ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ಇಪ್ಪತ್ತೊಂದನೆಯ ಚಾತುರ್ಮಾಸ್ಯ ಕೆಕ್ಕಾರಿನಲ್ಲಿರುವ ಶ್ರೀರಘೂತ್ತಮಮಠದಲ್ಲಿ ಜುಲೈ 12ರಿಂದ ನಡೆಯಲಿದ್ದು ಚಾತುರ್ಮಾಸ್ಯ ದ ಅಷ್ಟೂ ದಿನ ಒಂದಿಲ್ಲೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪೂರ್ಣದಿಂದ ಪರಿಪೂರ್ಣದೆಡೆಗೆ ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ನಡೆಯುವ ಜಯ ಚಾತುರ್ಮಾಸ್ಯ ದ ಮತ್ತೊಂದು ವಿಶೇಷವೇ "ಗುರುಪದ - ಗುರುಪಥ" .
 ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ಪೀಠಾರೋಹಣದಾದಿಯಾಗಿ ಇಂದಿನ ತನಕದ ವಿವಿಧ ಅನಘ್ರ್ಯ ಛಾಯಾಚಿತ್ರಗಳ ಸಮಗ್ರ ಮಾಹಿತಿಪೂರ್ಣ ನೋಟವೇ ಗುರುಪದ ಗುರುಪಥ...
3.5 x2.5 ವಿಸ್ತೀರ್ಣದ ಛಾಯಾಚಿತ್ರಗಳನ್ನುಚಾತುರ್ಮಾಸ್ಯ ಸಂದರ್ಭದಲ್ಲಿ ಅದರ ವಿವರಣೆ ಸಹಿತವಾಗಿ ಪ್ರದರ್ಶನಕ್ಕಿಡಲಾಗುತ್ತದೆ. ಶ್ರೀಮಠದ ಸಮಾಜಮುಖೀ ಕಾರ್ಯಕ್ರಮಗಳು, ವಿವಿಧ ಯೋಜನೆಗಳು, ಸಾಗಿಬಂದ ಹಾದಿಯನ್ನು ತೋರಿಸುವ  ಪ್ರಯತ್ನ ಇದಾಗಿದೆ.
ಚಾತುರ್ಮಾಸ್ಯ  ವ್ರತವೆಂದರೆ ಹಾಗೇ...ಅದೊಂದು ವಿಶೇಷ... ಗುರುಗಳಿಗೆ ಅಧ್ಯಯನದ ಅವಧಿಯಾದರೆ, ಶಿಷ್ಯವರ್ಗಕ್ಕೆ ಶ್ರೀಗುರುಗಳ  ಆಶೀರ್ವಾದದ ಆನಂದದ ಸಮಯ...ಹೌದು ಇದೆಲ್ಲಾ ಅನುಭವಿಸಲು ಇನ್ನಿರುವುದು 27ದಿನಗಳು...

ಚಾತುರ್ಮಾಸ್ಯ  ಜಗನ್ಮಂಗಲಕ್ಕಾಗಿ ಸಂನ್ಯಾಸಿಗಳು ಆಚರಿಸುವ ತಪಸ್ಯೆ. ಲೋಕಹಿತದ ಯೋಜನೆಗಳು ಸಿದ್ಧಗೊಳ್ಳುವ ಸುಕಾಲ; ಶಿಷ್ಯರೆಲ್ಲರಿಗೂ ಗುರುದರುಶನದ ಸುಸಮಯ. ಈ ಸಂದರ್ಭದಲ್ಲಿ ಕೆಕ್ಕಾರಿನಲ್ಲಿ ನಿರ್ಮಾಣಗೊಂಡಿರುವ ವಿಶಿಷ್ಟವಿನ್ಯಾಸದ ವಿದ್ಯಾಮಂದಿರವನ್ನು ಗುರುಕಾಣಿಕೆಯಾಗಿ ಶ್ರೀಶ್ರೀಗಳಿಗೆ ಸಮರ್ಪಣೆಮಾಡುವುದರ ಮೂಲಕ ಶಿಷ್ಯವೃಂದ ಸಾರ್ಥಕತೆಯನ್ನು ಹೊಂದಲಿದೆ.
ಗುರುವೆಂಬ ಪೂರ್ಣವೃತ್ತ...
ಗುರು ಅಂದರೆ ಪೂರ್ಣ... ಪೂರ್ಣವೆಂದರೆ ವೃತ್ತಸ್ವರೂಪ... ಆಕಾರಣಕ್ಕಾಗಿಯೇ ಜಯಚಾತುರ್ಮಾಸ್ಯ ಪೂರ್ತಿ "ಗುರು"ಎಂಬ ಪರಿಕಲ್ಪನೆಯಡಿ ರೂಪುಗೊಂಡಿದೆ. ಚಾತುಮರ್ಾಸ್ಯದಲ್ಲಿ ನಡೆಯಲಿರುವ ರಾಮಕಥೆಯಲ್ಲೂ ಗುರುವಿನ ಕಥೆ, ಕೆಕ್ಕಾರಿನಲ್ಲಿ ನಿ ರ್ಮಾಣಗೊಳ್ಳುವ ವಿದ್ಯಾಮಂದಿರದ ಅಡಿಪಾಯವೂ ವೃತ್ತಾಕಾರವೇ... ಆಮಂತ್ರಣ ಪತ್ರಿಕೆಯ ಸ್ವರೂಪವೂ ವೃತ್ತಾಕಾರವೇ...!ಇಷ್ಟೇ ಅಲ್ಲ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ವೃತ್ತಕ್ಕೆ ಮಹತ್ವ...ತನ್ಮೂಲಕ ಪರಿಪೂರ್ಣ,ಪೂರ್ಣ ಸಂದೇಶದ ರವಾನೆ... ಈ ರೀತಿಯಾಗಿ ಜಯಚಾತುಮರ್ಾಸ್ಯ ಹತ್ತು ಹಲವು ಮಹತ್ವಪೂರ್ಣ ವಿಚಾರಗಳೊಂದಿಗೆ ಮೂಡಿಬರಲಿದೆ...ತಾವೂ ಬನ್ನಿ...

0 comments:

Post a Comment