ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಯುವಾ...

ಅನಿರೀಕ್ಷಿತ ಅತಿಥಿ ಮನೆಗೆ ಬರುವಂತೆ ಕನಸು ಸಹ ಅನಿರೀಕ್ಷಿತ ಅತಿಥಿಯೇ. ಆದರೆ ಕೆಲವೊಮ್ಮೇ ಕೆಲವೋಂದು ವಿಷಯಗಳಲ್ಲಿ ಇದು ನಿರೀಕ್ಷಿತವೂ ಹೌದೆನ್ನಿ. ನಾನು ಡಾಕ್ಟರ್, ಇಂಜಿನಿಯರ್ ಆಗಬೇಕು, ಪ್ರೀತಿಸಿದವಳನ್ನೇ ಮದುವೇಯಾಗಬೇಕು, ಮನೆ ಮಕ್ಕಳು ಎಂದೆಲ್ಲಾ ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಒಂದು ಕನಸಿರುತ್ತದೆ. ಇರಲೇಬೇಕು ಕೂಡಾ. ಹುಟ್ಟಿದ ಮಗುವಿನಿಂದ ಹಿಡಿದು ಹಣ್ಣು-ಹಣ್ಣು ಮುದುಕರವರೆಗೂ ಎಲ್ಲರೂ ಕನಸು ಕಾಣುತ್ತಾರೆ.

ಇನ್ನು ನೂರಾರೂ ಕನಸು ಹೊತ್ತು ವಿಶ್ವವಿದ್ಯಾಲಕ್ಕೆ ಬರುವ ನಮ್ಮಂಥ ಯುವಕರಿಗೆ ಕನಸಿನ ಕೊರತೆಯೇ? ಪ್ರತಿಯೊಬ್ಬರಿಗೂ ಒಂದು ಗುರಿ ಇರುತ್ತದೆ. ಆದರೆ ಆ ಸಾಧನೆಯ ಹಾದಿಯಲ್ಲಿ ಆರ್ಥಿಕ ತೊಂದರೆಗಳು, ಪಾಠ ಸರಿಯಾಗಿ ನಡೆಯದೆ ಇರುವ ವಾತಾವರಣ, ಊಟ-ವಸತಿ ಹೊಂದಿಕೆಯಾಗದೆ, ಮನಸ್ಸಿನ ಕಷ್ಟಗಳಿಗೆ ಯಾರೂ ಸ್ಪಂದಿಸದಿದ್ದಾಗ ನಮ್ಮ ಕನಸು ಎಲ್ಲಿ ಕನಸಾಗಿಯೇ ಉಳಿವುದು ಎಂಬ ಭಯ ಕಾಡುತ್ತದೆ. ಕೆಲವೊಮ್ಮೆ ಈ ಯೋಚನೆಗಳು ಎಷ್ಟು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತವೆ ಎಂದರೆ ಆತ್ಮಹತ್ಯೆಗೂ ಪ್ರಚೋದಿಸುತ್ತವೆ.

ಈ ಕನಸಿನಲ್ಲಿ ಎರಡು ವಿಧ. ಹಗಲು ಕನಸು ಎಂದರೆ ಸಾಧ್ಯವಾಗದಿರುವುದು ಅಥವಾ ಸಾಕಾರವಾದಿರುವುದು ಎಂಬ ಮಾತಿದೆ. ಆದರೆ ಕಠಿಣ ಇಚ್ಛಾಶಕ್ತಿ ಇದನ್ನು ನನಸಾಗಿಸುತ್ತದೆ. ಹೃದಯ ಬಯಸುವ ಸುಖದ ಚಿತ್ರಗಳನ್ನೆಲ್ಲಾ ಕಣ್ಣೆಂಬ ಕ್ಯಾಮರಾ ಮೂಲಕ ಸೆರೆ ಹಿಡಿಯುವ ಮನಸು ಅದನ್ನು ಎಡಿಟಿಂಗ್ ಮಾಡಿ, ನಾವು ನಿದ್ರಾವಸ್ಥೆಯಲ್ಲಿದ್ದಾಗ ಪ್ಲೇ ಮಾಡುತ್ತದೆ. ಅದರ ನಿರ್ದೇಶನ ಯಾವ ಪುಟ್ಟಣ್ಣ ಕಣಗಾಲರಂಥ ನಿರ್ದೇಶಕರಿಗೂ ಪೈಪೋಟಿ ನೀಡುವಂತದ್ದು!. ಕೆಲವೊಮ್ಮೆ ಅದರ ನಿರೂಪಣೆ ಹೇಗಿರುತ್ತದೆ ಎಂದರೆ ಬೆಳಗಾಗುವುದರೊಳಗೆ ಅದು ನಮ್ಮ ನೆನಪಿನಿಂದ ಕಳೆದು ಹೋಗಿ ಬೆಳಗ್ಗೆ ಎಷ್ಟು ಪೇಚಾಡಿದರೂ ಸಿಗುವುದಿಲ್ಲ. ಇನ್ನು ಕೆಲವು ಮಾಸದೆ ಬಹುಕಾಲ ನಮ್ಮ ನೆನಪಿನಲ್ಲಿರುತ್ತವೆ.

ಕೆಲವೊಮ್ಮೆ ತೀರಾ ಭಯನಾಕ, ಸಂತೋಷದ ಮತ್ತೆ ಕೆಲವು ಸಮಾಜ ತಪ್ಪೆಂದು ಭಾವಿಸುವ ಕನಸುಗಳಾಗಿರುತ್ತವೆ!. ಹಾಗೆಂದು ಕಾಣುವ ಕನಸುಗಳನ್ನೆಲ್ಲಾ ಸಾಕಾರಗೊಳಿಸಲಾದು ಬಿಡಿ. ನಮ್ಮ ಮನಸ್ಸಿನ ಭಾವನೆಗಳು, ಆಲೋಚನೆಗಳು ಕನಸಿನ ರೂಪದಲ್ಲಿ ಬರುತ್ತವೆ! ಹೌದು ಅಸಲಿಗೆ ಈ ಮನಸ್ಸು ಎಂಬ ಪದಕ್ಕೆ ಒಂದು ನಿರ್ದಿಷ್ಟ ಅಸ್ತಿತ್ವವೇ ನಮ್ಮ ದೇಹದಲ್ಲಿಲ್ಲ. ಎಲ್ಲರೂ ಸಾಮಾನ್ಯವಾಗಿ ಹೃದಯವನ್ನೇ ಮನಸ್ಸೆಂದು ಕರೆಯುತ್ತಾರೆ.

ರಕ್ತವನ್ನು ಪಂಪ್ ಮಾಡುವ ಕೆಲಸ ಬಿಟ್ಟರೆ ಅದಕ್ಕೆ ಬೇರೆ ಭಾವನೆಗಳಿಲ್ಲ. ಇದೆಲ್ಲಕ್ಕೂ ಮಾತೃ ಸ್ಥಾನವೆಂದರೆ ನಮ್ಮ ಮೆದುಳು!. ಹಿಗಾಗಿ ನಮ್ಮಂಥವರಿಗೆ ನಿತ್ಯವೂ ಒಂದಿಲ್ಲೊಂದು ಹೈ ವೊಲ್ಟೇಜ್, ಸಾಫ್ಟ್, ಹಾರರ್, ಸಪ್ಪೆಯಂಥ ಕನಸುಗಳು ಬೀಳುತ್ತಿರುತ್ತವೆ. ಆದರೆ ಅವುಗಳಲ್ಲಿ ಯಾವುದು ನಮ್ಮ ಗುರಿ ಯಾವುದು ಸರಿ ಎಂಬುದು ನಮ್ಮ ವಿವೇಚನೆಗೆ ಹೊಳೆದಿರುತ್ತದೆ. ಈ ನಿಟ್ಟಿನಲ್ಲಿ ಒಳ್ಳೆಯ ಕನಸ್ಸನ್ನೇ ಕಾಣಬೇಕು. ಸ್ವಾಮಿ ವಿವೇಕಾನಂದರ ಊಕ್ತಿಯಂತೆ 'ನನ್ನ ಏಳಿಗೆಗೆ ನಾನೇ ಶಿಲ್ಪಿ' ಎಂಬಂತೆ ನಮ್ಮ ಜೀವನದ ನಿರ್ಧಾರಕರು ನಾವೇ. ದಾರಿಯಲ್ಲಿ ಎದುರಾಗುವ ಸಣ್ಣಪುಟ್ಟ ಕಾರಣಗಳಿಗೆ ಎದೆಗುಂದದೆ ನಮ್ಮ ಕನಸ್ಸನ್ನು ನನಸಾಗಿಕೊಳ್ಳೊಣ.

ಲೇಖನ: ದೇವರಾಜ ಮ್ಯಾದನೇರಿ
ಪತ್ರಿಕೋದ್ಯಮ ವಿಭಾಗ.
ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ


0 comments:

Post a Comment