ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:01 PM

ಏರಿತು ಬಿಸಿಲ ಝಳ...

Posted by ekanasu


ಬೆಳ್ತಂಗಡಿ/ಮಂಗಳೂರು/ಬೆಂಗಳೂರು:ಸೆಖೆ...ಸೆಖೆ...ಎಷ್ಟು ನೀರು ಕುಡಿದರೂ ಸಾಕಾಗಲ್ಲಪ್ಪಾ...ಏನ್ ಬಿಸಿ ಇದು...ತಾಳೋದೇ ಕಷ್ಟ. ಈ ಮಾತು ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಕೇಳಿಬರಲಾರಂಭಿಸಿದೆ. ನನ್ನ ಜೀವಮಾನದಲ್ಲಿ ಇಂತಹ ಸುಡುಬಿಸಿಲು ತಾಪಮಾನ ನೋಡಿಯೇ ಇಲ್ಲ...ಎಂಬುದು ಬಹಳ ಜನಗಳ ಮಾತು.ಇತ್ತೀಚೆನ ದಿನಗಳಲ್ಲಂತೂ ಪರಿಸರದಲ್ಲಿ ತೀವ್ರ ಬದಲಾವಣೆ ಕಂಡು ಬರಲಾರಂಭಿಸಿದೆ. ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್ ಕಟ್ಟಡಗಳು ದಿನ ದಿನಕ್ಕೂ ತಲೆಯೆತ್ತಲಾರಂಭಿಸಿವೆ. ವಾಹನ ದಟ್ಟಣೆಯೂ ಹಳ್ಳಿ/ಪೇಟೆಗಳಲ್ಲಿ ಏರತೊಡಗಿವೆ. ಇವೆಲ್ಲದರ ಪರಿಣಾಮ ಪ್ರಕೃತಿಯ ಮೇಲೆ ಬೀರುತ್ತಿದೆ ;ಹೀಗಾಗಿ ವಾತಾವರಣದಲ್ಲಿ ಏರುಪೇರು.


ರಾಜಧಾನಿಯಲ್ಲಿ ಎರಡು ರೀತಿಯ "ಬಿಸಿ"
ಒಂದೆಡೆ ಚುನಾವಣಾ ಕಾವು. ಅದನ್ನೂ ಮೀರಿಸುವಂತೆ ಸೆಖೆ. ಅಂತೂ ಎರಡೆರಡು ಕಾವು ಒಟ್ಟಿಗೇ ಬಂದು ಜನ ದಿಕ್ಕೆಟ್ಟು ಹೋಗಿದ್ದಾರೆ. ಒಟ್ಟಾರೆಯಾಗಿ ಸೆಖೆಯ ತೀವ್ರತೆ ಜನಜೀವನದಲ್ಲಿ ಏರುಪೇರು ಉಂಟಾಗಿದೆ. ಇದೀಗ ಮಾರ್ಚ್ ತಿಂಗಳು ಕೊನೆಗೊಳ್ಳುತ್ತಿದೆ. ಇನ್ನು ಏಪ್ರಿಲ್ , ಮೇ ತಿಂಗಳಲ್ಲಿ ಕಾಲ ಕಳೆಯುವುದು ಹೇಗಪ್ಪಾ ಎಂಬ ಚಿಂತೆ ಜನತೆಯನ್ನಾವರಿಸಿದೆ.

ಕಾವೇರುತ್ತಿದೆ
2005ರಲ್ಲಿ ಬಿಸಿಲ ಧಗೆ ದಿನದಿನಕ್ಕೆ ಏರುತ್ತಾ ಸಾಗಿ 37ಡಿಗ್ರಿಯನ್ನು ದಾಟಿ ದಾಖಲೆ ಬರೆದಿತ್ತು. ಇದೀಗ ಆ ದಾಖಲೆಯನ್ನು ಹಿಂದಿಕ್ಕುವಂತೆ ಈ ಬಾರಿ ಬಿಸಿಲ ಝಳ ಮತ್ತಷ್ಟು ಏರ ತೊಡಗಿದೆ. ಕರಾವಳಿಯಲ್ಲೂ ತೀವ್ರ ರೀತಿಯ ಬಿಸಿಲು ಕಾಡತೊಡಗಿದೆ. ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ತಾಪಮಾನದ ಏರಿಕೆ ಕಾಣಲಿದೆ ಎಂಬುದು ಹವಾಮಾನ ಇಲಾಖೆಯ ಅಭಿಪ್ರಾಯ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ತಾಪಮಾನದ ಪ್ರಮಾಣ 40 ಡಿಗ್ರಿಗೆ ಏರುವುದರಲ್ಲಿ ಸಂದೇಹವೇ ಇಲ್ಲ.

0 comments:

Post a Comment