ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಗೆಳೆಯರೇ/ಹಿತೈಷಿಗಳೇ/ಬಂಧುಗಳೇ/ಮಾಧ್ಯಮ ಮಿತ್ರರೇ
ಎಲ್ಲರಿಗೂ ನಮಸ್ಕಾರ.
2.2.2013ರಂದು ಕರ್ನಾಟಕ ನಾಟಕ ಅಕಾಡೆಮಿ(ಕನ್ನಡ ಭವನ) ಸಭಾಂಗಣದಲ್ಲಿ ಬೆಂಗಳೂರಿನ ಪೇಜ್ ವರ್ಲ್ಡ್ ಇಂಡಿಯಾ ಸಹಯೋಗದೊಡನೆ ನಡೆದ ಯಾಜಿ ಪ್ರಕಾಶನದ ಉದ್ಘಾಟನೆ ಮತ್ತು ಪ್ರಥಮ ಐದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರು ಯಾಜಿ ಪ್ರಕಾಶನವನ್ನು ಉದ್ಘಾಟನೆ ಮಾಡಿ ಐದು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ನಮ್ಮನ್ನು ಹರಸಿದರು. ಡಾ. ಮುಡ್ನಾಕೂಡು ಚಿನ್ನಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪುಸ್ತಕಗಳ ಕುರಿತು ಡಾ. ಕೆ.ಪಿ.ಭಟ್, ಶ್ರೀ ಮಾವಳ್ಳಿ ಶಂಕರ್, ಡಾ. ಶ್ರೀಧರ್ ಪುತ್ತೂರು ಅವರು ಮಾತನಾಡಿದರು. ಯಾಜಿ ಪ್ರಕಾಶನದ ವತಿಯಿಂದ ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತವನ್ನು ಶ್ರೀಮತಿ ಸವಿತಾ ಯಾಜಿ ಅವರು ನಡೆಸಿಕೊಟ್ಟರು. ಕುಮಾರಿ ಭೂಮಿಕಾ ಯಾಜಿ ಸ್ವಾಗತ ಗೀತೆ ಹಾಡಿದಳು. ಕೊನೆಗೆ ಲೇಖಕರನ್ನು ಸನ್ಮಾನಿಸಲಾಯಿತು. ಪೇಜ್ ವರ್ಲ್ಡ್ ಇಂಡಿಯಾದ ಶ್ರೀಮತಿ ಛಾಯಾ ಶ್ರೀನಿವಾಸ್ ಅವರು ಕಾರ್ಯಕ್ರಮಕ್ಕೆ ಬಂದ ಎಲ್ಲ ಅತಿಥಿ ಅಭ್ಯಾಗತರನ್ನು ವಂದಿಸಿದರು. ಶ್ರೀ ಕೆ.ಎಲ್.ರಾಜಶೇಖರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯ ಅವರು ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮಕ್ಕೆ ಬಂದು ನಮ್ಮನ್ನು ಹರಸಿದ, ದೂರದಿಂದಲೇ ಅಭಿನಂದಿಸಿದ ಗೆಳೆಯರಿಗೆ/ಹಿತೈಷಿಗಳಿಗೆ ವಂದನೆಗಳು.
ಮಾಧ್ಯಮ ಮಿತ್ರರು ಸಹಕರಿಸಿ ತಮ್ಮ ಪತ್ರಿಕೆಗಳಲ್ಲಿ ಕಾರ್ಯಕ್ರಮದ ದಿನ ಮತ್ತು ನಂತರದ ದಿನಗಳಲ್ಲಿ ಸಚಿತ್ರ ವರದಿಯನ್ನು ಪ್ರಕಟಿಸಿದ್ದಾರೆ. ಅವರಿಗೂ ಅವರ ಬಳಗಕ್ಕೂ ವಂದನೆಗಳು. ಹಾಗೆಯೇ, ಕಾರ್ಯಕ್ರಮ ಆಯೋಜಿಸಿದ ಬೆಂಗಳೂರಿನ ಪೇಜ್ ವರ್ಲ್ಡ್ ಇಂಡಿಯಾ, ಕಾಕಾಲ್ ಕೈರುಚಿ, ಹೆಗ್ಗೋಡಿನ ಕಾಕಾಲ್ ಫುಡ್ ಇಂಡಸ್ಟ್ರಿಸ್ನ ಎಲ್ಲ ಬಳಗಕ್ಕೂ ವಂದನೆಗಳು.
ಪುಸ್ತಕ ಪ್ರಕಟಿಸಬೇಕೆಂದು ತೀರ್ಮಾನಿಸಿದಾಗ ಅದರ ಮುಖಪುಟ ವಿನ್ಯಾಸಕ್ಕಾಗಿ ಬೆಂಗಳೂರಿನ ಯು.ಟಿ.ಸುರೇಶ್ ಅವರನ್ನು ಕೇಳಿದೆವು. ನಮ್ಮ ಒತ್ತಾಯಕ್ಕೆ ಬಿಡುವಿಲ್ಲದಿದ್ದರೂ ಬಿಡುವು ಮಾಡಿಕೊಂಡು ವಿನ್ನಾಸಗೊಳಿಸಿದ್ದಾರೆ ಅವರಿಗೂ, ನಮ್ಮ ಕಿರಿಕಿರಿಯನ್ನು ಮನ್ನಿಸಿ, ಅಚ್ಚುಕಟ್ಟಾಗಿ ಮುದ್ರಿಸಿ ಕೊಟ್ಟಿದ್ದು ಬೆಂಗಳೂರಿನ ಇಳಾ ಮುದ್ರಣದ ಗುರುಮೂರ್ತಿ ಮತ್ತು ಬಳಗ ಅವರಿಗೂ ಯಾಜಿ ಪ್ರಕಾಶನದ ಪರವಾಗಿ ವಂದನೆಗಳು.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾಜಿ ಪ್ರಕಾಶನದ ಏಳ್ಗೆಗೆ ಹಲವಾರು ಗೆಳೆಯರು/ಹಿತೈಷಿಗಳು/ಮಾರ್ಗದರ್ಶನ ನೀಡುತ್ತಾ ಎಲೆಮರೆಯ ಕಾಯಿಯಂತೆ ಇದ್ದಾರೆ. ಅವರನ್ನು ಈ ಹೊತ್ತಿನಲ್ಲಿ ನೆನಪಿಸಿಕೊಳ್ಳುವುದು ಯಾಜಿ ಪ್ರಕಾಶನದ ಕರ್ತವ್ಯ. ಈ ಎಲ್ಲ ಮಿತ್ರರಿಗೆ ವಂದನೆಗಳು. ಈಗ ನಾವು ಅಕ್ಷರಲೋಕದಲ್ಲಿ ಅಂಬೆಗಾಲಿಕ್ಕುತ್ತಿದ್ದೇವೆ. ಸಹೃದಯ ಓದುಗಮಿತ್ರರು ಸಹಕರಿಸಬೇಕೆಂದು ಈ ಮೂಲಕ ಕೋರಿಕೆ.
ವಂದನೆಗಳು.
ಹಂಪಿಯಾಜಿ (9449922800)


0 comments:

Post a Comment