ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:47 AM

ಸಿಹಿ ನೆನವು...

Posted by ekanasu

ಯುವಾ...
ನೂರಾರು ಆಲೋಚನೆಗಳು,ದುಗುಡ ದುಮ್ಮಾನಗಳು, ಹೃದಯದಲ್ಲಿ ಮಡುಗಟ್ಟಿ ನಿಂತ ಆತಂಕಗಳು, ಎದೆಯಲ್ಲಿ ತುಂಬಿದ ಭಯ ಇವೆಲ್ಲದರ ಮಧ್ಯೆ ಬ್ಯಾಗ್ ಹಾಕಿಕೊಂಡು ಕಾಲೇಜ್ಗೆ ಬಂದ ಮೊದಲ ದಿನವೇ ಸರ್ ಕ್ಲಾಸ್ ರೂಂಗೆ ಬಂದು ಒಬ್ಬರೊಬ್ಬರೆ ತಮ್ಮಗಳ ಪರಿಚಯ ಮಾಡಿಕೊಳ್ಳಿ ಅಂದ್ರು. ನಾನು ಬೇರೆ ಫಸ್ಟ್ ಬೆಚ್ಚನಲ್ಲಿ ಕುಂತಿದ್ದೆ. ಹೇಗೋ ಕತ್ತಲ್ಲಿ ಇದ್ದ ವೇಲ್ ಗಟ್ಟಿಯಾಗಿ ಹಿಡಿದು ಹೆಸರು ಹೇಳವುದಕ್ಕೆ ಎದ್ದು ನಿಂತಾಗ ಎಲ್ಲಿಂದಲೂ ಅಶರೀರ ವಾಣಿ ಒಂದು ಕೇಳಿಬಂತು. "ಎಚ್.ಓ.ಡಿ ಬಂದ್ರು ಮಗ" ಅಂತ ಹೇಳುತ್ತಲೇ ನಮ್ಮ ಮುಂದೆ ಇದ್ದ ಸರ್ ಮಾಯ!

ಮೊದಲ ತರಗತಿ ಮುಗಿಸಿಕೊಂಡು ಹೊರಗೆ ಬಂದಾಗಲ್ಲೇ ಗೊತ್ತಾಗಿದ್ದು ನಮ್ಮ ಕ್ಲಾಸ್ಗೆ ಬಂದಿದ್ದು ಸರ್ ಅಲ್ಲ ನಮ್ಮ ಸೀನಿಯರ್ಸ್ ಅಂತ. ಹೀಗೆ ವರ್ಷ ಪೂರ್ತಿ ನಮ್ಮ ಜೊತೆ ಕೀಟಲೆ ಚೇಷ್ಟೆ ಮಾಡುತ್ತಲೇ ನಮ್ಮಗೆ ರಸದೌತಣ ನೀಡುತ್ತಿದ್ದ ಹಿರೆತಲೆಗಳು ಈಗ ತಮ್ಮ ಜವಬ್ದಾರಿಯ ಪಟ್ಟ ನಮ್ಮಗಳ ಮುಡಿಗೇರಿಸಿ ವಿದಾಯ ಹೇಳುತ್ತಿದ್ದಾರೆ. ಇನ್ನು ಮುಂದೆ ನಾವೇ ಸೀನಿಯರ್ಸ್, ಅಲ್ಲ, ಅಲ್ಲ ನಾನೇ ಸೀನಿಯರ್! ಈ ಗಮ್ಮತ್ತು ಇರೋದಾದರೂ ಎಷ್ಟು ದಿನ? ಹೊಸ ನೀರು ಬಂದ ಮೇಲೆ ಹಳೇ ನೀರು ಹೋಗಲೇಬೇಕಲ್ಲ, ಮುಂದಿನ ಇದೇ ಸಮಯದಲ್ಲಿ ನಮ್ಮ ಕಥೆಯೂ ಇದೇ...

ಮೊದಮೊದಲಿಗೆ ಕಾಲೇಜಿಗೆ ಕಾಲಿಟ್ಟಾಗ ಸೀನಿಯರ್ಸ್ ಅಂದರೆ ಅದೇನೋ ಒಂಥರ ಭಯ. ಏನುಮಾಡುತ್ತಾರಪ್ಪಾ ಎಂಬ ಹೆದರಿಕೆ. ಏನಾದರೂ ಕೆಲಸ ಮಾಡು ಅಂತಾರೆ... ಮಾಡಲಿಲ್ಲ ಅಂದರೆ ಅವರದ್ದೇ ರೀತಿಯಲ್ಲಿ ಒಂದಿಲ್ಲೊಂದು ಪನಿಷ್ಮೆಂಟ್ ನೀಡಿ ಎಲ್ಲರ ಎದುರಿಗೂ ತಲೆತಗ್ಗಿಸುವ ಹಾಗೆ ಮಾಡುತ್ತಾರೆ. ಅವರ ಮಾತು ಕೇಳದೆ ಹೋದರೆ ನೋಟ್ಸ್ ಕೊಡದೆ ಸತಾಯಿಸುತ್ತಾರೆ. 'ವೆಲ್ಕಮ್ ಪಾರ್ಟಿ' ಇಟ್ಕೊಂಡ ದಿನ ಒಬ್ಬರಿಗೊಬ್ಬರು ಪರಿಚಯಿಸಿ ಕೊಂಡಾಗಲೇ ಗೊತ್ತಾಗಿದ್ದು ನಮ್ಮ ಸೀನಿಯರ್ಸ್ ಎಷ್ಟೊಂದು ಒಳ್ಳೆಯವರು ಅಂತ.

ಏನಾದರೂ ತಿಳಿಯದೆ ಹೋದ್ರೆ 'ಅಣ್ಣಾ ಇದು ಗೊತ್ತಾಗ್ತಿಲ್ಲ' ಅಂತ ಬಳಿ ಹೋದಾಗ ತೋರುತ್ತದ್ದ ಪ್ರೀತಿ ಕಂಡು ಅವರ ಮೇಲೆ ಅಭಿಮಾನ ಇಮ್ಮಡಿಯಾಗಿತ್ತು. ಅವರ ಜೊತೆ ನಾವು ಇಟ್ಟ ಪ್ರತಿಯೊಂದು ಹೆಜ್ಜೆಯಲ್ಲಿಯೂ ಪ್ರೀತಿ,ವಿಶ್ವಾಸ,ಆತ್ಮೀಯತೆ ಇತ್ತು. ಅವರ ಜೊತೆ ನಾವು ಕಳೆದ ಪ್ರತಿ ಕ್ಷಣನೂ ನೆನಪಿಡುವಂತಹುದು. ಸೀನಿಯರ್ ಅಂದ್ರೆ ಹೀಗೆ ಇರಬೇಕು ಅನ್ನಿಸುವಷ್ಟು ನಮ್ಮ ಬಗ್ಗೆ ಕಾಳಜಿ ತೋರುತ್ತಿದ್ದರು.ಅವರೆಂದೂ ನಾವು ಸೀನಿಯರ್ಸ್ ಎಂದು ಗರ್ವ ಪಡುವುದಾಗಲಿ, ನಮ್ಮ ಮೇಲೆ ಅಧಿಕಾರ ಚಲಾಯಿಸುವುದಾಗಲಿ ಮಾಡಿದವರಲ್ಲ.

ಬದಲಾಗಿ ನಮ್ಮನ್ನು ಅವರೊಂದಿಗೆ ಸೇರಿಸಿಕೊಂಡು ಸಂತಸ ಹಂಚಿಕೊಳ್ಳುತ್ತಿದ್ದರು.ಇಂದು ನಮ್ಮನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಚನ್ನಾಗಿ ಓದ್ರಿ, ಡಿಪಾರ್ಟ್ ಮೆಂಟ್ ಗೆ ಒಳ್ಳೆ ಹೆಸರು ತಂದಕೊಡ್ರೀ, ಪತ್ರಿಕೋದ್ಯಮ ಅಂದ್ರೆ ಬೇರೆ ವಿಷಯದ ತರ ಅಲ್ಲ. ಪ್ರತಿ ಕ್ಷಣನೂ ನಿಮ್ಮನ್ನು ನೀವು ಓದಿನಲ್ಲಿ ತೊಡಗಿಸಿಕೊಳ್ಳಿ, ಏನಾದ್ರೂ ಸಾಧನೆ ಮಾಡ್ರಿ ಹೀಗೆ ಒಡಹುಟ್ಟಿದವರಿಗಿಂತ ಹೆಚ್ಚು ಬುದ್ಧಿ ಹೇಳುತ್ತಿದ್ದಾರೆ. ಇನ್ನ ಮೇಲೆ ಅವರ ಸ್ಥಾನ ನಾವು ತುಂಬಲಿದ್ದೀವಿ, ಅವರ ರೀತಿಯಲ್ಲಿಯೇ ನಾವು ಇರಬೇಕು. ಬರುವ ಜೂನಿಯರ್ಸ್ ಗೆ ವೆಲ್ಕಮ್ ಮಾಡಬೇಕು, ಅವರಿಗೆ ಒಳ್ಳೆಯ ಸಲಹೆ ಸೂಚನೆಗಳನ್ನು ನೀಡಬೇಕು. ನಮ್ಮ ಸೀನಿಯರ್ಸ್ ನಮಗೆ ತೋರಿದ ಪ್ರೀತಿಗಿಂತ, ಜಾಸ್ತಿ ಪ್ರೀತಿ,ವಿಶ್ವಾಸ ತೋರಿಸಬೇಕು..

ಮಧುಮತಿ ಬಿ.ಎಸ್.
ಕುವೆಂಪು ವಿವಿ ಶಂಕರಘಟ್ಟ


9 comments:

Rajashekar Raj said...

good article......yes i have same feeling....

Rajashekar Raj said...

good article.....yes i have same feeling...

Rajashekar Raj said...

i also feel sad

Rajashekar Raj said...

i also feel sad

laxmi prasad said...

chennagide-laxmi prasad

oh madhu said...

thnx

oh madhu said...

k thnx

ashok said...

super articel sister

Tulsiram Kaikadi said...

wery good iam also feel like u

Post a Comment