ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
" ನಾನು ಆಲೆಮನೆಗೆ ಕಬ್ಬಿನ ಹೊರೆ ಹೊರುತ್ತೇನೆ" ಶ್ರೀಧರಸ್ವಾಮಿಗಳು
 


ಶ್ರೀಧರಸ್ವಾಮಿಗಳು ಯಾವ ರೀತಿಯ ಹಿಂಸೆಯನ್ನೂ ಸಹಿಸುತ್ತಿರಲಿಲ್ಲ. ಅನಿವಾರ್ಯ ಎಂದಾದರೆ ವಹಿಸಿದ ಕೆಲಸವನ್ನು ಬಿಟ್ಟು ಬೇರೆಯದನ್ನೇ ಮಾಡುತ್ತಿದ್ದರು. ಅಂಥದೊಂದು ಸ್ಮರಣೆ. ಶೀಗೇಹಳ್ಳಿಯಲ್ಲಿ ಒಂದು ದಿನ ತುಂಬ ಸಾಧಕರು ಸೇರಿದ್ದರು. ಅವರಲ್ಲಿ ಕೆಲವರು ಗದ್ದೆ ಕೆಲಸಕ್ಕೆ ಹೊರಟಿದ್ದರು. ಹಾಗೆ ಎದುರಿಗೆ ಸಿಕ್ಕಿದ ಶ್ರೀ ಶ್ರೀಧರರನ್ನು ಕುರಿತು " ನಾವು ಗುರುಸೇವೆಯ ಒಂದು ಭಾಗವಾದ ಗದ್ದೆ ಕೆಲಸಕ್ಕೆ ಹೋಗುತ್ತಿದ್ದೇವೆ. ನೀವೂ ಬರುವಿರಲ್ಲವೇ?" ಎಂದು ಒಬ್ಬ ಸಾಧಕರು ಪ್ರಶ್ನಿಸಿದರು. " ಖಂಡಿತವಾಗಿ ಬರುತ್ತೇನೆ. ಗುರುಸೇವೆಗೆ ಬರುವುದಿಲ್ಲವೆನ್ನಲಾದೀತೆ? ನಡೆಯಿರಿ ಹೊರಡೋಣ" ಎಂದರು.


ಸರಿ ಹತ್ತಿರದಲ್ಲಿಯೇ ಇದ್ದ ಗದ್ದೆಗೆ ಹೋಗಿ ಎಲ್ಲ ಸಾಧಕರೂ ಅವರವರ ಕೆಲಸದಲ್ಲಿ ಮಗ್ನರಾದರು. ಅವರೊಂದಿಗೇ ಇದ್ದ ಶ್ರೀಧರರಿಗೆ ಗದ್ದೆಯಲ್ಲಿ ಗುದ್ದಲಿಯಿಂದ ಅಗೆಯುವ ಕೆಲಸವನ್ನು ಕೊಟ್ಟರು. ಭಗವಂತ! ಹಾಗೆ ಅಗೆಯುವಾಗ ಶ್ರೀಧರರ ಕಣ್ಣಿಗೆ ಭೂಮಿಯೊಳಗಿದ್ದ ಎರೆಹುಳುಗಳು ಕಾಣಬೇಕೆ? ಕೂಡಲೇ ಅಂಥ ಎರೆಹುಳುಗಳನ್ನು ಕೊಲ್ಲುವುದು ಹಿಂಸೆಯೆಂದು ಅವರಿಗೆ ತೋರಿತು.


 ಆ ಕೂಡಲೇ ಸಾಧಕರ ಬಳಿ ಓಡಿಬಂದು " ನಾನು ಆಲೆಮನೆಗೆ ಕಬ್ಬಿ ಹೊರೆ ಹೊರುತ್ತೇನೆ. ಎರೆಹುಳುಗಳನ್ನು ಹಿಂಸಿಸುವ ಕೆಲಸ ನನ್ನಿಂದ ಎಷ್ಟುಮಾತ್ರಕ್ಕೂ ಸಾಧ್ಯವಿಲ್ಲ " ಎಂದು ಅಚಲರಾಗಿ ಹೇಳಿದರು. ಶ್ರೀ ಶಿವಾನಂದರಿಗೆ ಸಾಧಕರೊಬ್ಬರು " ಶ್ರೀ ಶ್ರೀಧರರಿಗೂ ಕೆಲಸ ಕೊಡುತ್ತಾರೆ" ಎಂದು ಬಂದು ಹೇಳಿದರು. ಆ ಕೂಡಲೇ ಶ್ರೀ ಶಿವಾನಂದರು ಶ್ರೀಧರರಿಗೆ ಯಾವ ಕೆಲಸವನ್ನೂ ಕೊಡಬಾರದೆಂದು ಆಜ್ಞೆಮಾಡಿದರು. ಶ್ರೀಧರರ ಮನಸ್ಥಿತಿ ಶಿವಾನಂದರಿಗೆ ಅರಿವಿತ್ತು.

ಸ್ಮರಣೆ: ಶ್ರೀಧರ ಶರ್ಮಾ ಜಿ.ಟಿ

" ಅಥರ್ವ", ವಿಜಯನಗರ, ಸಾಗರ.

0 comments:

Post a Comment