ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಸುಮಾರು ಆರು ತಿಂಗಳ ಹಿಂದೆ ಅಪಘಾತದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯೋರ್ವನ ಕುಟುಂಬ ನಿಮ್ಮನ್ನು ಸಹಾಯಕ್ಕೆಂದು ಸಂಪರ್ಕಿಸಿತು. ನಮ್ಮ ಪಕ್ಷಕ್ಕೆ (ಜೆ.ಡಿ.ಎಸ್) ಸೇರ್ಪಡೆಗೊಂಡರೆ ಸಹಕರಿಸುವದಾಗಿ ಬರವಸೆ ನೀಡಿ ಗಾಯಾಳುವಿನ ತಾಯಿಯನ್ನು ಬಲವಂತವಾಗಿ ನಿಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಸಿ ಫೋಟೋದೊಂದಿಗೆ ಪ್ರಚಾರ ಪಡೆದಿರಿ. ನಂತರ ಆ ಕುಟುಂಬಕ್ಕೆ ನೀವು ನೀಡಿದ ಸಹಕಾರವೇನು. ಉತ್ತರವಿದೆಯಾ? ನಿಮಗೆಲ್ಲಿ ಅರ್ಥವಾಗಬೇಕು ಒಡಲಾಳದ ನೋವು? ತನ್ನ ಮಗುವಿನ ಜೀವ ಉಳಿಸಲು ದಿನಪೂರ್ತಿ ನಮ್ಮ ಪಕ್ಷದ ಚಟುವಟಿಕೆಗೆ ಭಾಗವಹಿಸಿದ ಮಹಿಳೆಗೆ ನಿಮ್ಮಿಂದ ದೊರೆತ ಸಹಾಯವೆಂದರೆ ಒಂದು ಹೊತ್ತಿಗೂ ಆಹಾರವಾಗದ ಬೇಕರಿಯ ತಿನಿಸು ಅಷ್ಟೆ! ನಿಮಗೆ ಬೇಕಾಗಿದ್ದು ಪಕ್ಷಕ್ಕೆ ಹೊಸದೊಂದು ಸೇರ್ಪಡೆ ಮಾತ್ರ.!


ಕಣ್ಣೆದುರಿಗೆ ಸಿಕ್ಕರೂ ಮಾತಿಗೆ ನಿಲುಕುವದಿಲ್ಲವಲ್ಲ..? ಮಾತನಾಡಿಸಿದರೂ ದರ್ಪವನ್ನು ಇಳಿಸುವದಿಲ್ಲವಲ್ಲ..? ಫೋನ್ ಮಾಡಿದರೂ ನೋಡುವದಿಲ್ಲವಲ್ಲ..? ಪತ್ರವನ್ನು ಓದಿದ ನಂತರವಾದರೂ ಶ್ರೀ ಸಾಮಾನ್ಯ ಮತದಾರನೋರ್ವ ತಮಗೆ ದರ್ಶನವಾಗಲಿ ಎಂಬ ಆಶಯದಿಂದ ಪತ್ರ ಬರೆಯುತ್ತಿದ್ದೇನೆ...

ಚುಣಾವಣೆಯ ದಿನ ಹತ್ತಿರವಾಗುತ್ತಲಿದೆ. ತಾವು ಸ್ಪರ್ಥಿಸಲಿದ್ದಿರಿ. ಯಾರ ಮತವನ್ನು ಹೇಗೆ ದೋಚಬೇಕೆಂದು ಯೋಚನೆಯಲ್ಲಿದ್ದಿರಿ. ಯಾವ ಜಾತಿಯ ವಿರುದ್ದ ಇನ್ಯಾವ ಜಾತಿಯವನನ್ನು ಎತ್ತಿಕಟ್ಟಿದರೆ ಮತ ಲಪಟಾಯಿಸಬಹುದೆಂದು ಪ್ರಯೋಗಕ್ಕಿಳಿದಿದ್ದಿರಿ. ಅದಕ್ಕೂ ಮುನ್ನ ಚುಣಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತಾವು ನೀಡಿದ ಬರವಸೆಗಳ ಸಾಲು ಎರಡರಷ್ಟಿದೆ. ತಮ್ಮ ಬರವಸೆಯನ್ನೆ ನಂಬಿದ ಅನೇಕರು ತಮ್ಮ ದೈನಿಂದಿನ ಕೆಲಸ ಕಾರ್ಯವನ್ನೆಲ್ಲ ತೊರೆದು ದಿನವಿಡಿ ನಿಮ್ಮದೇ ಹುಡುಕಾಟದಲ್ಲಿ ಸಮಯ ಹಾಳುಮಾಡಿಕೊಳ್ಳುತ್ತಲಿದ್ದಾರೆ. ಅವರತ್ತಲೂ ಒಮ್ಮೆ ದೃಷ್ಟಿ ಹಾಯಿಸಿ...

ವಿದ್ಯಾಬ್ಯಾಸಕ್ಕೆ ಸಹಾಯ ಮಾಡುತ್ತೇನೆಂದು, ದೇವಸ್ಥಾನ ಕಟ್ಟಿಸಿಕೊಡುತ್ತೇನೆಂದು, ನಿರುದ್ಯೋಗಿಗಳಿಗೆ ಕಾರ್ಖಾನೆ ಸ್ಥಾಪಿಸಿ ಉದ್ಯೋಗ ನೀಡುತ್ತೇನೆಂದು, ಉಚಿತವಾಗಿ ಜೆ.ಸಿ.ಬಿ ಕೆಲಸ ಮಾಡಿಸಿಕೊಡುತ್ತೇನೆಂದು, ನೊಂದವರಿಗೆ ಸಹಕಾರ ನೀಡುತ್ತೇನೆಂದು..., ಹೀಗೆ ಪಟ್ಟಿ ಮಾಡುತ್ತ ಹೋದರೆ ಲೆಕ್ಕಕ್ಕೆ ನಿಲುಕದ ಸಹಸ್ರ ಸಹಸ್ರ ಬರವಸೆಗಳು ಬಾಕಿ ಇವೆ.
ನಿಮ್ಮ ಬರವಸೆಯನ್ನೆ ನಂಬಿ ನಿಮ್ಮದೇ ಕೆಲಸಗಳನ್ನು ಪೂರೈಸಿದ ನಂತರ ಬಿಲ್ ಪಾಸಾಗದೇ ನಿಮ್ಮ ಹುಡುಕಾಟದಲ್ಲಿಯೇ ದಿನ ಕಳೆಯುತ್ತಿರುವವರೇನು ಕಡಿಮೆಯೇನಿಲ್ಲ. ನಂತರ ನಿಮ್ಮ ಸಹವಾಸವನ್ನೆ ತೊರೆದು ತೆರೆಮರೆಯಲ್ಲಿಯೇ ಹಿಡಿಶಾಪ ಹಾಕುವವರ ಬಗ್ಗೆಯೂ ತಮಗೆ ಅರಿವಿರಲಿಕ್ಕಿರಲಿಲ್ಲ. ನಿಮಗೆ ನೆನಪಿರಲಿಕ್ಕಿರಲಿಲ್ಲ, ಆದರೆ ನಿಮ್ಮ ಸ್ವಾರ್ಥಕ್ಕೆ ಬಲಿಯಾದ ಮುಗ್ದ ಜೀವಗಳ ಘಟನೆಗಳನ್ನು ನೆನಪಿಸುತ್ತೇನೆ.ಇದು ಒಂದು ಘಟನೆ ಆದರೆ ತೆರೆಮರೆಯಲ್ಲಿ ಇತರರನ್ನು ಬಳಸಿಕೊಳ್ಳುವ ಕಂಡು ಕಾಣದಂತಿರುವ ಘಟನೆಗಳು ನಿಮ್ಮಲ್ಲಿ ಸರ್ವೇ ಸಾಮಾನ್ಯ. ಅದನ್ನು ಅನುಭವಿಸಿ ಸಹಿಸಿಕೊಂಡವರು ನಿಮ್ಮ ಪಕ್ಷದಲ್ಲಿಯೇ ಇದ್ದಾರೆ. ಹೇಳಿಕೊಳ್ಳಲಾಗದ ವೇದನೆಯಲ್ಲಿದ್ದಾರೆ. ನೀವು ದೊಡ್ಡವರೇ ಆಗಿರಬಹುದು, ದುಡ್ಡಿರುವವರೇ ಆಗಿರಬಹುದು. ಆದರೆ ಇತರರನ್ನು ಸಣ್ಣವರೆಂದು ಯಾಕೆ ಅಥರ್ೈಸುತ್ತಿರೋ ಅರಿವಾಗುತ್ತಿಲ್ಲ. ನಿಮ್ಮಲ್ಲಿ ಸಹಾಯ ಯಾಚಿಸಿ ಬರುವ ಯಾರೂ ಏನು ಇಲ್ಲದೇ, ಯಾವದೇ ಕೆಲಸವಿಲ್ಲದೇ ಬರುವದಿಲ್ಲ ಎನ್ನುವದನ್ನು ನೆನಪಿಡಿ. ಅವರನ್ನು ಕೀಳು ಭಾವದಿಂದ ನೋಡುವ ಕಾಯಕ ಮರೆತುಬಿಡಿ. ಚುಣಾವಣೆಗೂ ಮುನ್ನವೇ ಅಪರೂಪದ ಅತಿಥಿಯಾದವರು ದುರದೃಷ್ಟಕ್ಕೆ ವಿಧಾನಸಭೆ ಪ್ರವೇಶಿಸಿದರೆ ನಂತರ ಕೈಗೆ ನಿಲುಕುವವರೆಂದು ನಂಬುವದಾದರೂ ಹೇಗೆ? ನಿಮ್ಮ ಪಕ್ಷದ ಮುಖಂಡರೆನಿಸಿಕೊಂಡ ನಿಮ್ಮ ಹಿಂಬಾಲಕರನ್ನು ಹೊರತು ಪಡಿಸಿ ಸಾಮಾನ್ಯ ಕಾರ್ಯಕರ್ತನನ್ನು ಒಮ್ಮೆ ಮಾತನಾಡಿಸಿ..ಅರ್ಥವಾದಿತು ಅವರ ಬದುಕು..
***
ಇನ್ನು ಬರಹ ಓದಿ ಹಾಗೇ ಬರೆದನಾ ಅವನು..? ಚುಣಾವಣೆ ಮುಗಿಯಲಿ, ಆಮೇಲೆ ವಿಚಾರಿಸಿಕೊಳ್ಳುತ್ತೇನೆ. ನಾಳೆ ಸಿಗಲಿ ನೋಡಿಕೊಳುತ್ತೇನೆ ಎನ್ನುವ ಮಾತುಗಳೆಲ್ಲ ಹಳಸಿ ಹೋಗಿವೆ. ಬೇರೆ ಯಾವದಾದರೂ ಹೊಸ ಜೋಕ್ ಇದ್ದರೆ ಹೇಳಿ,ಕೇಳೋಣ.

ಯಾರನ್ನೋ ಸೆದೆಬಡೆಯಲು ಇನ್ಯಾರನ್ನೋ ಖರಿದಿಸಿ, ಮತ್ತಾವದೋ ಸಂಪಾದಕನಿಗೆ ಹಲ್ಲೆ ಮಾಡಿ ಹೆದರಿಸುವ ತಂತ್ರಗಳಿಗನ್ನು ಇಲ್ಲಿಗೆ ಕೊನೆಗಾಣಿಸಿ. ನೀವು ಸರಿಯಾಗಿದ್ದರೇ ಯಾರ ಅಪ ಪ್ರಚಾರಕ್ಕೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ವಾಸ್ತವವನ್ನು ಅಪಪ್ರಚಾರ ಎನ್ನುವ ಬದಲು ಬಿಚ್ಚುಮಾತು ಎಂದು ಪರಿಗಣಿಸಿ,ನೋಡುವ ದೃಷ್ಟಿಯಾದರೂ ಬದಲಾದಿತು. ರಾಜಕಾರಣಿಯಾಗುವ ಮೊದಲು ಮನುಷ್ಯರಾಗಿ. ಬೇರೆಯವರ ಮಾತು ನಂಬುವ ಬದಲು ಸ್ವಂತಂತ್ರ್ಯವಾಗಿ ಯೋಚಿಸುವ ಶಕ್ತಿ ಬೆಳಸಿಕೊಳ್ಳಿ.

ಕೊನೆ ಮಾತು:
ಹೊಸ ಕಾರ್ಯಕರ್ತರ ಸೇರ್ಪಡೆಗಿಂತ ಮೊದಲು ಪಕ್ಷದಲ್ಲಿ ಈಗಿರುವ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಬರವಸೆ ನೀಡುವದನ್ನು ಕಡಿಮೆ ಮಾಡಿ, ನೀಡಿದ ಆಶ್ವಾಸನೆಗಳನ್ನು ಉಳಿಸಿಕೊಳ್ಳಿ, ನೊಂದ ಜೀವಕ್ಕೆ ಸಾಂತ್ವಾನವಾಗಿ, ಹಣದಿಂದಲೇ ಎಲ್ಲರನ್ನು ಕೊಳ್ಳಬಹುದೆಂಬ ಭ್ರಮೆಯಿಂದ ಹೊರಬನ್ನಿ, ಬಾಕಿಯಿರುವ ಬಿಲ್ಗಳನ್ನು ಪಾವತಿಸಿ. ವಾಸ್ತವವನ್ನು ಒಪ್ಪಿಕೊಳ್ಳಿ, ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಅವರನ್ನು ಇವರ ಮೇಲೆ, ಇವರನ್ನು ಅವರ ಮೇಲೆ ಎತ್ತಿ ಕಟ್ಟುವ ನೀಚ ರಾಜಕಾರಣವನ್ನು ಬದಿಗೊತ್ತಿ. ನಿಮ್ಮ ಸುತ್ತಲು ತುಂಬಿ ತುಳುಕಾಡುತ್ತಿರುವ ಹೊಗಳುಬಟ್ಟರನ್ನು ದೂರತಳ್ಳಿ. ನಂಬಿಕೆ,ಪ್ರಾಮಾಣಿಕತೆಯಿದ್ದರೆ ನ್ಯಾಯಯುತವಾಗಿ ಚುಣಾವಣೆ ಎದುರಿಸಿ.. ಬೆಸ್ಟ ಆಫ್ ಲಕ್...

> ಅಚ್ಯುತಕುಮಾರ

0 comments:

Post a Comment