ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:50 PM

ಮನಸೇ...

Posted by ekanasu

ಸಾಹಿತ್ಯ
ಅವಳ ಮೊದಲ ನಗು
ಮಾಡಿತು ನನಗೆ ಪ್ರೇಮಿಸುವಂತೆ
ಆ ನಗುವಿನಲ್ಲಿ ತುಂಬಿತ್ತು,ರಮ್ಯತೆಯ ಉಲ್ಲಾಸ
ಆ ನಗು ನಾ ಎಂದಾದರೂ
ಮರೆಯ ಬಲ್ಲೇ? ಮನಸೇ....

ನನ್ನಿಂದ ದೂರಾಗಬೇಕಂತ
ನಿನ್ನ ಹೃದಯ ಬಯಸಿತ್ತೇ?
ನಿ ದೂರಾದ ಮೇಲೆ ಸಾವುಕೂಡ
ಮಾಡದೆ ಹೋಯಿತು ನನ್ನ ಗೆಳತನ
ಮಾತಾಡದೆ ಮೌನವಾದರೆ
ಏನೆಂದು ತಿಳಿಯಲಿ ಮನಸೇ....

ಸಮುದ್ರದ ಅಲೆಯಂತೆ ಬಾಳಲ್ಲಿ ಬಂದು
ಕೋಲ್ಮಿಂಚಿನಂತೆ ಮಾಯವಾದರೆ
ಹಾರಾಡುವ ಹಕ್ಕಿಗೆ ರೆಕ್ಕೆಕಿತ್ತಿದಂತೆ
ದಡ ಸೇರದ ಅಲೆ ನಾನಾದೆ ಮನಸೇ....

ನನ್ನಜೀವನದ ಅರ್ಧಾಂಗಿನಿ
ಆಗುವುಳೆಂದು ಕನಸಿನ ಗೋಪುರಕಟ್ಟಿದರೆ
ಕಟ್ಟಿದ ಗೋಪುರ ಬಡಿದ ಸಿಡಿಲಿನಂತೆ ಚೂರಾಯಿತಲ್ಲ
ನಾ ತೋರಿದ ಪ್ರೀತಿ ಬೇಸರವಾಯಿತೇ? ಮನಸೇ

ಯಾವ ಸ್ವಾರ್ಥಕ್ಕಾಗಿ ನನ್ನ
ನಡು ನೀರಲ್ಲಿ ಕೈ ಬಿಟ್ಟು ಹೊರಟಿ?
ಕಾರಣ ಹೇಳದೆ ಹೋದರೆ
ಅರಳಿದ ಹೃದಯಕ್ಕೆ ನೋವು
ಆಗಲವೇ ಮನಸೇ..

ರಾಜಕುಮಾರ ಎಂ ದಣ್ಣೂರ
ಕರ್ನಾಟಕ ಕೇಂದ್ರೀಯ ವಿವಿ ಗುಲಬರ್ಗಾ.1 comments:

Anonymous said...

kavite chennagide...
Prakash B. Jalahalli

Post a Comment