ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್...
ಬಿಗ್ ಬುಲ್ ಟೆಂಪಲೆ ಏನಪ್ಪ ಇದು ಕೃಷ್ಣನ ಗುಡಿ,ರಾಮನ ಗುಡಿ,ಹನುಮನ ಗುಡಿ,ದುರ್ಗಾದೇವಿ ಗುಡಿ,ಈಶ್ವರನ ಗುಡಿ ಇವೆಲ್ಲಾ ಹೆಸರು ಕೇಳಿದ್ದುಂಟು ಇದೇನಿದು ಬಿಗ್ ಬುಲ್ ಟೆಂಪಲ್ ಎಂದು ಅಚ್ಚರಿಯಾಗಬೇಡಿ... ಇದು ಬೆಗಳೂರಿನ ಬಸವನಗುಡಿಯಲ್ಲಿರುವ ದೇವಸ್ಥಾನದ ಹೆಸರು!
ಕನ್ನಡಿಗರ ಹೃದಯ ವಿಶಾಲವಲ್ಲವೇ ಕನ್ನಡವನ್ನು ನಾವು ಇಂಗ್ಲೀಷ್ ಗೆ ಅನುವಾದಿಸಿ ಉಚ್ಚರಣೆ ಮಾಡುವಷ್ಟು ವಿಶಾಲ ಹೃದಯಿಗಳು!

ಬಸವನಗುಡಿಯಲ್ಲಿರುವ ದೊಡ್ಡ ಬಸವಣ್ಣನ ದೇವಸ್ಥಾನವು ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು ಇಲ್ಲಿಗೆ ಆಗಮಿಸುವ ವಿದೇಶಿಯರಿಗೆ ಅರ್ಥವಾಗಲಿ ಎಂಬ ಉದ್ದೇಶವೋ ಅಥವಾ ಕನ್ನಡಿಗರ ವಿಶಾಲ ಹೃದಯವೋ...? ದೊಡ್ಡ ಬಸವಣ್ಣನ ದೇವಸ್ಥಾನ ಇದನ್ನು ಇಂಗ್ಲೀಷ್ ಗೆ ಅನುವಾದಿಸಿ ಬಿಗ್ ಬುಲ್ ಟೆಂಪಲ್ ಎಂಬ ಹೆಸರಿಗೆ ತರ್ಜುಮೆ ಮಾಡಲಾಗಿದೆ!

ಅದಕ್ಕೆ ತಕ್ಕಹಾಗೇ ಬೃಹತ್ತಾಕಾರದ ನಾಮ ಫಲಕವನ್ನು ಹಾಕಲಾಗಿದೆ. ಇದು ಹೀಗೆ ನಮ್ಮ ಹೃದಯವಂತಿಕೆ ಮುಂದುವರಿದರೆ ದೇವಸ್ಥಾನಗಳಲ್ಲಿ ಅಂಗ್ಲ ಭಾಷೆಯಲ್ಲಿ ಅರ್ಚನೆ, ಶ್ಲೋಕ ಪಠಣ, ಪ್ರವಚನ ನಡೆದರೂ ಅಚ್ಚರಿ ಪಡಬೇಕಾಗಿಲ್ಲ. ಮುಂದೊಂದು ದಿನ ಕೃಷ್ಣನ ಗುಡಿ ಕೌವ್ ಮ್ಯಾನ್ ಟೆಂಪಲ್,ದುರ್ಗಾ ದೇವಿಯ ಗುಡಿಯನ್ನು ಲೊಯನ್ ಉಮೇನ್ ಟೆಂಪಲ್, ಹನುಮಂತನ ಗುಡಿಯನ್ನು ಮಂಕೀ ಟೆಂಪಲ್ ಹಿಗೇ ದೇವಸ್ಥಾನಗಳಿಗೆ ನಾಮ ಫಲಕಗಳು ಬಂದು,ಮುಂದೊಂದು ದಿನ ದೇವರನ್ನೂ ಇಂಗ್ಲೀಷ್ ಭಾಷೆಯ ವ್ಯಾಮೊಹಕ್ಕೆ ಒಳಪಡಿಸದರೆ ಅಚ್ಚರಿಯಾಗದಿರದು.


- ಪ್ರಹಲ್ಲಾದ ಕುಲಕರ್ಣಿ.
ಪ್ರಥಮ ವರ್ಷ ಪತ್ರಿಕೋದ್ಯಮ ವಿಭಾಗ
ಮಾನಸ ಗಂಗೋತ್ರಿ, ಮೈಸೂರು.

0 comments:

Post a Comment