ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

 ವಿಚಾರ
ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬದ ಆಚರಣೆ ವಿಚಿತ್ರ ಅನಿಸತೊಡಗಿದೆ. ಜೊತೆ ಹೊಸಬಟ್ಟೆ ತೆರದಿದ್ದರೂ  ಪರವಾಗಿಲ್ಲ ಸಾಕಷ್ಟು ಖರ್ಚು ಮಾಡಿ ಸಿಹಿಯೂಟ ಮಾತ್ರ ನೀಡಬೇಕೆಂಬಂತಹ ಸ್ಥಿತಿ ಹಲವೆಡೆಗಳಲ್ಲಿ ಗೋಚರಿಸುತ್ತಿವೆ. ಮಗುವಿನ ಸಂತೋಷಕ್ಕಾಗಿ ಮತ್ತು ಭವಿಷ್ಯದಲ್ಲಿ ಖುಷಿ ಜೀವನ ದೊರೆಯಲು ಎಲ್ಲರೂ ಹಾರೈಸುವ ಪರಿ ಮಾತ್ರ ಸರಿ. ಆದರೆ ನಮ್ಮ ಜೀವನದಲ್ಲಿ ಕಷ್ಟ ಅನುಭವಿಸಿದ ನಂತರ  ಏನೋ ದೇವರ ದಯೆಯಿಂದಲೋ ,ನಾವು ಪಡೆದ ಪುಣ್ಯವೋ ಗೊತ್ತಿಲ್ಲ.
ಅತಿಯಾದ ಬುದ್ದಿಶಕ್ತಿ ,ಎಲ್ಲದರಲ್ಲೂ ಯಶಸ್ಸು ಪಡೆದು ಕೋಟಿಗಟ್ಟಲೆ ದುಡ್ಡು, ಸಾವಿರಾರು ಎಕರೆ ಭೂಮಿ ಮತ್ತು ಕೆಜಿ ಲೆಕ್ಕದಲ್ಲಿ ಬಂಗಾರದ ಒಡವೆಗಳು, ಹೀಗೆ ಸಂಪಾದನೆ ಮಾಡಿದ ಹಣವನ್ನು ವಿಜೃಂಬಣೆಯಿಂದ ಖರ್ಚು ಮಾಡುತ್ತಿರುವುದು ಕಾಣುತ್ತಿದ್ದೇವೆ.

 ಈ ರೀತಿ ನಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಿ ಸಂತೋಷ ಪಡುವ ಜೊತೆಗೆ ಪರಿಸರ ಮತ್ತು ಜಗತ್ತನ್ನು ಅಪಾಯದಿಂದ ಪಾರು ಮಾಡುವಲ್ಲಿ ನಿಮ್ಮ ಮಗುವಿನ ಪಾತ್ರ ಇದೆ ಎಂಬುದು ಮನಸ್ಸಿನಲ್ಲಿ ಬರಲಿ.. ನಮ್ಮ ಸುತ್ತಲಿನ ವಾತಾವರಣದಲ್ಲಿ ಹಸಿವಿಗಾಗಿ ನೂರಾರು,ಸಾವಿರಾರು ಜನರು ಹಾತೊರೆಯುತ್ತಿದ್ದಾರೆ. ಅವರಿಗೆ ಅನ್ನ ನೀಡುವಂತೆ ಆಗಬೇಕು. ಇದರ ಜೊತೆ ಸಮಾಜಕ್ಕೆ ಅನೂಕೂಲವಾಗುವಂತಹ ಕಾರ್ಯ ಮಾಡಿದರೆ ಪುಣ್ಯದ ಜೊತೆ ಮಕ್ಕಳಿಗೆ ಸಮಾಜದ ಆಶೀರ್ವಾದವು ಸಿಗುವದು ಖಂಡಿತ.

ಮಗು ಹುಟ್ಟಿದ ದಿನದಂದು ನಿಮ್ಮ ಮನೆ ಮುಂದಿನ ಜಾಗದಲ್ಲಿ ಒಂದು ಸಸಿಯನ್ನು  ನೆಡುವುದೊಳಿತು.
ತಾಯಿಯ ಹೆಸರು ಉಳಿಯಲು , ತವರು ಮನೆಯಿಂದ ಗಂಡನ ಮನೆಗೆ ಹೋಗುವಾಗ ನೆರಳು ಕೊಡುವ ಸಸಿ ತೆಗೆದುಕೊಂಡು ಹೋಗಿ ಅಲ್ಲಿ  ನೆಡಿ.
ಹುಟ್ಟು ಹಬ್ಬದ ದಿನ ನಾವು ಉಪಯೋಗಿಸುವ ಅಲಂಕಾರಿಕ ಸಾಮಗ್ರಿಗಳು ಪ್ಲಾಸ್ಟಿಕ್ ಇರದಂತೆ ಎಚ್ಚರ ವಹಿಸಿ.
ಮಗುವಿನ ಜನ್ಮದಿನದ ಆಚರಣೆ ನೆಪದಲ್ಲಿ ಪರಿಸರಕ್ಕೆ ಧಕ್ಕೆ ತರುವ ಕೆಲಸ ಕಡಿಮೆ ಮಾಡಿ.
ನಿಮ್ಮ ಊರಿನಲ್ಲಿರುವ ಶಾಲೆಗೆ ನಿಮ್ಮ ಮಗುವಿನ ಹೆಸರಲ್ಲಿ ಏನಾದರು ಉಡುಗೊರೆ ಕೊಡುವುದುತ್ತಮ
ತಾಯಿ ಜೀವ ಮತ್ತು ಮಗುವಿನ ಪ್ರಾಣ ಉಳಿಸಲು ಸಹಾಯಕರಾಗಿರುವ ಡಾಕ್ಟರು ,ದಾಯಿ,ಇತರನ್ನು ಆ ದಿನ ಸನ್ಮಾನಿಸಿ.
ಹುಟ್ಟಿದ ನಮ್ಮ ಮಗುವಿನ ಹೆಸರಲ್ಲಿ ಮನೆಯ ಮಹಿಳೆಯರು,ಪುರುಷರು ಸೇರಿ ಹತ್ತಿರದ ಕಲುಷಿತ  ಚರಂಡಿಯನ್ನು ಒಂದು ದಿನ ಸ್ವಚ್ಚ ಮಾಡಿ.
ನೀವು ಈ ತರಹ ಮಾಡುವದರ ಜೊತೆಗೆ ನಿಮ್ಮ ಅಕ್ಕ ಪಕ್ಕದಲ್ಲಿ ಇರುವ ಸಹಚರರಿಗೆ ಮತ್ತು ಹತ್ತಿರದ ಕುಟುಂಬ, ಸ್ನೇಹಿತರಿಗೆ ಹೀಗೆ ಮಾಡಲು ತಿಳಿಸಿ.
   
-  ಶರಣಬಸವ.ಕೆ.ನವಲಹಳ್ಳಿ
        ಪತ್ರಕರ್ತ / ಕ್ಯಾಮ್ ಫೇಲೋ
           9741602545
1 comments:

kavitha d said...

very nice good information

Post a Comment