ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಶ್ರೀರಾಮಾಶ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಶಿಷ್ಯರು ಹಾಗೂ ಭಕ್ತರು ನೂರಾರು ಸಂಖ್ಯೆಯಲ್ಲಿ ಸಭೆ ಸೇರಿ ಈ ಕೆಳಗಿನಂತೆ ನಿರ್ಣಯವನ್ನು ಕೈಗೊಳ್ಳಲಾಯಿತು. ಗೋಸಂರಕ್ಷಣಾಭಿಯಾನದ ರೂವಾರಿಗಳು ಸಮಾಜೋತ್ಥಾನದ ಸಂಕಲ್ಪಬದ್ಧರೂ ಧರ್ಮನಿಷ್ಠರೂ, ರಾಮಕಥೆಯಿಂದ ಜನಮಾನಸ ಪರಿವರ್ತನೆಯ ಹರಿಕಾರೂ ಆದ ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲೆ ಬಂದ ಅಸತ್ಯವಾದ ನಿರಾಧಾರವಾದ ಆಪಾದನೆಯನ್ನು ಘನಘೋರವಾಗಿ ಖಂಡಿಸುತ್ತೇವೆ.ಬೆಂಗಳೂರಿನ ಬನಶಂಕರಿ ನಿವಾಸಿ ಸಿ.ಎಂ.ದಿವಾಕರ ಶಾಸ್ತ್ರೀ ಮತ್ತು ಅವರ ಪತ್ನಿ ಪ್ರೇಮಲತಾ ದಿವಾಕರ ಶಾಸ್ತ್ರಿ ಅವರು ತಮ್ಮ ವೈಯಕ್ತಿಯ ಹಿತಸಾಧನೆಗಾಗಿ ಶ್ರೀಶ್ರೀಗಳವರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂಬ ಆಪಾದನೆ ಮಾಡಿದ್ದಾರೆಂದು ಮಾಧ್ಯಮಗಳಿಂದ ತಿಳಿದು ಬಂದಿದೆ.
 
raghaveshwara swamiji

ಇದು ಸುಳ್ಳು ಎಂದು ನಾವೆಲ್ಲರೂ ಏಕಕಂಠದಿಂದ ಘಂಟಾಘೋಷವಾಗಿ ಹೇಳುತ್ತೇವೆ. ಚೇತನಾಚೇತನಗಳೆರಡರಲ್ಲೂ ಅಪಾರ ಕರುಣೆಯನ್ನು ಹೊಂದಿರುವವರೂ, ಸದಾ ಧಾರ್ಮಿಕ ಮಾರ್ಗದಲ್ಲಿ ನಡೆಯುವವರೂ ಆದ ಶ್ರೀಶ್ರೀಗಳವರ ಮೇಲೆ ಮೇಲೆ ತಿಳಿಸಿದ ದಂಪತಿಗಳು ತಮ್ಮ ಖಾಸಗಿ ಲಾಭಕ್ಕಾಗಿ ಹೀಗೆ ಸತ್ಯದೂರವಾದ ಆಪಾದನೆಯನ್ನು ಮಾಡಿದ್ದಾರೆ. ಇವರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿರುವುದು ಕಂಡುಬರುತ್ತಿದ್ದು, ಈ ದುಷ್ಟ ಜಾಲವನ್ನು ಭೇದಿಸಿ ಎಲ್ಲ ತಪ್ಪಿತತ್ಥರಿಗೆ ಘೋರ ಶಿಕ್ಷೆಯು ಆಗಬೇಕೆಂದು ಬಯಸುತ್ತೇವೆ.
ಶ್ರೀಮಠದ ಶಿಷ್ಯ ಭಕ್ತರು.
ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು

0 comments:

Post a Comment