ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಬಹೂಪಯೋಗಿ ಮೊಟೋಕಾರ್ಟ್
- ಭವ್ಯಾ ಮಯ್ಯ.
ಕೃಷಿಯೆಂದರೆ ಎಲ್ಲರು ತಲೆ ಮೇಲೆ ಕೈ ಹೊತ್ತುಕೊಳ್ಳುವಂತಹ  ಕಾಲವಿದು. ಏಕೆಂದರೆ ಕೃಷಿ ಮಾಡಲು ಇಂದಿನ ಜತೆಗೆ ಉತ್ಸುಕರಾಗುತ್ತಿಲ್ಲ.  ಯುವಜನಾಂಗ ಡಾಕ್ಟರ್, ಇಂಜಿನಿಯರ್ ಕೋರ್ಸ್  ಗಳಿಗೆ ಮುಖ ಮಾಡಿ ನಗರದತ್ತ ಸಾಗುತ್ತಿದ್ದಾರೆ. ಇದೊಂದು ಸಮಸ್ಯೆಯಾದರೆ ಇನ್ನೊಂದೆಡೆ ಕಾರ್ಮಿಕರ ಸಮಸ್ಯೆ. ರೈತ ಬೆಳೆಸುವಂತಹ ಉತ್ಪನ್ನಗಳನ್ನು ಒಂದು ಕಡೆಯಿಂದ ಇನ್ನೊಂದೆಡೆ ಸಾಗಿಸಲು ಕಾರ್ಮಿಕರ ಅಗತ್ಯವಿದೆ. ಆದರೆ ಕಾರ್ಮಿಕರು ಸಿಗುವುದು ತುಂಬಾ ಕಷ್ಟಕರ.


 
ಸಿಕ್ಕರೂ ಸಹ ಕೂಲಿ ಬೇಡಿಕೆಗಳನ್ನು ಪೂರೈಸುವುದು ರೈತರಿಗೆ ಅಸಾಧ್ಯಾವಾಗಿದೆ. ಆದರೆ ಈ ಎಲ್ಲಾ ಸಮಸ್ಯಗಳಿಗೆ ಉತ್ತರವೆಂಬಂತೆ ಸಾಗರದ ಹೆಗ್ಡೆ ಆಗ್ರೋ ಇಂಪೆಕ್ಸ್ ಪ್ರೈ.ಲಿ.ಸಂಸ್ಥೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ರೈತರ ಕಷ್ಟ ನಿವಾರಣೆ ನಡೆಸುತ್ತಿದೆ.  ಹೆಗ್ಡೆ ಆಗ್ರೊ ಇಂಪೆಕ್ಸ್ ಕಂಪನಿಯು ರೈತರಿಗೆ ಸಹಕಾರಿಯಾಗುವಂತೆ  ಹಲವು ಕೊಡುಗೆಗಳನ್ನು ನೀಡಿದೆ. ಹೆಗ್ಡೆ ಕಂಪನಿಯು "ಮೋಟೊ ಕಾರ್ಟ್ ಹೋಂಡಾ ಪವರ್"  ಎಂಬ ಕೈಗಾಡಿಗಳನ್ನು ವಿವಿಧ ಮಾದರಿಯಲ್ಲಿ ಕೃಷಿಕರಿಗೆ ನೀಡುತ್ತಿದೆ.ಮತ್ತೊಂದು ಮಹತ್ವದ ಅಂಶವೆಂದರೆ ಈ ಗಾಡಿಗಳಿಗೆ ಸಬ್ಸಿಡಿ ಕೂಡಾ ಲಭ್ಯವಿದೆ.


ಮಾದರಿಗಳು
ಈ ಕಂಪನಿಯು  4 ಮಾದರಿಗಳಲ್ಲಿ ಗಾಡಿಗಳನ್ನು ಅವಿಷ್ಕಾರಮಾಡಿದೆ.  ಅದುವೇ ಮೋಟೊ ಕಾರ್ಟ್-100, ಮೋಟೊ  ಕಾರ್ಟ್-125, ಮೋಟೊ ಕಾಟರ್್-250, ಮೋಟೊಕಾರ್ಟ್- 350. ಇವೆಲ್ಲ ಮಾದರಿಗಳಿಗೂ ವಿಶೇಷ ಸಬ್ಸಿಡಿ ಸೌಲಭ್ಯವಿದೆ.

 ಮೋಟೊ ಕಾಟ್ರ್ -100 ನ ವಿಶೇಷತೆಗಳು
ಈ ಗಾಡಿಯು  ಸುಮಾರು 100ರಿಂದ 120 ಕೆಜಿ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವಿದೆ.  ಇದಕ್ಕೆ 1.6 ಎಚ್ ಪಿ ಪೆಟ್ರೋಲ್ ಹೊಂಡಾ ಇಂಜಿನ್ ಆಳವಡಿಸಲಾಗಿದೆ. ಇದರಲ್ಲಿ ನಾಲ್ಕು ಚಕ್ರಗಳಿದ್ದು, ಹಿಂದಿನ 2 ಚಕ್ರಗಳಿಗೆ ಇಂಜಿನ್ ಸಂಪರ್ಕ ಇರುವುದಿಲ್ಲ್ಲ. ಮುಂದಿನ ಚಕ್ರಗಳು ಚಲಿಸಿದಂತೆ ಇವುಗಳು ತಿರುಗುತ್ತದೆ. ಅಪರೇಟ್ ಮಾಡುವುದು ಕೇವಲ ಒಂದು ಬಟನ್ ನಿಂದ ಮಾತ್ರ.ಇದರಲ್ಲಿ ಕ್ಲಚ್, ಬ್ರೇಕ್, ಎಕ್ಸಿಲರೇಟರ್  ಇದೆ. ಟಿಪ್ಪರ್ ನಂತೆ ಇರುವ ಈ ಗಾಡಿಯಲ್ಲಿ 4.5 ಆಡಿಯಷ್ಟಿರುವ ಬಕೆಟ್ ನಲ್ಲಿರುವ ವಸ್ತುಗಳನ್ನು ನೆಲಕ್ಕೆ ಸುರಿಯುವ ಸಾಮರ್ಥ್ಯವಿದೆ. ಸಮತಟ್ಟು ಪ್ರದೇಶದಲ್ಲಿ ಈ ಗಾಡಿಯನ್ನು ನ್ಯೂಟ್ರಲ್ ಸ್ಥಿತಿಯಲ್ಲಿ ದೂಡಿಕೊಂಡು ಹೋಗಬಹುದು. ಇಳಿಯುವ ಮತ್ತು ಮೇಲೆರುವ ಸ್ಥಿತಿಯಲ್ಲಿ ಗಾಡಿಯ ಹೇಂಡ್ಲ್ ಹಿಡಿಯುವವರಿಗೆ ಯಾವುದೇ ಸಮಸ್ಯೆಯಾಗದಂತೆ ನಿಧಾನವಗಿ ಇಳಿದು-ಹತ್ತುವ ಸಾಮಥ್ರ್ಯವ್ಯವಸ್ಥೆ ಮಾಡಲಾಗಿದೆ.

ಮೋಟೊ ಕಾಟ್ರ್ -350

ಈ ಗಾಡಿಯು ಸುಮಾರು 400 ಕೆಜಿ ವಸ್ತುಗಳನ್ನು ಸಾಗಿಸುವ ಸಾಮಥ್ರ್ಯವಿದೆ.  ಇದಕ್ಕೆ 5.5 ಎಚ್ ಪಿ ಪೆಟ್ರೋಲ್ ಹೊಂಡಾ ಇಂಜಿನ್ ಮತ್ತು 160 ಸಿ ಸಿ ಸಾಮರ್ಥ್ಯದ ಇಂಜಿನ್ ಆಳವಡಿಸಲಾಗಿದೆ. ಇದರ ಹಿಂಭಾಗದಲ್ಲಿ ಟ್ಯಾಕ್ಟರ್ ಮಾದರಿಯ 2 ಚಕ್ರಗಳಿದ್ದು, ಮುಂದಿನ ಭಾಗಕ್ಕೆ ರಬ್ಬರ್ ಟೈಯರ್ ನ್ನು ಆಳವಡಿಸಲಾಗಿದೆ. ಹೆಲಿಕಲ್ ಗೇರ್ ಬಾಕ್ಸ್ ಇದ್ದು, ಹೈಡ್ರಾಲಿಕ್ ಬ್ರೇಕ್ ನಿಂದ ಇಳಿಜಾರಿನಲ್ಲಿ ಹಂತಹಂತವಾಗಿ ಚಲಿಸುವಾಗ ಬ್ರೇಕ್ ಹಾಕಲು ಸಹಕರಿಯಾಗಿದೆ. ಈ ಗಾಡಿಯ ಟ್ರೇಯು 8.5 ಆಡಿಯಷ್ಠಿದೆ. ಮೂರು ಕಡೆಯಿಂದ ತೆರೆಯುವ ಮೆಟಲ್ ಬಾಗಿಲನ್ನು ಅಳವಡಿಸಲಾಗಿದೆ. 2 ಲೀ. ಪೆಟ್ರೋಲ್ ಟ್ಯಾಂಕ್ ಇದ್ದು, ಇದು 2-1/2ಗಂಟೆಗಳ ಕಾಲ ಬಳಸಬಹುದು. ಇದು ಗಂಟೆಗೆ 4 ಕಿ.ಮೀ ಚಲಿಸುತ್ತದೆ.

ಈ ಮೋಟೊ ಕಾರ್ಟ್ ಗಾಡಿಯನ್ನು ಯಾರೂ ಸಹ ಬಳಸಬಹುದಾಗಿದೆ. ಇದರ ಚಲಾವಣೆ ತುಂಬಾ ಸುಲಭ.  ಈ ಗಾಡಿಯು ಕೂಲಿಗಳ ಕೊರತೆಯನ್ನು ನೀಗಿಸಿದೆ. ಈ ಗಾಡಿಯಲ್ಲಿ ಹೊಲಕ್ಕೆ ಗೊಬ್ಬರ ಸಾಗಿಸಲು, ಹೊಲದಿಂದ ಕೃಷಿ ಉತ್ಪನ್ನಗಳನ್ನು ಸಾಗಿಸಲು, ಮಣ್ಣು, ತ್ಯಾಜ್ಯ ಸಾಗಾಣೀಕೆಗೆ ಬಳಸಬಹುದು. ಕೋಳಿ ಸಾಕಾಣೆ ಮನೆಯಿಂದ ಮೊಟ್ಟೆ ಸಾಗಾಣಿಕೆಗೆ ಹಾಗೂ ಕೋಳಿಗಳ ಆಹಾರವನ್ನು ಸಾಗಿಸಲೂ ಉಪಯೋಗಿಸಬಹುದಾಗಿದೆ. ಅರಸಿನ ಸಂಸ್ಕರಣ ಘಟಕದಿಂದ ಬೇಯಿಸಿದ ಅರಶಿನ ಸಾಗಾಣಿಕೆ, ಎರೆಹುಳು ಘಟಕದಿಂದ ಎರೆಗೊಬ್ಬರ ಸಾಗಾಣಿಕೆ, ದ್ರಾಕ್ಷಿ ತೋಟದಿಂದ ಕೊಯಿಲು ಮಾಡಿದ ದ್ರಾಕ್ಷಿ ಸಾಗಾಣಿಕೆ ಮಾಡಲು, ಕಾಫಿ ತೋಟದಲ್ಲಿ ಕೊಯಿಲು ಮಾಡಿದ ಕಾಫಿ ಬೀಜ, ಗಿಡಗಳಿಗೆ ಗೊಬ್ಬರ ಹಾಗೂ ಸಂಚಾರಿ ಸಿಂಪರಣಾ ಯುನಿಟ್, ನರ್ಸರಿ ಹಾಗೂ ತೋಟಗಾರಿಕೆ ಕೇಂದ್ರಗಳಲ್ಲಿ ಸಸಿಗಳನ್ನು ಅತ್ತಿಂದಿತ್ತ ಸಾಗಾಣಿಕೆ ಮಾಡಲು, ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಡಿದ ಹಾಲನ್ನು ಸಾಗಿಸಲು ಹಾಗೂ ಒಣಗಿಸಿದ ರಬ್ಬರ್ ಶೀಟುಗಳನ್ನು ಸಾಗಿಸಲು, ಹಲೋ ಬ್ಲಾಕ್, ಇಟ್ಟಿಗೆ, ಹಂಚು ತಯಾರಿಕ ಘಟಕಗಳಲ್ಲಿ ಸಾಗಾಣಿಕೆ , ತೆಂಗಿನಕಾಯಿ, ಬಾಳೆಕಾಯಿ, ಎಳನೀರು ಸಾಗಾಣಿಕೆಗೆ
ಅಂಗಡಿ, ಉಗ್ರಾಣಗಳಲ್ಲಿ ಸಾಮಾನು ಸರಂಜಾಮುಗಳನ್ನು ಲೋಡ್ ಮಾಡಲ ಹಾಗೂ ಅನ್ ಲೋಡ್ ಮಾಡಲು ಈ ಗಾಡಿಗಳನ್ನು ಬಳಸಬಹುದಾಗಿದೆ.ಒಟ್ಟಿನಲ್ಲಿ ಬಹುಪಯೋಗಿ ಈ ಗಾಡಿ ಎಲ್ಲರೂ ಮೆಚ್ಚುವಂತಿದೆ ಎಂಬುದರಲ್ಲಿ ಎರಡು ಮಾತಿಲ್ಲ.ಸಂಪರ್ಕ
ಹೆಗ್ಡೆ ಆಗ್ರೋ ಇಂಪೆಕ್ಸ್ ಪ್ರೈವೆಟ್ ಲಿಮಿಟೆಡ್, 2ಕಿ.ಮೀ, ಬಿ.ಕೆ.ರೋಡ್,ಸಾಗರ - 577401, ಕನರ್ಾಟಕ. 08183 - 229363, 221233,221234

0 comments:

Post a Comment