ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
" ಕ್ವಾಲಿಟಿ ಪ್ರಾಡಕ್ಟ್ಗೆ ಇನ್ನೊಂದು ಹೆಸರೇ "ಮಥನ". ಗೃಹಬಳಕೆಯ ತಾಂತ್ರಿಕ ವಸ್ತುಗಳಿರಲಿ, ಕಪಾಟು, ಅಲ್ಮೇರಾಗಳಿರಲಿ, ಮೊಸರು ಕಡೆಯುವ ಯಂತ್ರಗಳಿರಲಿ, ಬೃಹತ್ ಯಂತ್ರಗಳಿರಲಿ , ಕೃಷಿ ಯಂತ್ರೋಪಕರಣಗಳು ಹೀಗೆ ಯಾವೊಂದು ಯಂತ್ರವಿರಲಿ, ಉಪಕರಣವಿರಲಿ ಅದಕ್ಕೆ ಮಥನದಲ್ಲಿದೆ ಸೂಕ್ತ ಉತ್ತರ. ಮಥನಕ್ಕೆ ಪ್ರತಿಯೊಂದು ಮನೆಯಲ್ಲೂ ಈಗಾಗಲೇ ಉತ್ತಮ ಸ್ಥಾನ ಪ್ರಾಪ್ತಿಯಾಗಿದೆ. ಗುಣಮಟ್ಟದಲ್ಲಿ ಯಾವೊಂದು ರಾಜಿಯಿಲ್ಲದೆ, ಎಲ್ಲರಿಗೂ ದೊರಕುವಂತಹ ಕೈಗೆಟಕುವ ದರದಲ್ಲಿ ಮಥನದ ಪ್ರಾಡಕ್ಟ್ ಗಳು ಲಭ್ಯ. ಗ್ರಾಹಕ ಸ್ನೇಹಿಯಾಗಿ ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ ಈ ಮಥನ. "


     


ಕೃಷಿಕ ಸ್ನೇಹಿಯಾಗಿ, ಮನೆಯೊಳಗಿರುವ ಮಹಿಳೆಯರ ಅವಶ್ಯಕತೆಗಳಾದ ಮೊಸರುಕಡೆಯುವ ಯಂತ್ರ, ನೀರು ಕಾಯಿಸುವ ಯಂತ್ರ ಹೀಗೆ ಹಲವು ಅವಶ್ಯಕತೆಗಳನ್ನು ಪೂರೈಸುತ್ತಾ, ಕಚೇರಿ ಗಳಿಗೆ ಬೇಕಾಗಿರುವ ಅಲ್ಮೇರಾ, ಇತರ ಪರಿಕರಗಳು ಮಾತ್ರವಲ್ಲದೆ ಕೃಷಿಕರ ಉಪಯೋಗಕ್ಕಿರುವ ಗಾಡಿಗಳು , ಚಾಲಿ ಅಡಿಕೆ ಸುಲಿಯುವ ಯಂತ್ರ, ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ, ರಬ್ಬರ್ ಶೀಟ್ ಮಾಡುವ ಯಂತ್ರ, ಗೊರಬಲು , ಗೋಟು ಪಾಲಿಶಿಂಗ್ ಯಂತ್ರಗಳು, ಚೀಲ ಸಾಗಿಸುವ ಗಾಡಿ ಹೀಗೆ ಹಲವು ರೀತಿಯ ಉಪಕರಣಗಳು  ಮಾರುಕಟ್ಟೆಯಲ್ಲಿ ಸ್ಥಾನಗಳಿಸಿವೆ.
ಮಥನದ ಮೊಸರು ಕಡೆಯುವ ಯಂತ್ರಗಳು ಅತ್ಯಂತ ಜನಪ್ರಿಯ ಪಡೆದ ಸಾಧನವಾಗಿದೆ. 10ರಿಂದ 15 ನಿಮಿಷಗಳಲ್ಲಿ ಬೆಣ್ಣೆ ಬರುವ, ದೀರ್ಘ ಬಾಳಿಕೆಯ ಮೋಟಾರ್, ಆಕರ್ಷಕ ವಿನ್ಯಾಸ, ಸುಲಭ ನಿರ್ವಹಣೆ, ಕಡಿಮೆ ಖಚರ್ು ಈ ಯಂತ್ರದ ವಿಶೇಷತೆ.
ನೀರು ಕಾಯಿಸುವ ಕೊಳಾಯಿ ಮತ್ತೊಂದು ಪಾಪ್ಯುಲರ್ ಪ್ರಾಡಕ್ಟ್. ಕಡಿಮೆ ಉರುವಲು, 15ನಿಮಿಷದಲ್ಲಿ ಬಿಸಿನೀರು, ಸ್ಟೈನ್ ಲೆಸ್ ಸ್ಟೀಲ್ನಿಂದಾಗಿ ದೀರ್ಘಬಾಳಿಕೆ, ಕಡಿಮೆ ನಿರ್ವಹಣಾ ವೆಚ್ಚ, ತಾಪಮಾನದ ಸಂಪೂರ್ಣ ಬಳಕೆ, ಅಳವಡಿಕೆಗೆ ಕಡಿಮೆ ಜಾಗ ಇದರ ಸ್ಪೆಷಾಲಿಟಿ.
ಚಾಲಿ ಅಡಿಕೆ ಸುಲಿಯುವ ಯಂತ್ರದ ಮೊದಲ ಮಾದರಿಯಲ್ಲಿ 2ಎಚ್.ಪಿ.ಮೋಟಾರ್ ಅಳವಡಿಸಲಾಗಿದೆ. ಗಂಟೆಗೆ 80ಕೆಜಿ ಸುಲಿದ ಅಡಿಕೆ ಈ ಯಂತ್ರದ ಮೂಲಕ ಲಭ್ಯ. ಮತ್ತೊಂದು ಮಾದರಿಯಲ್ಲಿ ಗಂಟೆಗೆ 40ಕೆಜಿ ಸುಲಿದ ಅಡಿಕೆ ಲಭ್ಯ.
ಗಾಡಿಗಳೂ ಅತ್ಯುತ್ಕೃಷ್ಟ ಮಾದರಿಯಲ್ಲಿ ಲಭ್ಯವಾಗುತ್ತವೆ. ವಿಶಾಲವಾದ ಟಬ್ ಅಳವಡಿಸಲಾದ ಈ ಗಾಡಿಗಳಲ್ಲಿ ಸರಕುಗಳನ್ನು ಸುಲಭವಾಗಿ ಏರಿಸಲು ಹಾಗೂ ಇಳಿಸಲು ಅನುಕೂಲವಾಗುತ್ತದೆ.

ಎಲ್ಲ ಕಡೆಗಳಿಗೂ ಕೊಂಡೊಯ್ಯಬಲ್ಲಂತಹ ಸಾಮರ್ಥ್ಯ ನಿರ್ವಹಣೆಗೆ ಯಾವುದೇ ಅನುಭವವೂ ಬೇಕಾಗಿರುವುದಿಲ್ಲ. 100ಕೆಜಿ ಭಾರ ಹೊರುವಂತಹ ಸಾಮರ್ಥ್ಯ. ಪೌಡರ್ ಕೋಟೆಡ್ ಗಾಡಿಯಾದ ಹಿನ್ನಲೆಯಲ್ಲಿ ತುಕ್ಕುಹಿಡಿಯವಂತಹ ಸಾಧ್ಯತೆ ವಿರಳ. ದೊಡ್ಡ ಗಾಲಿ ಅಳವಡಿಸಿದ ಕಾರಣ ಎಲ್ಲಿಬೇಕಾದರೂ ಸುಲಭವಾಗಿಕೊಂಡೊಯ್ಯಬಹುದಾಗಿದೆ.
ಗೊರಬಲು/ಗೋಟು ಪಾಲಿಶಿಂಗ್ ಯಂತ್ರದಲ್ಲಿ ಗೊರಬಲು ಅಥವಾ ಗೋಟಿನ ಸಿಪ್ಪೆ ತೆಗೆಯುವ ಸುಲಭ ಸಾಧನ ವ್ಯವಸ್ಥೆಯಿದೆ. 1.5 ಹೆಚ್.ಪಿ. ಉತ್ತಮ ಗುಣಮಟ್ಟದ ಮೋಟಾರ್ ಅಳವಡಿಸಲಾಗಿದೆ. ಕಡಿಮೆ ನಿರ್ವಹಣಾ ವೆಚ್ಚ, ಅಧಿಕ ಲಾಭ, ಸುಲಭ ಸಾಗಾಣಿಕೆಗೆ ಅನುಕೂಲವಾಗಿದೆ.
ಚೀಲ ಸಾಗಿಸುವ ಗಾಡಿಯೂ ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.


ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರದಲ್ಲಿ ಅತ್ಯಂತ ಸುಲಭವಾಗಿ ಅಡಿಕೆ ಬೇರ್ಪಡಿಸಬಹುದಾಗಿದೆ.1 ಎಚ್.ಪಿ. ಉತ್ತಮ ಗುಣಮಟ್ಟದ ಮೋಟಾರ್ ಅಳವಡಿಸಲಾಗಿದೆ. ನಿರ್ವಹಣೆಗೆ ಯಾವುದೇ ಅನುಭವ ಬೇಕಾಗಿಲ್ಲ. ಸರುಕ್ಷಿತ ನಿರ್ವಹಣೆ, ಸುಲಭ ಸಾಗಾಣಿಕೆಗೆ ಅನುಕೂಲಕರ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
 ಉತ್ತಮ ಗುಣಮಟ್ಟದ ರಬ್ಬರ್ ಶೀಟ್ ಮಾಡುವ ಯಂತ್ರವೂ ಇಲ್ಲಿದೆ.

ಇಷ್ಟೆಲ್ಲಾ ಅಲ್ಲದೆ ಗೃಹೋಪಯೋಗಿ ಸಣ್ಣ ಸಣ್ಣ ಯಂತ್ರಗಳನ್ನೂ ಮಥನದಲ್ಲಿ ನೋಡಬಹುದಾಗಿದೆ.
 ಸಂಪರ್ಕ
ಮಥನ ಹೋಂ ಇಂಡಸ್ಟ್ರೀಸ್
ಬಂದಗದ್ದೆ , ಕೆಳದಿ ಪೋಸ್ಟ್, ಸಾಗರ ತಾಲೂಕು.
ಶಿವಮೊಗ್ಗ ಜಿಲ್ಲೆ
ದೂರವಾಣಿ: 08183 260063
94482 38663, 9663408163

0 comments:

Post a Comment