ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನಿಬಿಢವಾಗಿ ಬೆಳೆದು ನಿಂತ ಸಸ್ಯ ವೈವಿಧ್ಯ... ಕರ್ರಗಿನ ರಸ್ತೆಯ ಇಕ್ಕೆಡೆಗಳಲ್ಲಿ ಧೈತ್ಯಾಕಾರದ ವೃಕ್ಷ ಸಂಕುಲ... ಬೆಳಕು ಹರಿದರೂ ಇನ್ನೂ ಚಳಿ...ಚಳಿ... ತಣ್ಣನೆಯ ಕುಳಿರ್ಗಾಳಿ... ಔಷಧೀಯ ಸಸ್ಯಗಳೊಳಗೆ ಹಾದು ಬಂದು ಮೈ ಸೋಕುವ ಪರಿ... ಟಾರು ರಸ್ತೆಯಲ್ಲೇ ಮೆಟ್ಟು ಮೆಟ್ಟಿಗೆ ಕಾಣ ಸಿಗುವ ಕಾಡಾನೆಗಳ ಲದ್ದಿ!...ಅರ್ಥಾತ್ ಕಾಡಾನೆಗಳ ಸವಾರಿ ಕ್ಷೇತ್ರ!. ಸುತ್ತಲೂ ಹಸಿರು ಬೆಟ್ಟ... ಕಾಡು... ಛಂಗನೆ ನೆಗೆದು ಓಡುವ ಜಿಂಕೆಗಳ ಹಿಂಡು... ಪಾಂಡಾ ಮೃಗ, ಕರಡಿ, ಕೆಂಚಳಿಲು...ಕಾಡು ಕೋಳಿ...ನರಿ... ವಿವಿಧ ಪ್ರಾಣಿ ಪ್ರಬೇಧ... ಅದೊಂದು ನೈಸರ್ಗಿಕ ಕಾಡು... ಆ ಕಾಡಿನೊಳಗೇ ಕಾಡಗರ್ಭ ಸೀಳಿ ಸಾಗುವ ಡಾಂಬರು ರಸ್ತೆ...


ಹೌದು ...ಇದು ಕೇರಳ - ಕರ್ನಾಟಕ - ತಮಿಳ್ನಾಡು ರಾಜ್ಯಗಳ ಗಡಿಯೆಂದೇ ಕರೆದರೆ ತಪ್ಪಾಗಲಾರದು. ವಯನಾಡು ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ ತಿರುನೆಲ್ಲಿ. ನಾಗರಹೊಳೆ ಅಭಯಾರಣ್ಯ, ಮಲೆಮಹದೇಶ್ವರ ಬೆಟ್ಟಕ್ಕೆ ಸನಿಹದಲ್ಲೇ ಇದೆ. ಅದೊಂದು ಸುಂದರ ತಾಣ. ಇಲ್ಲಿ ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನವೂ ಇದೆ.

ಬೆಟ್ಟಗಳ ಸಾಲಿನ ನಡುವಿನ ಕಣಿವೆಯಲ್ಲಿ ದಿಣ್ಣೆಯ ಮೇಲೆ ನಿಂತ ಮಹಾವಿಷ್ಣು ದೇಗುಲ ಅತ್ಯಂತ ಪುರಾತನವೂ, ಕೇರಳದ ಪ್ರಾಮುಖ್ಯ ದೇಗುಲವಾಗಿಯೂ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನಿಂದ ಮೈಸೂರು, ಹುಣಸೂರು, ನಾಗರಹೊಳೆ, ಕುಟ್ಟ ಮಾರ್ಗವಾಗಿ ಸುಮಾರು 250 ಕಿಲೋಮೀಟರ್ ದೂರದಲ್ಲಿ ಈ ದೇಗುಲವಿದೆ.
ತಿರುನೆಲ್ಲಿಯ ಇನ್ನೊಂದು ವೈಶಿಷ್ಟ್ಯವೇ ವೆಳ್ಳನ್ ವೈದ್ಯರ್!

ಹೌದು ಅನೇಕ ಜನರಿಗೆ ಪುನರ್ಜನ್ಮ ಒದಗಿಸಿಕೊಟ್ಟ ಅದ್ಭುತ ಶಕ್ತಿಯ ಆದಿವಾಸಿ ವೈದ್ಯ. ಕ್ಯಾನ್ಸರ್, ಪೈಲ್ಸ್, ಕಿಡ್ನಿ, ಚರ್ಮವ್ಯಾಧಿ, ದೇಹದ ತೊಂದರೆ ಹೀಗೆ ಹಲವು ರೋಗಗಳಿಗೆ ಇವರಲ್ಲಿ ಔಷಧಿಗಳಿವೆ. ಆದಿವಾಸಿ ವೈದ್ಯ ಅಪ್ಪಚ್ಚನ್ ಅವರ ಮಗ ವೆಳ್ಳನ್ ವೈದ್ಯರ್ ಇದೀಗ ತಿರುನೆಲ್ಲಿ ಕ್ಷೇತ್ರ ರಸ್ತೆಯ ಅಂಚಿನಲ್ಲೇ ಪುಟ್ಟದೊಂದು ರೂಮಿನೊಳಗೆ ಔಷಧಿಗಳನ್ನು ನೀಡುತ್ತಿದ್ದಾರೆ. ಇವರು ಹಣದಾಸೆಗೆ ಈ ವೃತ್ತಿ ನಡೆಸುತ್ತಿಲ್ಲ.

ಬದಲಾಗಿ ಜನತೆಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ. ಈಗಾಗಲೇ 5 ಸಾವಿರಕ್ಕೂ ಅಧಿಕ ಮಂದಿ ಕ್ಯಾನ್ಸರ್ ರೋಗಿಗಳು ಇವರ ಔಷಧಿಯಿಂದ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ವಾಸಿಯಾಗದ ರೋಗವೂ ಇವರ ಕೈಗುಣದಿಂದ ಗುಣವಾದ ಉದಾಹರಣೆಗಳು ನೂರಾರಿವೆ. ಕಾಡು ಗಿಡ ಮೂಲಿಕೆಗಳ ಔಷಧವೇ ರೋಗಿಗಳ ಪಾಲಿನ ಸಂಜೀವಿನಿ. ಕರ್ರಗಿನ ಗಿಡ್ಡ ಕಾಯದ ಸರಳ ವ್ಯಕ್ತಿತ್ವದ ತೇಜೋಮುಖದ ವೆಳ್ಳನ್ ವೈದ್ಯರ್ ಎಲ್ಲರ ನೋವಿಗೂ ಸ್ಪಂದಿಸುತ್ತಾ ಸಮಾಧಾನದಿಂದಲೇ ಚಿಕಿತ್ಸೆ ನೀಡುತ್ತಿದ್ದಾರೆ. ದಿನಕ್ಕೆ 300ಕ್ಕೂ ಅಧಿಕ ಮಂದಿ ಇವರ ಪುಟ್ಟ ಕೊಠಡಿಗೆ ಆಗಮಿಸಿ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.

ವೆಳ್ಳನ್ ವೈದ್ಯರ್ ಎದುರು ಧನಿಕ, ಬಡವ , ಎಲ್ಲರೂ ಒಂದೇ . ಯಾವುದೇ ಆಮಿಷಗಳಿಗೆ ಅಲ್ಲಿ ಅವಕಾಶವಿಲ್ಲ... ಜಾತಿ, ಮತ, ತಾರತಮ್ಯವೂ ಇಲ್ಲ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು, ದೂರದ ಹೈದರಾಬಾದ್, ಪಾಂಡಿಚೇರಿ, ನವದೆಹಲಿ, ಮುಂಬೈ, ಬೆಂಗಳೂರು,ಛತ್ತೀಸ್ ಘಡ ಹೀಗೆ ದೂರದೂರುಗಳಿಂದಲೂ ಈ ವೈದ್ಯರ ಭೇಟಿಗೆ ಪ್ರತಿದಿನವೂ ಜನರಾಗಮಿಸುತ್ತಲೇ ಇರುತ್ತಾರೆ. ಹಸಿಮದ್ದು, ನಾಲ್ಕೈದು ಕಷಾಯಗಳು, ಎಣ್ಣೆ ಈ ರೀತಿಯ ಸರಳ ಔಷಧಿಗಳು ಮಾರಕ ರೋಗಗಳಿಗೆ ರಾಮಭಾಣ.
ವೆಳ್ಳನ್ ವೈದ್ಯರ್ ಅವರನ್ನು 09946926480 ಮೊಬೈಲ್ ಸಂಖ್ಯೆ ಗೆ ಕರೆಮಾಡಿ ಸಂಪರ್ಕಿಸಬಹುದು.

0 comments:

Post a Comment