ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೇಣೂರು ವಲಯದ ಖಂಡನೆ: ರಾಜ್ಯ - ರಾಷ್ಟ್ರ ಸುದ್ದಿ
ವೇಣೂರು ವಲಯ ಹವ್ಯಕ ಸಂಘಟನೆಯು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಬ್ಲಾಕ್ ಮೇಲ್ ಮಾಡಿದ ಘಟನೆಯನ್ನು ಉಗ್ರವಾಗಿ ಖಂಡಿಸಿದೆ. ತಪ್ಪಿತಸ್ಥ ಶಾಸ್ತ್ರೀ ದಂಪತಿಗಳಿಗೆ ಸೂಕ್ತ ಶಿಕ್ಷಯಾಗಬೇಕು ಎಂದು ಆಗ್ರಹಿಸಿದೆ. ವಲಯದ ಸಮಸ್ತ ಹವ್ಯಕ ಬಾಂಧವರ ಪರವಾಗಿ ವಲಯಾಧ್ಯಕ್ಷ ಪರಮೇಶ್ವರ ಭಟ್ ಖಂಡನಾ ಹೇಳಿಕೆಯನ್ನು ನೀಡಿದ್ದು ಸಮಸ್ತ ಹಿಂದೂ ಬಾಂಧವರ ಭಾವನೆಗೆ ಧಕ್ಕೆ ತರುವಂತಹ ಕಾರ್ಯವನ್ನು ಪ್ರೇಮಲತಾ ದಿವಾಕರ ಶಾಸ್ತ್ರಿ ಹಾಗೂ ಕುಟುಂಬಿಕರು ಮಾಡಿದ್ದಾರೆಂದು ಹೇಳಿದ್ದಾರೆ. ತಪ್ಪಿತಸ್ಥ ಆರೋಪಿಗಳು, ಅವರಿಗೆ ಕುಮ್ಮಕ್ಕು ನೀಡುವ ಕಾಣದ ಕೈಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.


kekkar1

ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಬ್ಲಾಕ್ ಮೇಲ್ ಮಾಡಿದ ಘಟನೆಯನ್ನು ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಸಮಿತಿ ಬಲ್ಲಂಗೇರಿ ಅಂಗರಕರಿಯ ತೀವ್ರವಾಗಿ ಖಂಡಿಸಿದೆ.ಈ ಪ್ರಕರಣ ಕೇವಲ ದುರುದ್ದೇಶಪೂರಕವಾಗಿ ಮಾಡಿದ್ದಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಮುಂದೆಂದೂ ಈ ರೀತಿಯ ಘಟನೆಗಳು ಸಂಭವಿಸಬಾರದೆಂದು ಸಮಿತಿಯ ಅಧ್ಯಕ್ಷ ಉದಯಕುಮಾರ್ ಬಾಲವನ, ಕಾರ್ಯದರ್ಶಿ ಎ.ಗಣರಾಜ್ ಭಟ್ ಆಗ್ರಹಿಸಿದ್ದಾರೆ.

ಉಪ್ಪಿನಂಗಡಿ ಮಂಡಲದ ಖಂಡನೆ
ಘಟನೆಯನ್ನು ಉಪ್ಪಿನಂಗಡಿ ಹವ್ಯಕ ಮಂಡಲ ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥ ಶಾಸ್ತ್ರಿ ದಂಪತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. ಅವಿಚ್ಛಿನ್ನ ಪರಂಪರೆಯನ್ನು ಹೊಂದಿರುವ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀಗಳ ವಿರುದ್ಧದ ಈ ಆರೋಪಗಳು ಹುರುಳಿಲ್ಲದ್ದು, ಇಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಉಪ್ಪಿನಂಗಡಿ ಹವ್ಯಕ ಮಂಡಲದ ಅಧಕ್ಷ ಬಾಲ್ಯ ಶಂಕರ ಭಟ್ ಆಗ್ರಹಿಸಿದ್ದಾರೆ.

0 comments:

Post a Comment