ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

 ಪ್ರಾದೇಶಿಕ ಸುದ್ದಿ

ಮಕ್ಕಳ ಮನೋವೈಜ್ಞಾನಿಕ ನೆಲೆಗಟ್ಟನ್ನು ಅರಿತುಕೊಂಡು ಒತ್ತಡ ಹೇರದಂತೆ ನಿರಂತರ ಸಾಧನೆಗೆ ಪ್ರೇರಣೆ ನೀಡುವ ಹೆತ್ತವರ ಜವಾಬ್ದಾರಿ ಅನುಕರಣೀಯ. ಈ ನಿಟ್ಟಿನಲ್ಲಿ ಬಾಲಕಲಾವಿದೆ ಅಯನಾ ವಿ ರಮಣ್ ಅವರ ಸಾಧನೆ ಒಂದು ಮಾದರಿಯಾಗಿದೆ ಎಂದು ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಚಂದ್ರಹಾಸ ರೈ ಹೇಳಿದ್ದಾರೆ.
ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ನಡೆದ ಅಯನಾ ಅವರ ಮನೆ ಮನೆಗೆ ಭರತನಾಟ್ಯ ಸರಣಿಯ 250ನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅಯನಾಳ ನೃತ್ಯ ಪಯಣದ ಮುಂದಿನ ಪರಿಕಲ್ಪನೆಗಳಾದ `ನಾಟ್ಯಾಯನ', `ಯುಗಲ ಮುದ್ಗಲ' ಮತ್ತು `ಲಯ-ಲಾಸ್ಯ' ಗಳ ಬ್ರೋಶರ್ ಬಿಡುಗಡೆಗೊಳಿಸ ಮಾತನಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರತಿಯೊಂದು ಮಗುವೂ ಪ್ರತಿಭಾನ್ವಿತವಾಗಿದೆ ಮತ್ತು ಕಲೆಗಳ ಕಲಿಕೆಯಿಂದ ಉತ್ತಮ ಸಂಸ್ಕಾರ ರೂಢಿಸಿಕೊಂಡು ಸ್ವತಂತ್ರ ಪ್ರತಿಭೆಯಿಂದ ಸಾಧನೆ ಮಾಡಬಹುದಾಗಿದೆ ಎಂದರು.

ಹಿರಿಯ ಸಾಹಿತಿ ಎ.ಶಿವಾನಂದ ಕರ್ಕೇರ ಮುಖ್ಯ ಅತಿಥಿಯಾಗಿದ್ದರು. ಅಯನಾ ವಿ.ರಮಣ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗುರು ಶಾರದಾ ಮಣಿಶೇಖರ್ , ಕಾವೇರೀ ಅಮ್ಮ ವೇದಿಕೆಯಲ್ಲಿದ್ದರು.ಹಿರಿಯ ನೃತ್ಯಗುರು ಮುರಳೀಧರ್ ರಾವ್, ಡಾ.ಎಂ. ಪ್ರಭಾಕರ ಜೋಷಿ, ಪ್ರೊ.ಜಿ.ಆರ್.ರೈ, ದಯಾನಂದ ಪೈ, ಮೋನಿಕಾ ರಾವ್ ಉಪಸ್ಥಿತರಿದ್ದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ ಮತ್ತು ಶಿಕ್ಷಕಿ ಲತಾ ನಾಗರಾಜ್ ನಿರೂಪಿಸಿದರು. ರಂಗಭಾರತಿ ನಿರ್ದೇಶಕ ಕೆ.ವಿ.ರಮಣ್ ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸನಾತನ ನಾಟ್ಯಾಲಯ ಮತ್ತು ರಂಗಭಾರತೀ ಸಂಸ್ಥೆ ಸಂಯೋಜಿಸಿದ್ದವು

0 comments:

Post a Comment