ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನಾನು ಮೊದಲ ಬಾರಿಗೆ ಹ್ಯಾಂಡಿಕ್ಯಾಮರ ಹಿಡಿದಾಗ.....
ಇದುಆರೇಳು ವರ್ಷಗಳ ಹಿಂದೆ ನನಗಾಗಿ ಮಾಡಿಟ್ಟುಕೊಂಡಿದ್ದ ವಿಡಿಯೊ ಚಿತ್ರಣ. ಬೇರೆಯವರಿಗೆ ತೋರಿಸಲು ಧೈರ್ಯ ಬಾರಲಿಲ್ಲ. ಕಾರಣ ಪ್ರವಾಸ ಹೊರಟ ದಿನದಂದೇ ಕ್ಯಾಮಾರ ಖರೀದಿಸಿದ್ದೆ. ಅದರ ಎಬಿಸಿಡಿ ಗೊತ್ತಿರಲಿಲ್ಲ. ಕ್ಯಾಮಾರಮ್ಯನ್ ಒಬ್ಬರು. ಅಟೋಗೆ ಹಾಕಿ ಕೊಟ್ಟರು. ಆದರೂ ಏಳೆಂಟು ಘಂಟೆಗಳ ವಿಷುವಲ್ಸ್ ತೆಗೆದು ತಂದು ನಮ್ಮ ಎಡಿಟರ್ ಮುಂದೆ ಇಟ್ಟರೆ. ಆತ ಯಾವುದನ್ನು ಆಯ್ದುಕೊಳ್ಳಲಿ ಎಂದು ಗೊಂದಲಗೊಂಡಿದ್ದರು. ಸ್ಕ್ರಿಪ್ಟ್ ಬರೆದು ವಾಯ್ಸ್ ಓವರ್ ಅರ್ಟಿಸ್ಟ್ ಗೆ ಕೊಟ್ಟರೆ ಅಕ್ಷರ ಅರ್ಥವಾಗುವುದಿಲ್ಲವೆಂದು ಅರ್ಧರ್ಧ ನುಂಗಿಬಿಟ್ಟರು. ಪಟ್ಟಾಗಿ ಕೂತು ಎಡಿಟ್ ಮಾಡ್ಸಿ, ಮ್ಯೂಸಿಕ್ ಹಾಕಿದಾಗ ಮುಕ್ಕಾಲು ಘಂಟೆಯ ದೀರ್ಘ ಡಾಕ್ಯುಮೆಂಟ್ರಿ ಆಗಿಬಿಟ್ಟಿತ್ತು...ಮತ್ತೆ ಎಡಿಟ್ ಮಾಡಿ ಅರ್ಧ ಘಂಟೆಗೆ ಇಳಿಸೋಣವೆಂದುಕೊಂಡರೂ ಅದನ್ನು ಮುಂದೂಡುತ್ತ ಬಂದೆ. ಈಗ ಅದಕ್ಕೆಲ್ಲ ಮನಸ್ಸಿಲ್ಲ. ಸೋ ನಿಮಗೆ ಇಷ್ಟವಾದರೆ ವೀಕ್ಷಿಸಿ..ಅಥವಾ ಹಾರಿಸಿಕೊಂಡಿ ನೋಡಿ... ನೋಡಿ ನಿಮಗನಿಸಿದ್ದನ್ನು ಹೇಳಿದರೆ ಸಂತೋಷ.
Usha Kattemane

0 comments:

Post a Comment