ಈ ಪಾರ್ಕ್ ಇಲ್ಲಿ ರಚಿಸಲಾಗಿದೆ ಎಂಬುದು ಪ್ರಜ್ಞಾವಂತರ ಪ್ರಶ್ನೆ. ರಸ್ತೆ ಬದಿಯಲ್ಲಿ ಆ ರೀತಿಯಲ್ಲಿ ಪಾರ್ಕ್ ರಚಿಸಿದ್ದರಿಂದ ಯಾವೊಂದು ಪ್ರಯೋಜನವೂ ಇಲ್ಲ. ಅದಕ್ಕೆ ಬದಲಾಗಿ ಕೆರೆಯ ಇನ್ನೊಂದು ಪಾಶ್ರ್ವದಲ್ಲಿ ಪಾರ್ಕ್ ರಚಿಸಿದ್ದರೆ ಏನಾದರೊಂದು ಪ್ರಯೋಜನವಾದರೂ ಆಗುತ್ತಿತ್ತು. ಅಷ್ಟಕ್ಕೂ ಇದರ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ? ಜನತೆಗೆ ಇದರ ಪ್ರಯೋಜನ ಇನ್ಯಾವ ದೊರೆಯುತ್ತದೆ ಎಂಬ ಪ್ರಶ್ನೆ ನಾಗರೀಕರದ್ದು.

0 comments:

Post a Comment