ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:21 PM

ಬೀಳ್ಕೊಡುಗೆ

Posted by ekanasu

ಪ್ರಾದೇಶಿಕ ಸುದ್ದಿ
ಉಜಿರೆ: ಆಸರೆ ಸಂಘ, ಉಜಿರೆ ಇದರ ವತಿಯಿಂದ ರುಡ್ಸೆಟ್ ಸಂಸ್ಥೆಯಲ್ಲಿ 5 ವರ್ಷಗಳಿಂದ ನಿ ರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ಮಂಗಳೂರಿನ ಕೆನರಾ ಬ್ಯಾಂಕ್ ವೃತ್ತ ಕಛೇರಿಗೆ ವರ್ಗಾವಣೆಗೊಂಡಿರುವ  ಎಮ್.ಕೆ.ಎಸ್ ಪ್ರಭು ಅವರ ಬೀಳ್ಕೊಡುವ ಸಮಾರಂಭವು ರುಡ್ಸೆಟ್ ಆವರಣದಲ್ಲಿ  ನಡೆಯಿತು. ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ನಿಟ್ಟೆ ಶಾಖೆಯ ಪ್ರಬಂಧಕಿ  ಎಮ್.ಕೆ.ಎಸ್ ಪ್ರಭು, ಶಾಂಭವಿ ಪ್ರಭು  ಉಪಸ್ಥಿತರಿದ್ದರು.


  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ.ಕಡಬ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಅಕಾಡೆಮಿ ಆಫ್ ರುಡ್ಸೆಟ್ ನ  ನಿಗಾವಣಾ ಘಟಕದ ಮುಖ್ಯ ಯೋಜನಾ ಸಂಯೋಜಕರಾದ  ಕೆ.ಎನ್.ಜನಾರ್ದನ್ ಮತ್ತು ರುಡ್ಸೆಟ್ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಟಿ.ಪಿ ಜಗದೀಶ್ ಮೂರ್ತಿ ಉಪಸ್ಥಿತರಿದ್ದರು.  ಉಪನ್ಯಾಸಕರಾದ   ಜೇಮ್ಸ್ ಅಬ್ರಹಾಂ ಹಾಗೂ ಅನಸೂಯ ಉಪಸ್ಥಿತರಿದ್ದು, ಸಂಘದ ಸ್ಥಾಪಕಾಧ್ಯಕ್ಷರೂ ನಿಕಟಪೂರ್ವಾಧ್ಯಕ್ಷರೂ ಆದಂತಹ  ಸುನಿಲ್ ರೈ ಬೆಳ್ಳಾರೆ ಇವರು ಅಭಿನಂದನಾ ಮಾತುಗಳನ್ನಾಡಿದರು. ಜೊತೆ ಕಾರ್ಯದರ್ಶಿ  ರಕ್ಷಿತಾ ಶೆಟ್ಟಿ  ಕಿರು ಪರಿಚಯವನ್ನು ವಾಚಿಸಿದರು. ಸಂಘದ ತಾಂತ್ರಿಕ ನಿರ್ದೇ ಶಕರಾದ ಪ್ರಶಾಂತ  ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ.ಕಡಬ ಅವರು ಸ್ವಾಗತಿಸಿ ನಿರೂಪಿಸಿದರೆ, ಕಾರ್ಯದರ್ಶಿ ಪ್ರಸಾದ್ ಬಿ.ಎಸ್ ಧನ್ಯವಾದವಿತ್ತರು. ಕಾರ್ಯಕ್ರಮಕ್ಕೆ ರುಡ್ಸೆಟ್ ಸಂಸ್ಥೆಯ ಸಿಬ್ಬಂದಿಗಳು, ಆಸರೆ ಸಂಘದ ಸದಸ್ಯರು, ಪಧಾದಿಕಾರಿಗಳು, ನಿರ್ದೇಶಕರುಗಳು ಹಾಗೂ ಸಂಸ್ಥೆಯಲ್ಲಿ ಪ್ರಸ್ತುತ ತರಬೇತಿಯಲ್ಲಿರುವ ಶಿಬಿರಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


0 comments:

Post a Comment