ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರವಿ ಮೂಡುಕೊಣಾಜೆ
ವಿಶೇಷ ವರದಿ
ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಎದುರಿಸಬೇಕು, ಹಿಂದೆ ಸರಿಯಬಾರದು. ಜೀವನದಲ್ಲಿ ಬಿರುಗಾಳಿ ಬೀಸಿತೆಂದು ಆತ್ಮವಿಶ್ವಾಸವನ್ನು ಕಳೆದುಕೊಂಡು ಇನ್ನು ನನಗೆ ಜೀವನವೇ ಇಲ್ಲ ಎಂದರೆ ಅದು ನಿಮ್ಮ ಮೂರ್ಖತನದ ಕಲ್ಪನೆ. ಆತ್ಮವಿಶ್ವಾಸ ಮತ್ತು ದೃಢ

ನಂಬಿಕೆಯಿಂದ ಜೀವನ ಸಾಗಿಸ್ತಾ ಇರಬೇಕು. ಇದಕ್ಕೆ ನೈಜ ಹಾಗೂ ಜೀವಂತ ಉದಾಹರಣೆಯೇ ಮೇಜರ್ ದೇವೆಂದರ್ ಪಾಲ್ ಸಿಂಗ್. (ಡಿ.ಪಿ ಸಿಂಗ್) ಇವರು ಕಾರ್ಗಿಲ್ ಯುದ್ದದಲ್ಲಿ ಶತ್ರು ದೇಶದ ಹೋರಾಟದಲ್ಲಿ ಮಾತೃಭೂಮಿಗಾಗಿ ತನ್ನ ಬಲ ಕಾಲನ್ನೆ ಕಳೆದುಕೊಂಡವರು,
ಇವರ ಜೀವನಗಾಥೆಯೇ ನಮಗೆ ನಿಮಗೆಲ್ಲ ಪ್ರೇರಣೆಯಾಗುವಂತೆ ಜೀವನವನ್ನು ನಡೆಸಿದ್ದಾರೆ. ನಾನು ಅಂದು ಎಡಗಾಲಿನಲ್ಲಿ ಆಕ್ಸಿಡೆಂಟಿನ ಪ್ರಭಾವದಿಂದಾಗಿ ಸ್ವಲ್ಪ ಬಲ ಕಳೆದುಕೊಂಡಿದೆ. ಅವಾಗ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ನನ್ನ ಗೆಳೆಯ ಪ್ರಶಾಂತ್ ಫೇಸ್ ಬುಕ್  ನಲ್ಲಿ   ಇವರ ಬಗ್ಗೆ ಪೊಸ್ಟ್ ಹಾಕಿದ್ದನ್ನು ನೋಡಿ ಪ್ರೇರಿತನಾಗಿ ಇವರ ಬಗ್ಗೆ ಹುಡುಕಾಡಿದಾಗ ಸಿಕ್ಕಿದ ಈ ಅದ್ಭುತ ಕಥೆ. ಡಿ.ಪಿ ಸಿಂಗ್ ಬಂದಿದ್ದು ಆಮಂಳ ಎಂಬ ಚಿಕ್ಕ ಗ್ರಾಮದಿಂದ. ಇವರು ತನ್ನ ಬಾಲ್ಯದ ಜೀವನವನ್ನು ಹೆಚ್ಚು ಅಜ್ಜನೊಂದಿಗೆ ಕಳೆದದ್ದು, ತಂದೆ ಭಾರತೀಯ ಸೈನದ ಗಡಿರೇಖೆ ವಿಭಾಗದಲ್ಲಿ ಕೆಲಸ ಮಾಡುವುದರಿಂದ ಇವರಿಗೆ ಸೈನಿಕರ ಹೆಚ್ಚು ಒಡನಾಟವಿದ್ದರಿಂದ ಸಹಜವಾಗಿ ದೇಶ ಕಾಯುವ ಸೈನಿಕನಾಗುವ ಕನಸು ಕಂಡವರು, ಹಾಗಾಗಿ ಸೈನಿಕ ಅಕಾಡೆಮಿಗೆ ಸೇರಿದ್ದರು. ಅಲ್ಲಿ ತರಬೇತಿ ಪಡೆದರು. ನಂತರ ಸೈನಿಕನಾಗಿ ನಿಯುಕ್ತಿ ಹೊಂದಿದರು ಅವಾಗ ಕಾರ್ಗಿಲ್ ಯುದ್ದ ಪಾರಂಭವಾಗಿದ್ದಷ್ಟೆ. ಇವರು ಅವಾಗ ಎಲ್.ಓ.ಸಿ ಯಲ್ಲಿ ಒಪರೇಷನ್ ವಿಜಯ್ ಗೆ ನಿಯುಕ್ತಿ ಹೊಂದಿದರು ಇದೊಂದು ಜೀವನದ ಉತ್ತಮ ಕ್ಷಣಗಳೊಂದು ಹೇಳ್ತಾರೆ.

ಸತ್ತು ಬದುಕಿದಾಗ
ಕಾರ್ಗಿಲ್ ಯುದ್ದದಲ್ಲಿ ಶತ್ರು ದೇಶ ದಾಳಿ ಮಾಡುವಾಗ ಪ್ರತಿ ದಾಳಿ ನಡೆಸಿದಾಗ ಇವರು ಚಿಂತಾಜನಕವಾಗಿ ಬಿದ್ದಿದರು, ಅಲ್ಲಿ ಇವರನ್ನು ರಕ್ಷಿಸಲು ಬಂದವರು ಇವರು ಸತ್ತರೆಂದು ಭಾವಿಸಿ ಮತ್ತೆ ಹೇಗೋ ಜೀವ ಇದೆ ಎಂದ ತಿಳಿದ ಮೇಲೆ ಚಿಕಿತ್ಸೆಗೆ ಕೂಡಲೇ ಆಸ್ಪತ್ರೆಗೆ  ದಾಖಲಿಸಿದರು.ಬಲ ಕಾಲನು ಕಳೆದುಕೊಂಡಾಗ....
ಯುದ್ದದಲ್ಲಿ ಇವರಿಗೆ ಗಂಭೀರ ಗಾಯಗಳಾಗಿರುವುದರಿಂದ ಮತ್ತು ಬಲಗಾಲಿಗೆ ತುಂಬಾ ಏಟಾಗಿರುವುದರಿಂದ ಅದನ್ನು ಕತ್ತರಿಸಿ ತೆಗೆಯಲೇ ಬೇಕಿತ್ತು. ಇಲ್ಲದೆ ಹೋದರೆ ಜೀವಕ್ಕೆಇನ್ನೂ ಹೆಚ್ಚು ಜೀವಕ್ಕೆ ಅಪಾಯವಾಗುತ್ತಿತ್ತು. ಆದ್ದರಿಂದ ಇವರ ಬಲಗಾಲನ್ನು ಕತ್ತರಿಸಿ ತೆಗೆಯಲಾಯಿತು.

ಇವರ ಹೊರಟದ ಬದುಕು...
ವೈದರು, ಕುಟುಂಬ ಮತ್ತು ಗೆಳೆಯರ ಸಹಾಯದಿಂದ ಇವರು ಚೇತರಿಕೆ ಕಂಡರು. ಕ್ರಮೇಣ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸಿದರು, ಪೂರ್ಣ ಚೇತರಿಕೆ ಕಂಡಾಗ ಕೃತಕ ಕಾಲನು ಉಪಯೋಗಿಸಿ ಸ್ವಲ್ಪ ನಡೆಯಲು ಪ್ರಾರಂಭಿಸಿದರು. ಮೊದಲು ಸ್ವಲ್ಪ ಕಷ್ಟವಾದರು ಕ್ರಮೇಣ ರೂಡಿಯಾಯಿತು. ಒಬ್ಬ ಸೈನಿಕನಾಗಿ ಎದೆಗುಂದದೆ ಜೀವನನ್ನು ಬಂದ ಹಾಗೆ ಸ್ವೀಕರಿಸಿದರು. ಯಾವತ್ತು ತನ್ನನು ತಾನು ಅಂಗವಿಕಲ ಎಂದು ಭಾವಿಸದೆ ಕೃತಕ ಕಾಲನ್ನು ಉಪಯೋಗಿಸಿ ತಾನೂ ಸಾಮನ್ಯನಂತೆ ತಿಳಿದು ನಡೆಯಲು ಪ್ರಾರಂಭಿಸಿದರು, ತನ್ನ ಯಾವುದೇ ಕೆಲಸಕ್ಕೂ ಬೇರೆಯವರಿಗೆ ಅವಲಂಭಿತರಾಗದೆ, ತನ್ನ ಕೆಲಸ ತಾನೇ ಮಾಡಲಾರಂಭಿಸಿದರು. ಬದುಕಲ್ಲಿ ನಂಬಿಕೆಯನ್ನು ಕಳೆದುಕೊಳ್ಳದೆ ಜೀವನದ ಪ್ರತಿ ಕ್ಷಣವನ್ನು ಅನುಭವಿಸಿ, ಬೇರೆಯವರಿಗೆ ತನಗೆ ಅಂಗವೈಕಲ್ಯತೆ ಇದೆ ಎಂದು ತಿಳಿಯದಂತೆ ಬದುಕಿದರು. ಯಾವುದನ್ನು ತನಗೆ ಅಸಾಧ್ಯವೆಂದು ಭಾವಿಸಲ್ಲಿಲ್ಲ. ಇವರಿಗೆ ಅಂಗವಿಕಲತೆ ಬಗ್ಗೆ ಕೇಳಿದರೆ ಅಂಗವೈಕಲತೆಯನ್ನು ನಾವು ತಾರೆ ಜಾಮೀನ್ ಪರ್ ಸಿನಿಮಾದಲ್ಲಿ ವೀಕ್ಷಿಸಬಹುದು ಎನ್ನುತಾರೆ, ಅಂಗವೈಕಲತೆ ಎಂಬುದು ನಮ್ಮ ಮನಸ್ಸಿಗೆ ಸಂಬಂಧಪಟ್ಟಿದ್ದು. ನಾನು ಈ ಸಮಯದಲ್ಲಿ ಜೀವನದ

ಅತ್ಯುತ್ತಮ ಪಾಠಗಳನ್ನು ಕಲಿತೆ ಹಾಗೂ ತಾನೂ ಇಷ್ಟು ಚೇತರಿಕೆ ಕಾಣಲು ವೈದ್ಯರ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ಪ್ರತಿಯೊಂದು ಕೆಲಸಕ್ಕೆ ಮಗ ಹುರಿದುಂಬಿಸುತ್ತಿದ್ದ ಅಷ್ಟೆ ಸಾಕಿತ್ತು ನನಗೆ ಪುನಃ ಜೀವನದಲ್ಲಿ ಭರವಸೆ ಬರಲು. ತನ್ನ ಅಂಗವಿಕಲ್ಯತೆ ಬಗ್ಗೆ ಯಾವತ್ತು ಯಾರೂ ಕೂಡ ತನ್ನನ್ನು ತಾನು ಅಂಗವಿಕಲ ಎಂದು ಭಾವಿಸಲಿಲ್ಲ. ಅಂಗವೈಕಲತೆ ಎಂಬುದು ನಮ್ಮ ಮನಸ್ಸಿಗೆ ಸಂಬಂಧಪಟ್ಟ ವಿಚಾರ. ಶುರುವಿಗೆ ತಮಗೆ ತುಂಬಾ ಕಷ್ಟಗಳು ಎದುರಿಸಲು ಸಿಗಬಹುದು ಮತ್ತೆ ರೂಡಿಯಾಗುತ್ತ ಹೋಗುತ್ತದೆ.  ನಾವು ಯಾವತ್ತು

ಕೀಳರಿಮೆಯಿಂದ ಬದುಕಬಾರದು. ಬದುಕನ್ನು ಚಾಲೆಂಜ್ ಆಗಿ ತೆಗದುಕೊಳ್ಳಬೇಕು. ನಾವು ಬೇರೆಯವರಿಗೆ ಸ್ಪೂರ್ತಿಯಾಗಿ, ಆತ್ಮವಿಶ್ವಾಸದಿಂದ  ಬದುಕಬೇಕು,

ಮ್ಯಾರಥಾನ್ ಓಟ
ನಾನು ಸೈನಿಕನಾಗಿ ಸುಮ್ಮನೆ ಕುಳಿತುಕೊಳ್ಳುವ ನಮ್ಮ ಜಯಮಾನವಲ್ಲ, ಮೊದಲು ಹೇಗೆ ಜೀವನ ಅದೇ ರೀತಿ ಬದುಕಬೇಕು. ಸೈನಿಕನಾಗಿ ಇರುವಾಗ ತುಂಬಾ ಸಾಹಸ ಪಡುತ್ತಿದ್ದೆ.  ಸೈನ್ಯದಲ್ಲಿರುವಾಗ ನಾನು ವಾಲಿಬಾಲ್ ಇನ್ನಿತ್ತರ ಆಟಗಳನ್ನು ಆಡುತ್ತಿದ್ದೆ. ಅದನ್ನೇ ಈವಾಗಲೂ ಪಾಲಿಸ್ತಾ ಇದ್ದೇನೆ. ಕ್ರಮೇಣ ನಾನು ಓಡಲು ಪ್ರಾರಂಭಿಸಿದೆ. ಆದರೆ ಪ್ರಾರಂಭದಲ್ಲಿ ಓಡಲು ಕಷ್ಟವಾಗುತ್ತಿತ್ತು.  ನಂತರ ಪ್ರೊಸ್ಟೆಸಿಸ್ ಕೃತಕ ಕಾಲನ್ನು ಉಪಯೋಗಿಸಿ ಓಟದಲ್ಲಿ ತೊಡಗಿದೆ. ಅದೇ ಸಂದರ್ಭದಲ್ಲಿ  ಏರ್ಟೆಲ್ ದಿಲ್ಲಿ ವಿಭಾಗ ಹಾಫ್ ಮ್ಯಾರಥಾನ್

ಪಂದ್ಯ ಅಯೋಜಿಸಿತ್ತು. ನಾನು ಆ ಸ್ಪರ್ಧೆಯಲ್ಲಿ ಭಾಗವಹಿಸಬೇಕೆನ್ನು ಹುಮ್ಮಸ್ಸು ಮನದಲ್ಲಿ ಮೂಡಿತು. ಸೈನದ ಸಹಕಾರದಿಂದ ನಾನು ಆ ಮ್ಯಾರಥಾನ್ ನಲ್ಲಿ  ಪ್ರಥಮ ಬಾರಿಗೆ ಪ್ರಥಮ ಭಾರತೀಯನಾಗಿ  ಬ್ಲೇಡ್ ಪ್ರೊಸ್ಟೆಸಿಸ್ ಉಪಯೋಗಿಸಿ ಓಡಿದೆ. ನಾನು 2ಗಂಟೆಯೊಳಗೆ ಐದುವರೆ ಕಿ.ಮಿ ಮ್ಯಾರಥಾನ್ ಓಡಿದೆ. ಇದು ಕಡಿಮೆ ಸಮಯದಲ್ಲಿ ಓಡಿದ ಒಬ್ಬ ಭಾರತೀಯ ಎಂಬುದು ದಾಖಲೆಯಾಯಿತು. ಚಾಂಪಿಯನ್ಸ್ ಕೇವಲ ತರಬೇತು ಸಂಸ್ಥೆಗಳಿಂದ ಹುಟ್ಟಲು ಸಾಧ್ಯವಿಲ್ಲ. ನಮ್ಮಲ್ಲಿ ದೃಢಸಂಕಲ್ಪ,ತಾನು ಗೆದ್ದೆ ಗೆಲ್ಲುವೆನೆಂಬ ನಂಬಿಕೆ ಇರುತ್ತದೋ

ಅವನು ಎಲ್ಲರನ್ನು ಮೀರಿಸುವ ಸಾಧನೆ ಮಾಡಲು ಸಾಧ್ಯ.  

0 comments:

Post a Comment