ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಆರ್ಯನ್ ಫೌಂಡೇಷನ್ ಸಿಇಓ ಆಯೇಷಾ ಅಮನ್ ಮತ್ತೊಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಮಾಜಿಕ ಕಾರ್ಯ ಮತ್ತು ಅದ್ಭುತ ಸಾಧನೆಗಾಗಿ ಆಯೇಷಾ 2013ರ ಯೂತ್ ಐಕಾನ್ ಮತ್ತು ಮಹಿಳಾ ನಾಯಕಿ ಅನ್ನೋ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ನಡೆದ ಸಮಾರಂಭದಲ್ಲಿ ಆಯೇಷಾ ಪ್ರಶಸ್ತಿ ಸ್ವೀಕರಿಸಿದ್ರು. ವಿಶ್ವದ ಹಲವು ಮಹಿಳೆಯರ ಸಾಧನೆಯ ಮಧ್ಯೆಯೂ ಆಯೇಷಾ ಮಾಡಿದ ಸಾಧನೆ ವಿಭಿನ್ನವಾಗಿರೋದ್ರಿಂದ ಈ ಪ್ರಶಸ್ತಿ ಒಲಿದುಬಂತು.

ಪ್ರಶಸ್ತಿ ಸ್ವೀಕರಿಸಿದ ಆಯೇಷಾ ಅಮನ್,"ನಾನು ಈಗ ಸಂಭ್ರಮದಲ್ಲಿದ್ದೇನೆ. ಶಭಾನಾ ಅಜ್ಮಿ ನಿನ್ನ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿ ಎಂದಾಗ ಒಂದು ಕ್ಷಣ ನನ್ನನ್ನು ನಾನೇ ನಂಬಲಾಗಲಿಲ್ಲ. ಈ ಪ್ರಶಸ್ತಿಯನ್ನು ನಾನು ನನ್ನ ಬ್ಯುಸಿನೆಸ್ ಪಾರ್ಟನರ್ ಅರುಣ್ ಸಿಂಗ್ ಮತ್ತು ಅಚಿಂಟೋ ಸೇನ್ಗೆ ಅರ್ಪಿಸುತ್ತೇನೆ. ಅವ್ರು ಇಲ್ದೇ ಇದ್ದಿದ್ದರೆ ನಾನು ಈ ಸಾಧನೆಯ ಬಗ್ಗೆ ಯೋಚನೆ ಕೂಡ ಮಾಡಲಾಗುತ್ತಿರಲಿಲ್ಲ.

ಆರ್ಯನ್ ಟೀಮ್ನ ಎಲ್ಲರಿಗೂ ಚಿರಋಣಿ".
ಗೆಲ್ಲಬೇಕಾದ್ರೆ ಪ್ರತಿಭೆ ಬೇಕು. ಆದ್ರೆ ಪದೇ ಪದೇ ಗೆಲ್ಲಬೇಕು ಅಂದ್ರೆ ಸ್ಥಿರತೆ ಮತ್ತು ಶ್ರಮದ ಅಗತ್ಯವಿದೆ. ಕಳೆದ ವರ್ಷ ನಾನು ಪ್ರಶಸ್ತಿ ಗೆದ್ದಾಗ ಕೆಲವರು ಇದನ್ನು ಸಾಧಾರಾಣಾ ಸಾಧನೆ ಅಂತ ಅಂದುಕೊಂಡಿದ್ದರು, ಆದ್ರೆ ಈಗ ಮತ್ತೆ ಈ ಪ್ರಶಸ್ತಿ ಗೆದ್ದಿದ್ದೇನೆ. ನಿಜವಾಗಲೂ ನನ್ನ ಹೆಸರು ಆಯ್ಕೆಯಾದಾಗ ನಾನು ಆಶ್ಚರ್ಯಚಕಿತಳಾಗಿದ್ದೆ. ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

0 comments:

Post a Comment