ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ವಿಟೆಕ್ ಇಂಜಿನಿಯರ್ಸ್ ನಿಜಕ್ಕೂ ರೈತರ ಬೇಡಿಕೆಗಳನ್ನು ಪೂರೈಸುವ ಕೃಷಿ ಯಂತ್ರೋಪಕರಣಗಳನ್ನು ಆವಿಷ್ಕಾರ ಮಾಡುತ್ತಿದೆ. ಇದು ಬುದ್ಧಿವಂತರ ಆಯ್ಕೆ ಎಂದರೆ ತಪ್ಪಾಗಲಾರದು. ಸ್ವತಃ ಕೃಷಿ ಜಮೀನನ್ನು ಹೊಂದಿರುವ ವಿ.ಟೆಕ್ ಸಂಸ್ಥೆಯ ಮಾಲೀಕರು ರೈತರ ನೈಜ ಅವಶ್ಯತೆಗಳನ್ನು ಅರಿತು ಅವುಗಳಿಗೆ ಬೇಕಾದ ಸಲಕರಣೆಗಳನ್ನುಆವಿಷ್ಕಾರಗೊಳಿಸಿ ಪೂರೈಸುತ್ತಿದ್ದಾರೆ.mini dampar

ಕೃಷಿಕರು ಹಂತ ಹಂತದಲ್ಲಿ ನೀಡುವ ಮಾಹಿತಿಗಳು, ಕೃಷಿಕರಿಂದ ದೊರೆಯುವ ಪ್ರೋತ್ಸಾಹದ ಫಲವಾಗಿ ವಿಟೆಕ್ ಸಂಸ್ಥೆ ಹಲವಾರು ಕೃಷಿಯಂತ್ರೋಪಕರಣಗಳನ್ನು ಯಶಸ್ವಿಯಾಗಿ ರೂಪಿಸುತ್ತಾ ಬಂದಿದ್ದು ಭಾರತೀಯ ಪೇಟೆಂಟ್ ಮಾನ್ಯತೆಯನ್ನೂ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಡಿಕೆ ಬೆಳೆಗಾರರು ಅಡಿಕೆ ಸುಲಿಯುವಲ್ಲಿ ಪಡುತ್ತಿದ್ದ ಕಷ್ಟ ಹಾಗೂ ರೈತರಿಗೆ ಕಾರ್ಮಿಕರ ಕೊರತೆ ನೀಗಿಸಿ ಬೆಳೆಗಾರರಿಗೆ ಸೂಕ್ತ ಸಹಾಯ ಮಾಡಬೇಕು ಎಂಬ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

mini dampar1
ಈ ಹಿನ್ನಲೆಯಲ್ಲಿ ನೂತನ ಹಲವು ಯಂತ್ರಗಳ ಶೋಧನೆ ಸಾಧ್ಯವಾಯಿತು. ಅಡಿಕೆ ಸುಲಿಯವ ಯಂತ್ರದ ಆವಿಷ್ಕಾರಕ್ಕೂ ಅದೇ ಪ್ರೇರಣೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ತಾಂತ್ರಿಕತೆಯನ್ನು ಈ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿದ್ದು ರೈತರಿಗೆ ಕಾರ್ಮಿಕರ ಕೊರತೆಯಿಂದ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸುವಲ್ಲಿ ನಿರಂತರ ಶ್ರಮಿಸುತ್ತಿದೆ.

mini dampar2

ಅಡಿಕೆ ಸುಲಿಯುವ ಯಂತ್ರ
ವಿ-1,ವಿ-2,ವಿ-4 ಮತ್ತು ವಿ-6 ಎಂಬ ನಾಲ್ಕು ಮಾದರಿಗಳಲ್ಲಿ ಅಡಿಕೆ ಸುಲಿಯುವ ಯಂತ್ರ ಲಭ್ಯವಿದೆ. ಈ ಮಾದರಿಗಳಲ್ಲಿ ಒಂದು ಬದಿ ಬ್ಲೇಡ್, ಎರಡು ಬದಿ ಬ್ಲೇಡ್ ಎಂಬ ಎರಡು ಮಾದರಿಗಳನ್ನು ಪರಿಚಯಿಸಲಾಗಿದೆ. ವಿ-1 ಮಾದರಿಯು ಒಂದು ಬದಿ ಬ್ಲೇಡ್ ಹೊಂದಿದ ಯಂತ್ರ ಗಂಟೆಗೆ 2-3ಡಬ್ಬ ಅಡಿಕೆ ಸುಲಿದರೆ ಎರಡು ಬದಿ ಬ್ಲೇಡ್ ಹೊಂದಿದ ಯಂತ್ರ 4-5ಡಬ್ಬ ಅಡಿಕೆ ಸುಲಿಯುವ ಸಾಮಥ್ರ್ಯ ಹೊಂದಿದೆ. ವಿ-2ಮಾದರಿಯ 1ಬದಿ ಬ್ಲೇಡ್ ಹೊಂದಿದ ಯಂತ್ರ ಒಂದು ಗಂಟೆಗೆ 5-6ಡಬ್ಬ ಅಡಿಕೆ ಸುಲಿದರೆ 2ಬದಿ ಬ್ಲೇಡ್ ಹೊಂದಿದ ಯಂತ್ರ 7-8ಅಡಿ ಅಡಿಕೆ ಸುಲಿಯುತ್ತದೆ. ವಿ-4ಮಾದರಿಯಲ್ಲಿ 1ಬದಿ ಬ್ಲೇಡ್ ಹೊಂದಿದ ಯಂತ್ರ 8-10ಡಬ್ಬ ಅಡಿಕೆ ಸುಲಿದರೆ ಎರಡು ಬದಿ ಬ್ಲೇಡ್ ಹೊಂದಿದ ಯಂತ್ರ 12-14ಕೆಜಿ ಅಡಿಕೆ ಸುಲಿಯುತ್ತದೆ. ವಿ-6ಮಾದರಿಯಲ್ಲಿರುವ 1ಬದಿ ಬ್ಲೇಡ್ ಹೊಂದಿದ ಯಂತ್ರ ಗಂಟೆಯೊಂದಕ್ಕೆ 14-16ಡಬ್ಬ ಅಡಿಕೆ ಸುಲಿದರೆ ಎರಡು ಬದಿ ಬ್ಲೇಡ್ ಹೊಂದಿದ ಯಂತ್ರ 20-25ಡಬ್ಬ ಅಡಿಕೆ ಸುಲಿಯುತ್ತದೆ. ಇಷ್ಟೇಅಲ್ಲದೆ ಗೊನೆಯಿಂದ ಅಡಿಕೆ ಬಿಡಿಸುವ ಯಂತ್ರವೂ ವಿ.ಟೆಕ್ ಅನ್ವೇಷಿಸಿದೆ. ಈ ಯಂತ್ರದಿಂದ ನೇರವಾಗಿ ಅಡಿಕೆ ಸುಲಿಯುವ ಯಂತ್ರಕ್ಕೆ ಕನೆಕ್ಷನ್ ಮಾಡಬಹುದು. ಎಲಿವೇಟರ್ ಮತ್ತು ವ್ರೈಬ್ರೇಟರ್ ಯಂತ್ರಗಳನ್ನೂ ವಿಟೆಕ್ ಅಭಿವೃದ್ಧಿ ಪಡಿಸಿದೆ.

mini dampar3

ಕೂಲಿಕಾರ್ಮಿಕರ ಬವಣೆ ಎದುರಿಸುತ್ತಿರುವ ಕೃಷಿಕರಿಗೆ ಸಹಕಾರಿಯಾಗಲು ಮೋಟೋಕಾರ್ಸ್ ಗಳನ್ನು ಈ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಮೋಟೋಕಾರ್ಸ್ 250ಕೆ.ಐ ಹಾಗೂ ಮೋಟೋಕಾರ್ಸ್ 4ಟಿಕೆಐ ಮಾದರಿಗಳು ಹೆಚ್ಚು ಜನಪ್ರಿಯವಾಗಿವೆ. ಭತ್ತಕಟಾವು ಮಾಡುವ ಯಂತ್ರವೂ ವಿ ಟೆಕ್ ಸಂಸ್ಥೆಯ ಮತ್ತೊಂದು ಹೆಗ್ಗಳಿಕೆ. ಡಿಸೆಲ್ ಚಾಲಿತ ಯಂತ್ರ ಇದಾಗಿದೆ. ಭತ್ತ ಕಟಾವು ಮಾಡಿದ ನಂತರ ಸಣ್ಣ ಸಣ್ಣ ಕಟ್ಟುಮಾಡಿ ಒಂದೆಡೆ ಹಾಕುವ ಸೌಲಭ್ಯವನ್ನು ಹೊಂದಿದೆ. ಈ ಯಂತ್ರ ಸಣ್ಣ ಬೆಳೆಗಾರರಿಗೆ ಅನುಕೂಲವಾದ ರೈತ ಮಿತ್ರನಂತೆ ಕೆಲಸ ನಿರ್ವಹಿಸುತ್ತವೆ.
ಇಷ್ಟೇ ಅಲ್ಲದೆ ಬೃಹತ್ ಕೃಷಿ ಚಟುವಟಿಕೆಗೆ ಪೂರಕವಾಗುವಂತಹ ದೊಡ್ಡ ದೊಡ್ಡ ಯಂತ್ರಗಳ ಆವಿಷ್ಕಾರದಲ್ಲೂ ಈ ಸಂಸ್ಥೆ ಎತ್ತಿದ ಕೈ. ಶಾರ್ಪ್ ಎಸ್ಕವೇಟರ್ಸ್ ಸೇರಿದಂತೆ ಇತರ ಯಂತ್ರೋಪಕರಣಗಳನ್ನು ಉತ್ಪಾದಿಸಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನೀಡುತ್ತಾ ಬಂದಿದೆ.
ಸಂಪರ್ಕ:
ವಿ -ಟೆಕ್ ಇಂಜಿನಿಯರ್ಸ್
ಕುಂಟವಳ್ಳಿ, ಮೇಳಿಗೆ ಅಂಚೆ, ತೀರ್ಥಹಳ್ಳಿ, ಶಿವಮೊಗ್ಗ - 577 415
08181-272075, 272175, 9448105006

0 comments:

Post a Comment