ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್

ಪತ್ರಿಯೊಬ್ಬರಿಗೆ ಜೀವನದಲ್ಲಿ ಏನಾದರೂ ಸಾಧಿಸಲು ಛಲ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಯಶಸ್ವಿಯಾಗಲು ಅದಕ್ಕೆ ಬೇಕಾಗುವ ಮಾರ್ಗಗಳಿವೆ.ಅವುಗಳನ್ನು ಮೊದಲು ತಿಳಿದುಕೊಳ್ಳಬೇಕು. ಏಕೆಂದರೆ ವಿಷಯವನ್ನು ತಿಳಿಯಬೇಕಾದರೆ ಎಷ್ಟು ಶ್ರಮ ಇರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.

ಮಹಾಭಾರತದ ಕುರುಕ್ಷೇತ್ರ ಯುದ್ಧ ಇಡೀ ಕತೆಯ ನಿರ್ಣಾಯಕ ಘಟ್ಟ. ಸೋಲು ಗೆಲುವುಗಳ ಹಾಗೂ ಸಾವು ಬದುಕಿನ ಅಂತಿಮ ಹೋರಾಟ. ಇದರಲ್ಲಿ ಪಾಂಡವರೇ ಗೆದ್ದು ಕೌರವರು ನಾಶವಾದದ್ದು ಏಕೆ ಎಂಬ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಮಹಾಭಾರತದ ಕುರುಕ್ಷೇತದ ಘಟನಾವಳಿಗಳು ನನಗೆ ಅತ್ಯಂತ ಸೋಜಿಗವನ್ನಿಸುತ್ತದೆ. ಮನಸ್ಸನ್ನು ಚಿಂತನೆಗೊಡ್ಡುತ್ತದೆ.ತುಲನೆ ಮಾಡಿದಷ್ಟೂ ವಿಭಿನ್ನವಾದ ನವನವೀನ ವಿಚಾರಗಳು ಗೋಚರವಾಗುತ್ತವೆ.

ನಮ್ಮ ಜೀವನದ ಪ್ರತಿಯೊಂದು ಸಂದಿಗ್ಧ ಸನ್ನಿವೇಶಕ್ಕೂ ಇಲ್ಲಿ ಪರಿಹಾರಗಳು ಲಭ್ಯ. ಹುಡುಕಬೇಕೆಂಬ ತಾಳ್ಮೆ ಇರಬೇಕಷ್ಟೇ. ನಮ್ಮ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕೀಯ ಬಣದಲ್ಲಿ ದಿನೇ ದಿನೇ ನಡೆಯುತ್ತಿರುವ ವಿದ್ಯಮಾನಗಳನ್ನು ಕಂಡಾಗ ನಾವು ನಮ್ಮ ಜೀವನದಲ್ಲಿ ಮಹಾಭಾರತದ ಯಾವುದೇ ಪಾಠವನ್ನು ಅಳವಡಿಸಿಕೊಂಡಿಲ್ಲ ಎಂಬ ಸತ್ಯ ಅರಿವಾಗುತ್ತದೆ. ಬೇಡನ ಬಲೆಯಲ್ಲಿ ಬಿದ್ದ ಪಕ್ಷಿಗಳು ಒಂದೊಂದು ಒಂದೊಂದು ಕಡೆ ಹಾರುಲೆತ್ನಿಸಿದಾಗ ಅದೆಷ್ಟು ಶ್ರಮಪಟ್ಟರೂ ನೆಲ ಬಿಟ್ಟು ಕದಲಲಿಲ್ಲ. ಆದರೆ ಎಲ್ಲ ಒಂದಾಗಿ ಒಂದೇ ಕಡೆ ತಮ್ಮ ರೆಕ್ಕೆಗಳನ್ನು ಕ್ರೋಢೀಕರಿಸಿದಾಗ ಬಲೆಯ ಸಮೇತವಾಗಿ ಆಗಸಕ್ಕೇರಿಸಿ ಬಿಟ್ಟವು ಎಂಬ ಕತೆ ಇದೆ. ಅದರಂತೆ ಪ್ರತಿಯೊಬ್ಬ ಯುವಕರು ಕನಸು ಕಾಣಬೇಕು. ಆ ಕನಸುಗಳೇ ಆಲೋಚನೆಗಳಾಬೇಕು. ಆಲೋಚನೆಯೇ ತಲ್ಲೀನರಾದಾಗ ಯಶಸ್ಸು ಸಾಧಿಸಿಬಹುದು.

ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ವ್ಯಕ್ತಿತ್ವಕ್ಕೆ ಮೆರೆಗು ಕೊಡುವುದು ಅತ್ಯಗತ್ಯ. ಇದರ ಜತೆಗೆ ಸಮಯ ನಿರ್ವಹಣೆ, ಪರಿಶ್ರಮ, ಏಕಾಗ್ರತೆ ಇದ್ದರೆ ಅವು ಯಶಸ್ಸಿನ ಧ್ವಾರದ ತನಕ ನಮ್ಮನ್ನು ತಲುಪಿಸಲು ಸಹಾಯ ಮಾಡುತ್ತವೆ. ಯಾವುದೇ ಕಾರಣದಿಂದ ಯಶಸ್ಸು ದೊರೆಯದಿದ್ದಲ್ಲಿ ಅದರ ಬಗ್ಗೆ ಪಶ್ಚಾತ್ತಾಪ ಪಡದೆ ಮತ್ತೆ ಮತ್ತೆ ಪ್ರಯತ್ನಿಸಿದಾಗ ಯಶಸ್ಸು ಸಿಕ್ಕೇ ಸಿಗುತ್ತದೆ. ಅದಕ್ಕೆ ಒಂದು ಮಾರ್ಗವನ್ನು ತಿಳಿದು ಕೊಳ್ಳುವುದು ಉತ್ತಮ...

ಗೆಲುವು ಕಾಣುವ ಮುಂಚೆ ಯೋಜನೆ ರೂಪಿಸುವುದು ಅಗತ್ಯ. ನಾವು ಎಲ್ಲಿ ಕೆಲಸ ಮಾಡಲು ಇಚ್ಛೆಸುತ್ತೇವೆ ಅಲ್ಲಿಗೆ ತಲುಪುವುದು ಹೇಗೆ ಎಂಬುದನ್ನು ಮೊದಲೇ ನಿರ್ಧರಿಸುವುದು ಉತ್ತಮ. ನಮ್ಮ ವೈಯಕ್ತಿಕ ಗುರಿ ಮತ್ತು ವ್ಯಾವಹಾರಿಕ ಯೋಜನೆಗಳನ್ನು ಒಂದು ಡೈರಿಯಲ್ಲಿ ಬರೆದಿಡಬೇಕು. ನಾವು ಯಾವ ಕ್ಷೇತ್ರಕ್ಕೆ ಹೋಗಬೇಕೆನ್ನಿಸುತ್ತೇವೆಯೋ ಆ ನಿಟ್ಟಿನಲ್ಲಿ ನಮ್ಮ ದೃಷ್ಠಿ ನೆಡುವಂತಾಗಬೇಕು. ಇನ್ನೂ ಹೆಚ್ಚಾಗಿ ನಮ್ಮ ಮೇಲೆ ನಾವು ಆತ್ಮವಿಶ್ವಾಸ ಹೊಂದಿರಬೇಕು. ನಮ್ಮ ಮೇಲೆ ನಾವು ವಿಶ್ವಾಸ ಇಟ್ಟುಕೊಳ್ಳುವುದರಿಂದ ಯಶಸ್ಸು ಸಾಧಿಸುವುದು ಸಾಧ್ಯ. ಯಾವಾಗಲೂ ಆರೋಗ್ಯಕರ ಮಾನಸಿಕತೆಯಿಂದ ಆರೋಗ್ಯಕರ ವಿಚಾರಗಳು ಮನದಲ್ಲಿ ಮೂಡಲು ಸಾಧ್ಯ. ಇದರಿಂದ ನಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ.

-ಯಂಕೋಬ ಎಚ್.ಡಿ.ವಿಠಲಾಪುರ
ಸಮೂಹ ಸಂವಹನ ಪತ್ರಿಕೋದ್ಯಮ ಮತ್ತು ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ .

0 comments:

Post a Comment