ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:01 PM

ಮಧುರವಾದ ಸ್ನೇಹ...

Posted by ekanasu


ಯುವಾ...
ಅವನ ಬಗ್ಗೆ ನಾನು ತಿಳಿದುಕೊಂಡ ಭಾವನೆ ತಪ್ಪು ಎಂದು ಈಗ ಅನ್ನಿಸುತ್ತಿದೆ!
ವರ್ಷದ ಹಿಂದೆ ನನ್ನ ಅವನ ಪರಿಚಯವಾಯಿತು. ಇಬ್ಬರೂ ರೂಮೇಟ್. ಒಂದೇ ಕಪಾಟಿನಲ್ಲಿ ಡ್ರೆಸ್ ಕೂಡಿಸಿಟ್ಟಿದ್ದೆವು. ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೆವು. ಒಂದೇ ಟೇಬಲ್ಗೆ ಎರಡು ಕುರ್ಚಿ ಹಾಕಿಕೊಂಡು ಓದುತ್ತಿದ್ದೆವು, ಬರೆಯುತ್ತಿವು. ಜೊತೆಗೆ ಒಂದಿಷ್ಟು ಒಂದೊಳ್ಳೆಳ್ಳೆ ವಿಷಯಗಳ ಬಗ್ಗೆ ಚರ್ಚೆ, ಊಟಕ್ಕೆ ಉಪ್ಪಿನಕಾಯಿಯಂತೆ ಹರಟೆಯನ್ನೂ ಹೊಡೆಯುತ್ತಿದ್ದೆವು. ಈಗ ಆ ದಿನಗಳನ್ನು ನೆನಪಿಸಿಕೊಂಡರೆ ಕ್ಷಣ ಕಾಲ ಏನೂ ತೋಚದಂತಾಗಿ, ಮತ್ತೆ ಆ ದಿನಗಳಿಗಾಗಿ ಕಾಯುವಂತಾಗುತ್ತದೆ.

ಆದರೆ ಏನು ಮಾಡುವುದು ಕಳೆದು ಹೋದ ಸಮಯ ಮತ್ತೆ ಬಾರದು ಎಂದು ಸುಮ್ಮನಾಗುತ್ತೇನೆ. ಆದರೂ ನೆನಪು ಅಲೆ ಅಲೆಯಾಗಿ ಹೊರ ಬರುತ್ತಲೆ ಇರುತ್ತದೆ.
ಹೌದು. ನೆನಪುಗಳು ಜೀವನದ ದಿಕ್ಕುಗಳನ್ನೆ ಬದಲಿಸುತ್ತವೆ. ಆ ದಿನಗಳನ್ನು ನೆನಪಿಸಿಕೊಂಡರೆ ಯಾವುದೋ ಆಗಾಧ ಶಕ್ತಿ ಕಳೆದುಕೊಂಡ ಅನುಭವವಾಗುತ್ತಿದೆ. ತಪ್ಪೋ, ಸರಿಯೋ ಎಂಬುದು ಅಂತರಂಗಕ್ಕೂ ಗೊತ್ತಾಗದ ರೀತಿಯಲ್ಲಿ ನಮ್ಮಿಬ್ಬರ ಸ್ನೇಹ ಆ ರೀತಿಯಲ್ಲಿ ಬೆಳೆದಿತ್ತು. ನಿಜವಾಗಲೂ ನಮ್ಮದು ಅನನ್ಯ ಮಿತ್ರತ್ವ. `ಸಮಾನವಾದ ಗುಣಶೀಲರಲ್ಲಿ ಮಿತ್ರತ್ವ ಶೋಭಿಸುತ್ತದೆ' ಎನ್ನುತ್ತಾರೆ ಮಹಾತ್ಮ ಗಾಂಧಿಜಿಯವರು. ಅವರು ಹೇಳಿದ ಮಾತನ್ನು ಪುಸ್ತಕದಲ್ಲಿ ಓದಿದ್ದೆ.

ನಮ್ಮಿಬ್ಬರ ಆತ್ಮೀಯ ಮಧುರ ಭಾವನೆಗಳಿಂದ ನನ್ನ ಜೀವನದಲ್ಲಿ ಅನುಭವಿಸಿದಂತಾಗಿದೆ.
ಇಬ್ಬರ ಮಧ್ಯೆ ಎಷ್ಟೇ ಗಾಢವಾದ ಪ್ರೇಮ, ಸ್ನೇಹ ಇದ್ದರೂ ಆಗಾಗ ಬಿರುಗಾಳಿಯಂತೆ ವೈ ಮನಸ್ಸು ಬರುತ್ತಿರುತ್ತದೆ. ನಮ್ಮ ಸ್ನೇಹದಲ್ಲೂ ಅಂತಹದೊಂದು ಘಟನೆ ನಡೆಯಿತು. ಸಣ್ಣ ಪುಟ್ಟ ವಿಷಯಗಳಿಗೂ ಅವನ ಮನೋಭಾವನೆ ನನಗೆ ಸರಿ ಕಾಣಲಿಲ್ಲ. ಬರ ಬರುತ್ತಾ ಅದು ಹೆಚ್ಚಾಯಿತು. ಅವನ ವರ್ತನೆಯಲ್ಲಿ ಬದಲಾವಣೆಗಳಾದವು. ಇಬ್ಬರ ಮನಸ್ಥಾಪಕ್ಕೂ ಇವೇ ಕಾರಣ. ಅವನು ನನ್ನಲ್ಲಿ ದೋಷಗಳನ್ನು, ನಾನು ಅವನಲ್ಲಿಯ ದೋಷಗಳನ್ನು ದೂಷಿಸಿದೆವು. ಆದರೂ ಆ ದೋಷಗಳನ್ನು ತಿದ್ದಿಕೊಳ್ಳುವ ಹೊತ್ತಿಗೆ ನಮ್ಮಿಬ್ಬರ ಅದ್ಭುತ ಸ್ನೇಹಕ್ಕೊಂದು ಪೂರ್ಣವಿರಾಮ ಬಿತ್ತು.
ಸ್ವಭಾವತಃ ಅವನ ಸ್ವಭಾವವೇ ಹಾಗೆ. ಸ್ವಚ್ಚತೆ ಅಷ್ಟಕಷ್ಟೆ. ರೂಮಿನಲ್ಲಿ ಎಲ್ಲೆಂದರಲ್ಲಿ ವಸ್ತುಗಳನ್ನು ಚಿಕ್ಕಮಕ್ಕಳ ಹಾಗೆ ಚೆಲ್ಲಾಪಿಲ್ಲಿ ಬಿಸಾಕುತ್ತಿದ್ದನು. ಇಂತಹ ಸಣ್ಣ ಪುಟ್ಟ ಕಾರಣಗಳೇ ಅವನೊಡನೆಯ ಸ್ನೇಹದ ಬಿರುಕಿಗೆ ಕಾರಣವಾಯಿತು. ಇದು ಹೆಚ್ಚಾಗಲು ತಾಳ್ಮೆ ಇಲ್ಲದಿರುವುದು ಎಂಬ ಅರಿವೂ ನಮ್ಮಿಬ್ಬರಲ್ಲಿ ಬಂತು. ಈಗ ಇಬ್ಬರೂ ಪ್ರತ್ಯೇಕ ರೂಮುಗಳಲ್ಲಿದ್ದೇವೆ. ತಾಳ್ಮೆಯಿಂದ ವರ್ತಿಸುತ್ತಿದ್ದೇವೆ. ಇಬ್ಬರ ಮನಸ್ಥಿತಿ ಒಂದೇ ಅಲ್ಲದಿದ್ದರೂ, ಕೂಡಲೆ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದೇವೆ.
ನಮ್ಮಲ್ಲಿನ ಗುಣ ಗ್ರಹಿಸುವುದಕ್ಕೆ ತಾಳ್ಮೆ ಬೇಕು. ಅದು ಇಲ್ಲದಿದ್ದರೆ ಯಾರನ್ನು ಸುಧಾರಣೆ ಮಾಡಬೇಕೆಂದು ಬಯಸುತ್ತೆವೆಯೋ ಅವನೊಂದಿಗೆ ಸಂಪೂರ್ಣ ಸಲುಗೆಯಿಂದ ಇರಲಾಗುವುದಿಲ್ಲ. ಗೆಳೆತನದಲ್ಲೂ ಸುಧಾರಣೆ ಆಗುವುದಿಲ್ಲ. ಇಬ್ಬರಲ್ಲೂ ಒಬ್ಬರ ಪ್ರಭಾವ ಮತ್ತೊಬ್ಬರ ಮೇಲೆ ಆಗುವುದು. ಅಂತಹ ಅನುಭವ ಇಬ್ಬರ ಗಮನಕ್ಕೂ ಬಂದಿದುಂಟು.
ಈಗ ಅವನ ಒಡನಾಟದ ಒಂದು ವಸಂತದ ದಿನಗಳ ನೆನಪಾಗುತ್ತಿವೆ. ಬಿಟ್ಟು ಹೋದ ಗೆಳೆಯನ ಬಗ್ಗೆ ಅನಾಥ ಭಾವ ಕಾಡುತ್ತಿದೆ. ಆ ನೆನಪುಗಳು ನನ್ನಲ್ಲಿರುವ ಅಗಾಧ ಸ್ನೇಹಕ್ಕೆ ಇಮ್ಮಡಿಯಾಗುತ್ತಿದೆ. ಜೊತೆಗೆ ಹೃದಯದಲ್ಲಷ್ಟು ಪಶ್ಚಾತಾಪ ಕಳವಳವೂ ಹೆಚ್ಚುತ್ತಿದೆ. ಒಳಗಿನ ಮೌನ ಅಭಿಮಾನದಿಂದ ಅರಳುತ್ತಿದೆ. ಅವನ ಸ್ನೇಹವನ್ನು ಬಿಡೇನು ಎಂದು. ಇಂತಹ ಮೈತ್ರೀಭಾವ ಅಪರೂಪ. ಅದ್ಭುತ ಶಾಂತಿರೂಪವೇ ನಮ್ಮೀ ಸ್ನೇಹ....! ಅರ್ಥ ಮಾಡಿಕೋ.
ಸೃಷ್ಟಿಯಲ್ಲಿ ಅತಿಮಧುರವಾದದ್ದು ಸ್ನೇಹ. ಆ ಸ್ನೇಹ ಮಿತಿಯೊಳಗಿದ್ದರೆ ಸುಂದರ. ಮೀರಿದರೆ ಏರುಪೇರು ಎಂಬ ಪಾಠವಂತೂ ಕಲಿತೆ.
- ಬಸಪ್ಪ ಕುಂಬಾರ
ಪತ್ರಿಕೋದ್ಯಮ ವಿಭಾಗ
ಗುಲ್ಬರ್ಗಾ ವಿ.ವಿ.0 comments:

Post a Comment