ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆತ್ಮೀಯ ಓದುಗ ಮಿತ್ರರೇ...
ಇಂದಿಗೆ 14 ದಿನ ಸಂದವು. ನನ್ನ ಸ್ಪೂರ್ತಿಗೆ ಕಾರಣರಾಗಿದ್ದ, ನನ್ನೆಲ್ಲಾ ಸಾಧನೆಗೆ ಬೆಳಕಾಗಿದ್ದ, ನನ್ನ ಸರ್ವಸ್ವವೂ ಆಗಿದ್ದ ನನ್ನಮ್ಮ ನಮ್ಮೆಲ್ಲರಿಂದ ದೂರವಾಗಿದ್ದಾರೆ. ಮನಸ್ಸು ಭಾರವಾಗಿದೆ. ನನ್ನೆಲ್ಲಾ ಕಾರ್ಯಗಳನ್ನೂ ಬದಿಗೊತ್ತಿ ಅವರ ನೆನಪಲ್ಲಿ ಇಷ್ಟೂ ದಿನ ... ಮುಂದೆಯೂ... ಇನ್ನು ಮುಂದೆ ನಿಮ್ಮೆಲ್ಲರ ಈ ಕನಸು.ಕಾಂ ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂಬ ಭರವಸೆಯನ್ನು ನೀಡುತ್ತಿದ್ದೇನೆ. ಜೊತೆಗೆ ನನ್ನಮ್ಮನ ನೆನಪಿನ ಅಂಕಣವೂ ಪ್ರತೀ ವಾರ ಈ ಕನಸಿನೊಂದಿಗೆ ನಿಮಗೆ ದೊರಕಲಿದೆ. ಓದಿ...ಅಭಿಪ್ರಾಯಿಸಿ...ಪ್ರೋತ್ಸಾಹಿಸಿ...
ಎಂದೆಂದಿಗೂ ನಿಮ್ಮ,

ಹರೀಶ್ ಕೆ.ಆದೂರು
ಸಂಪಾದಕ.

0 comments:

Post a Comment