ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಪ್ರಾಚೀನ ಕಾಲಕ ಕೃಷಿಕರು ಖಂಡಿತವಾಗಿಯೂ ಸಾವಯವ ಕೃಷಿಯಲ್ಲೇ ತೊಡಗಿದ್ದರು. ವಿಫುಲವಾಗಿ ದೊರೆಯುತ್ತಿದ್ದ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ವಸ್ತುಗಳನ್ನು ಪುಷ್ಕಳವಾಗಿ ಬಳಸುತ್ತಿದ್ದರು.

 

 ಆ ಕಾಲಕ್ಕೆ ಸರಿಯಾಗಿ ಒಳ್ಳೆಯ ಫಸಲೂ ಪಡೆಯುತ್ತಿದ್ದರು. ಆದುದರಿಂದ ಕೃಷಿ ಆರಂಭವಾದದ್ದೇ ಸಾವಯವದಿಂದ ಎನ್ನುವುದು ಪ್ರಶ್ನಾತೀತ.
ಪ್ರಕೃತಿಯಲ್ಲಿ ಯಾವ ಬೆಲೆಯನ್ನೂ ನೀಡದೆ ದೊರೆಯುತ್ತಿದ್ದ ಸಾವಯವ ಗೊಬ್ಬರಗಳನ್ನು ಬದಿಗೆ ಸರಿಸಿ ರೈತ ರಾಸಾಯನಿಕ ಕೃಷಿಯತ್ತ ಹೊರಳಲು ಕಾರಣವೇನು ?ಆ ಕಾಲಘಟ್ಟದಲ್ಲಿ ಕೂಡು ಕುಟುಂಬ ಸಾಮಾನ್ಯ. ಕೃಷಿಗೆ ಕೂಲಿಯಾಳುಗಳ ಅವಲಂಬನೆ ಬಹು ಕಡಿಮೆ. ಇಲ್ಲವೆಂದರೂ ತಪ್ಪಾಗಲಾರದು. ಪ್ರತಿ ಮನೆಯಲ್ಲೂ ಇಪ್ಪತ್ತು ಮೂವತ್ತು ಜನರಿದ್ದುದರಿಂದ ಹೊರ ಆಳುಗಳ ಅವಶ್ಯಕತೆಯೇ ಇರಲಿಲ್ಲ. ಯಾವತ್ತೂ ಉಣ್ಣುವುದಕ್ಕೆ ಬೇಕಷ್ಟು ಭೂಮಿಯನ್ನು ಮಾತ್ರ ಸಾಗುವಳಿ ಮಾಡುತ್ತಿದ್ದ ಕುಟುಂಬ ಯಾವಾಗಲೂ ನೂರಾರು ಎಕರೆಗಳಷ್ಟು ಭೂಮಿಯನ್ನು ಹೊಂದಿತೋ, ಹಿಡುವಳಿ ಮನೆಯಾಳು ಗಳಿಂದ ಸಾಗುವಳಿ ಮಾಡುವುದಕ್ಕೆ ಅಸಾಧ್ಯವಾಯಿತೋ, ಆಗ ಮೊದಲಾಯಿತು ಹೊರ ಆಳುಗಳ ಅವಲಂಬನೆ.
ವಿಸ್ತಾರವಾದ ಹಿಡುವಳಿಗೆ ಪ್ರಾಕೃತಿಕ ಗೊಬ್ಬರಗಳನ್ನು ಹಿಂದಿನ ಪರಿಮಾಣದಲ್ಲೇ ಪೂರೈಸುವುದು ಅಸಾಧ್ಯವಾಯಿತು. ಹೊರ ಆಳುಗಳಿಗೆ ಸಂಬಳ ಕೊಟ್ಟು ಪೂರೈಸಿದರೂ ಉತ್ಪತ್ತಿಗೂ ಖರ್ಚಿಗೂ ತಾಳೆಯಾಗಲಿಲ್ಲ. ಉತ್ಪತ್ತಿ ಬೇಕಷ್ಟಿದೆ ಆದರೆ ಉಳಿತಾಯ ಏನೂ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ಎಷ್ಟು ಕೈಮೀರಿತೆಂದರೆ ಭೂಮಿ ನಿನಗಾಯುತು, ಸರಕಾರದ ಕಂದಾಯ ವನ್ನಷ್ಟು ಕಟ್ಟಿಬಿಡು ಎಂದು ಭೂಮಿಯನ್ನು ಆಸಕ್ತರಿಗೆ ಒಪ್ಪಿಸುವಂತಾಯಿತು. ಅಂತಹ ಪ್ರಕರಣದಿಂದ ಭೂಮಿ ಪಡೆದ ಹಿಡುವಳಿದಾರರು ದ. ಕನ್ನಡದಲ್ಲಿ ಎಷ್ಟೋ ಇದ್ದರು. ಕಡಿಮೆ ಖರ್ಚಿನಲ್ಲಿ ಗೊಬ್ಬರ ಪೂರೈಸಿ ಉತ್ಪತ್ತಿ ಪಡೆವ ದಾರಿ ಯಾವುದು ಎಂದು ರೈತ ಸಹಜವಾಗಿ ಯೋಚಿಸುತ್ತಿದ್ದ ಕಾಲಕ್ಕೆ ವರದಾನವಾದಂತೆ ರಾಸಾಯನಿಕ ಗೊಬ್ಬರಗಳ ಪ್ರವೇಶವಾಯಿತು.

 ಆದುದರಿಮದ ರೈತ ರಾಸಾಯನಿಕ ಗೊಬ್ಬರಗಳತ್ತ ಹೊರಳಿದ್ದು ಪ್ರೀತಿಯಿಂದಲ್ಲ. ಉಳಿವು ಅಳಿವಿನ ಅನಿವಾರ್ಯತೆಯಿಂದ.
ಸುಮಾರು 1950ನೇ ದಶಕದಲ್ಲಿ ಮಾರುಕಟ್ಟೆಯಲ್ಲಿ ಈಗಿನ ಗೊಬ್ಬರಳಾವುವೂ ಇರಲಿಲ್ಲ. ಮುಖ್ಯವಾಗಿ ಇದ್ದದ್ದು ಅಮೋನಿಯಾ ಸಲ್ಫೇಟು ಒಂದೇ. ಕೃಷಿ ಅಧಿಕಾರಿಗಳೂ ಧಾರಾಳವಾಗಿ ಶಿಫಾರಸು ಮಾಡುತ್ತಿದ್ದದು ಅದನ್ನೇ.
ನೂರು ಕಿಲೋ ಸಾವಯವದಿಂದ ಒಂದೋ ಎರಡೋ ಕಿಲೋ ಸಾರಜನಕವನ್ನು ಪಡೆಯುವುದರ ಬದಲಿಗೆ ನಾಲ್ಕು ಕಿಲೋ ಸಲ್ಫೇಟಿನಿಂದ ಅದನ್ನು ಪಡೆಯಬಹುದಾದರೆ ಈ ಆಲಸಿ ಕೂಲಿಯಾಳುಗಳನ್ನು ದುಡಿಸಿ ದನ ಎಮ್ಮೆ ಸಾಕಿ ಸಾವಯವ ಗೊಬ್ಬರ ಮಾಡುವ ತಲೆಬಿಸಿ ಯಾರಿಗೆ ಬೇಕು. ಸಾಗುವಳಿ ಮಾಡುವ ರೈತನ ದೃಷ್ಟಿಯಲ್ಲಿ ಸರಿಯಲ್ಲವೇ. ಅಂಗಡಿಯಿಂದ ಹಣ ಕೊಟ್ಟು ತಂದರಾಯಿತು. ಮತ್ತೆ ಎರಚುವುದಂತೂ ಬಹು ಸುಲಭ. ರೈತನಿಗೆ ಯಾವತ್ತೂ ಸಾವಯವ ರಗಳೆ ಬೇಡ ಎಂದು ಕಂಡರೆ ಅದು ತಪ್ಪು ಎನ್ನಬಾರದು.
ಕ್ರಮ ತಪ್ಪಿದ ರಾಸಾಯನಿಕದ ಬಳಕೆಯಿಂದ ಮಣ್ಣಿನ ಗುಣಧರ್ಮದ ಮೇಲಾಗುವ ಪರಿಣಾಮ, ರೋಗಗಳ ಹಾವಳಿ ಅವನಿಗೆ ಕಾಣದಾದವು. ಅವನಿಗೇನು, ಶಿಫಾರಸು ಮಾಡುವ ಅಧಿಕಾರಿಗಳಿಗೂ ಗೊತ್ತಿರಲಿಲ್ಲ. ಕಡು ಹಸಿರಿನಿಂದ ಕಂಗೊಳಿಸುತ್ತಿದ್ದ ಪೈರು ನೋಡುವುದೇ ಕಣ್ಣಿಗೆ ಹಬ್ಬ.
ಇಂದು ಸಾವಯವಕ್ಕೆ ಅಗತ್ಯವಾದ ಹಸಿರೆಲೆ ಗೊಬ್ಬರ ಇದೆಯೇ. ಹಟ್ಟಿಯಲ್ಲಿ ಹತ್ತಾರು ಎಮ್ಮೆಗಳು ಇವೆಯೇ. ಹೊಲಕ್ಕೆ ಹಾಕಿ ಹರಡುವುದಕ್ಕೆ ಬೇಕಷ್ಟು ಮಾನವ ಸಂಪನ್ನೂಲ ಇದೆಯೇ. ಇವಿದ್ದರೆ ಮಾತ್ರ ಸಾವಯವ ಸಾಧ್ಯ. ಇವಿಲ್ಲದೆ ಸಾವಯವಕ್ಕಿಳಿದರೆ ಮಣ್ಣು ತುಂಬಿ ಕೊಡುವ ಕೆಲವು ಸಾವಯವಯ ಕಂಪೆನಿಗಳಿಗೆ ಲಾಭವಾದೀತು. ರೈತ ಸರ್ವಸ್ವವನ್ನೂ ಕಳೆದುಕೊಂಡು ನಗರಗಳಿಗೆ ವಲಸೆ ಹೋಗಿ ಕೊಳಚೆ ಪ್ರದೇಶ ವಿಸ್ತರಣೆಯಾದೀತು. ರೈತನದು ಸಾವುವಳಿ ಎನ್ನುವುದು ಹಾಬಿಯಲ್ಲ. ಅದು ಒಂದು ವೃತ್ತಿ. ವೃತ್ತಿ ಎಂದಮೇಲೆ ಹಾಕಿದ ಬಂಡವಾಳಕ್ಕೆ ಮರುಪಾವತಿ ಬೇಕು. ಲಾಭಾಂಶ ಬೇಕು. ನನ್ನ ಹರಿಯರು ದುಡಿದ ಭೂಮಿ ರಾಸಾಯನಿಕದಿಂದ ಭೂಮಿ ಬರಡಾಯಿತು ಎಂಬ ಭಾವನಾತ್ಮಕ ಯೋಚನೆಯಿಂದ ಹೊರ ಬಂದು ವಾಸ್ತವಿಕ ನೆಲೆಯಲ್ಲಿ ಯೋಚಿಸಿ ಕೃಷಿ ಮಾಡದಿದ್ದರೆ ರೈತ ನಿರ್ನಾಮವಾಗುವುದು ನಿಶ್ಚಯ.
ಕೂಡು ಕುಟುಂಬಗಳ ನಾಶ ಕೃಷಿಯಲ್ಲಿ ಊಹಾತೀತ ಬದಲಾವಣೆ ತಂದಿತು. ಮತ್ತು ನಾಶಕ್ಕೂ ಕಾರಣವಾಯಿತು. ಎಲ್ಲದಕ್ಕೂ ಮುಖ್ಯ ಕಾರಣ ಸರಕಾರ ಮತ್ತು ಇಂದಿನ ವಿದ್ಯಾಭ್ಯಾಸ ಪದ್ಧತಿ ಎನ್ನದೆ ನಿವರ್ಾಹವಿಲ್ಲ. ಹತ್ತೆಕರೆ ಭೂಮಿ ಮೂವತ್ತು ತುಂಡುಗಳಾಗಿ ಪ್ರತಿ ಪಾಲಿನಲ್ಲೂ ಮನೆ, ಹಟ್ಟಿ, ಕೊಟ್ಟಿಗೆ ಬಾವಿ ರಸ್ತೆ ಎಂದು ಮತ್ತಷ್ಟು ಭೂಮಿ ವ್ಯರ್ಥವಾಗಿ ಉಳಿದ ಇಪ್ಪತೈದು ಸೆಂಟ್ಸಿನಲ್ಲಿ ರೈತ ಏನು ಕೃಷಿ ಮಾಡಿಯಾನು. ಹೇಗೆ ಬದುಕಿಯಾನು. ಕೃಷಿಯಲ್ಲಿ ತೊಡಗಿ ಸಮಸ್ಯೆಗಳೊಡನೆ ಗುದ್ದಾಡಿ ಸಾಯುವುದಕ್ಕಿಂತ ಮನೆ ನಿವೇಶನಗಳನ್ನಾಗಿ ಮಾಡಿ ಮಾರುವುದೇ ಒಳಿತು ಎಂದು ಅವ ಭಾವಿಸಿದರೆ ಅತು ತಪ್ಪು ಎನ್ನಲಾದೀತೇ? ಸಾರಾಂಶ, ಸಾವಯವ ಕೃಷಿ ಪರಿಕರಗಳ ಕೊರತೆ ಮತ್ತು ಮಾನವ ಸಂಪನ್ಮೂಲದ ಅಲಭ್ಯತೆಯೇ ಪೂರ್ವದ ಸ್ಥಿತಿಗೆ ಮರಳಿದ್ದರೆ ಮಾತ್ರ ಸಾವಯವಯ ಕೃಷಿ ಸಾಧ್ಯ.
ಸಾವಯವ ಕೃಷಿ ಎಲ್ಲ ದೃಷ್ಟಿಯಿಂದಲೂ ಉತ್ತುಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಥಿರವಾದ ಮಣ್ಣಿನ ಆರೋಗ್ಯ ವಿಷರಹಿತ ಅನ್ನ, ಅಪರೂಪವಾದ ರೋಗರುಜಿನಗಳು, ಹೊಡೆದಾಟವಿಲ್ಲದೆ ಕೃಷಿ ಕೆಲಸ ಕಾರ್ಯಗಳು, ನೆಮ್ಮದಿಯ ಬದುಕು ಖಂಡಿತಕ್ಕೂ ಇದು ಅಪೇಕ್ಷಣೀಯ. ಆದರೆ ಸಾವಯವ ಕೃಷಿಯಲ್ಲಿ ಗೊಬ್ಬರ ಪೋಲಾಗುವುದು ಹೆಚ್ಚು. ಗೊಬ್ಬರ ಕೊಳೆತು ಸಸ್ಯಕ್ಕೆ ಸಿದ್ಧರೂಪದ ಪೋಷಕಗಳನ್ನು ಒದಗಿಸುವುದು ತಕ್ಷಣಕ್ಕೆ ಸಾಧ್ಯವಿಲ್ಲ. ಮಣ್ಣನ್ನೇ ಗೊಬ್ಬರವನ್ನಾಗಿ ಮಾರ್ಪಡಿಸಿ ನಿರಂತರವಾಗಿ ಸಸ್ಯಕ್ಕೆ ಉಣಿಸುವುದು ಸಾವಯವದ ಲಕ್ಷಣ. ಆದರೆ ಆ ಮೊದಲೇ ಪೋಷಕಾಂಶಗಳನ್ನು ಬಿಸಿಲು ಮಳೆ ಕಳೆಗಳು ಬಹುಪಾಲು ನಾಶಮಾಡುತ್ತವೆ. ಆದುದರಿಮದ ಸಾವಯವವನ್ನು ರಾಸಾಯನಿಕದಂತೆ ಗ್ರಾಂ.ಗಳ ಲೆಕ್ಕದಲ್ಲಿ ಪೂರೈಸುವುದು ಸಾಲದು. ಸಾವಯವ ಗೊಬ್ಬರವನ್ನು  ಹೆಚ್ಚಿನ ಪರಿಮಾಣದಲ್ಲಿ  ಪೂರೈಸಬೇಕಾಗುವುದರಿಂದ ಅದು ಇಂದಿನ ದಿನದಲ್ಲಿ ಅಸಾಧ್ಯ.
ಇನ್ನು ರಾಸಾಯನಿಕ ಕೃಷಿ ವಿಧಾನದ ಲಾಭ ನಷ್ಟಗಳು. ನನ್ನ ಅನುಭವದಂತೆ ಲಾಭಗಳು ಹೆಚ್ಚು, ನಷ್ಟಗಳು ಕಡಿಮೆ.
1976ನೇ ಇಸವಿಯಲ್ಲಿ ಗುಡ್ಡವನ್ನು ಸಮತಟ್ಟು ಮಾಡಿ ಮಂಗಳೂರು ಸಿರಿಸೀಮೆ ನರ್ಸರಿಯಿಂದ ಸುಮಾರು 400 ಮಂಗಳ ತಳಿಯ ಅಡಿಕೆ ಗಿಡಗಳನ್ನು ನಾಟಿ ಮಾಡಿದೆ. ಅದೇ ತೋಟದಲ್ಲಿ 2004ರಲ್ಲಿ ಬೆಳೆ ಕಡಿಮೆಯಾಗುತ್ತಿದೆ. ಬರೇ 4.5 ಕ್ವಿಂಟಲ್ ನಷ್ಟದ ಕೃಷಿ ಎಂದು ಪೂರ್ಣ ವಾಗಿ ಕಡಿದು ಹಾಕಿದೆ. ಗಡ್ಡೆಗಳನ್ನಲ್ಲೆ ಶಿಥಿಲವಾಗಲು ಬಿಟ್ಟು ಎಡೆ ಸಸಿ ಹಾಕುವು ಜಾಗದಲ್ಲಿ ನನ್ನದೇ ತೋಟದ ಮಂಗಳ ತಳಿಯ ಗಿಡಗಳನ್ನು ನಾಟಿ ಮಾಡಿದೆ. ಮೂರು ವರ್ಷಗಳಲ್ಲಿ ಫಸಲು ಆರಂಭವಾಯಿತು. ಗಿಡಗಳು ಚೆನ್ನಾಗಿ ಬಂದಿವೆ. ನಂತರ 1994, 1999, 2004ರಲ್ಲಿ ಮಂಗಳ ತಳಿಯ 4,000 ಗಿಡಗಳನ್ನು ನಾಟಿ ಮಾಡಿದೆ. ಹೊಸದಾಗಿ ಕಡಿಸಿದ ತಟ್ಟು, ಇಳಿಜಾರಾದ ಗುಡ್ಡದಲ್ಲಿ ಅವೂ ಚೆನ್ನಾಗಿ ಫಸಲು ಕೊಡುತ್ತಿವೆ. ಈ ಎಲ್ಲಾ ಮರಗಳಿಗೂ ಹಸುರೆಲೆ ಗೊಬ್ಬರ, ಸಗಣಿ ಗೊಬ್ಬರ ಇದೆ ಎನ್ನುವುದು ಈವರೆಗೂ ಗೊತ್ತಿಲ್ಲ. ಮೊದಲು ನಾಟಿ ಮಾಡಿದ ಮಣ್ಣಿಗೆ ಇಂದಿಗೆ ಮೂವತ್ತೆಂಟು ವರ್ಷ ಸಂದಿತು. ಗಿಡವನ್ನು ನೋಡುವಾಗ ಯಾರಿಗೂ ಇದು ಸಾವಯವ ಹಾಕಿ ಬೆಳೆಸಿದ ತೋಟ ಅನಿಸುತ್ತಿಲ್ಲ. ಪ್ರತಿ ವರ್ಷವೂ ನೀಡುವುದು ಒಂದೇ ಗೊಬ್ಬರವಲ್ಲ. ಸುಫಲಾ, ಮಂಗಳಾ, ಇಫ್ಕೋ, ಫ್ಯಾಕ್ಟಂಫಾಸ್ ಇವುಗಳನ್ನು ಪ್ರತಿ ವರ್ಷ ಬದಲಾಯಿಸುತ್ತಾ ಇದ್ದೇನೆ. ಸುಫಲಾ ಬಿಟ್ಟು ಉಳಿದುವೆಲ್ಲ 20:20:0:13 ದಾಮಾಶಯದವು. ಒಂದು ಗಿಡಕ್ಕೆ ಅಕ್ಟೋಬರದಲ್ಲಿ 300ಗ್ರಾಂ ಹಳೆಯ ಊರತಳಿಯ ತೋಟಕ್ಕೂ ಅದೇ ಗೊಬ್ಬರ. ಪೊಟ್ಯಾಷ್ ಇಲ್ಲ. ರಾಕ್ ಫಾಸ್ಫೇಟೂ ಇಲ್ಲ. ಪೊಟ್ಯಾಶ್ ಮಣ್ಣಿನ ಸಂಪರ್ಕಕ್ಕೆ ಬಂದಾಗ ಕಬ್ಬಿಣ ಮತ್ತು ಅಲ್ಯೂಮಿನಿಯಂ ಆಗಿ ಪರಿವರ್ತನೆ ಗೊಂಡು ಮರಕ್ಕೆ ಅಲ್ಪಾಂಶ ಮಾತ್ರ ಲಭಿಸುತ್ತದೆ ಎಂದು ಎಲ್ಲೋ ಓದಿದ ನೆನಪು. ಆದುದರಿಂದ ಪೊಟ್ಯಾಶ್ ಹಾಕುವುದಿಲ್ಲ. ಅದರಿಂದಾಗಿ ಫಸಲಿನ ಮೇಲೆ ಏನೂ ವ್ಯತಿರಿಕ್ತ ಪರಿಣಾಮ ಕಾಣುವುದಿಲ್ಲ. ಎಪ್ರಿಲ್ ಕೊನೆಗೆ ಅಥವಾ ಮೇ ತಿಂಗಳಿನಲ್ಲಿ ಸುಮಾರು 75ಗ್ರಾಂ. ನಷ್ಟು ಗೊಬ್ಬರ ಹಿಂಗಾರಗಳನ್ನು ಹೆತ್ತು ಶಕ್ತಿ ತ್ರಾಸವಾಗಿ ಕೊಬೆ ಸಪುರವಾಗಿ ಮರಗಳಿಗೆ ಬಾಣಂತಿಗೆ ಶಕ್ತಿ ಸಂಚಯಕ್ಕಾಗಿ ನೀಡುವ ಟಾನಿಕ್ಕಿನಂತೆ ನೀಡುತ್ತೇನೆ. ಮರಗಳ ಆಯ್ಕೆಯೇನೂ ಇಲ್ಲ. ನನ್ನ ತೋಟದ ಸುಮಾರು 10,500 ಮರಗಳಿಗೂ ಹತ್ತು ಜರ್ಸಿ ದನಗಳಿದ್ದ ಸುಧಾರಿತ ಹಟ್ಟಿಯಲ್ಲಿ ಈಗ ಇರುವುದು ಒಂದು ದನ ಮಾತ್ರ. ಮನೆ ಖರ್ಚಿಗಾಗಿ ನನ್ನ ಅನುಭವದಂತೆ ರಾಸಾಯನಿಕದ ತಾರ್ಕಿಕ ಬಳಕೆ ನನಗೆ ನಷ್ಟವನ್ನೇನೂ ಮಾಡಿಲ್ಲ. ನನಗದರಲ್ಲಿ ನಂಬಿಕೆ ಇಲ್ಲ. ಪರೀಕ್ಷೆ ಮಾಡಿದ ತಕ್ಷಣ ಅಧಿಕಾರಿಗಳ ಸಲಹೆ ಇಂತಿಷ್ಟು ಸುಣ್ಣ ಸುರಿಯಿರಿ, ಮೆಗ್ನೇಸಿಯಂ, ಬೋರಾನ್ ಕೊಡಿರಿ ಎಂದು. ನನ್ನ ಪ್ರಶ್ನೆ ನೂರಾರು ಅಲ್ಲ ಸಾವಿರಾರು ವರ್ಷಗಳಿಂದ ನಾವು ಮಾಡುತ್ತಿರುವ ಗದ್ದೆಗಳಿಗೆ ಈ ವರಗೆ ಯಾರೂ ಸುಣ್ಣ ಸುರಿದಿದ್ದಾರೆ? ಬೆಳೆ ಬೆಳೆಯುತ್ತಿರಲಿಲ್ಲವೇ. ಪೋಷಕಾಂಶಗಳು ಮಳೆಯಿಂದ ತೊಳೆದು ಹೋಗುತ್ತವಾದರೆ ಮಣ್ಣಿನಲ್ಲಿ ಉಳಿಯುವ ಹುಳಿ ಅಂಶವೂ ತೊಳೆದು ಹೋಗುವುದಿಲ್ಲವೇ? ಮಣ್ಣನ್ನು ನಾವು ತೀರ ಕೀಳಂದಾಜಿಸಬಾರದು. ತನ್ನ ಶರೀರದ ಕೊರತೆಯನ್ನು ತುಂಬಿಕೊಂಡು ಬೇಡದ್ದನ್ನು ಬಿಸುಟು ತನ್ನನ್ನು ತಾನೇ ಪುನರ್ನಿಮಿಸಿಕೊಳ್ಳುವ ಶಕ್ತಿ ಮಣ್ಣಿಗಿದೆ ಅನಿಸುತ್ತದೆ. ಹಾಗೆಂದು ಬೇಕಾಬಿಟ್ಟಿಯಾಗಿ ರಾಸಾಯನಿಕವನ್ನು ಸುರಿಯುವುದು ಅಪಾಯಕ್ಕೆ ನಾಂದಿಯಾದೀತು.
ಅಮೆರಿಕದ ನಿಕ್ಸನ್, ಇಂಗ್ಲೆಂಡಿನ ಥ್ಯಾಚರ, ರಷ್ಯಾದ ಗೊರ್ಬಚೆವ್, ಆಸ್ಟ್ರೇಲಿಯನ್ನರು ಒಬ್ಬೊಬ್ಬರಿಗೂ ಐದು ಹತ್ತು ಸಾವಿರ ಎಕರೆಗಳ ಹಿಡುಳಿ ಇದೆ ಎಂದು ಓದಿದೆ. ಇವರಂತೆಯೇ ಅಲ್ಲಿಯ  ರೈತರಿಗೂ ಸಾವಿರ ಲೆಕ್ಕದ ಎಕರೆಗಳ ಹಿಡುವಳಿ. ಎಲ್ಲ ಯಾಂತ್ರೀಕೃತ ಬೇಸಾಯ. ರಾಸಾಯನಿಕ ಕೃಷಿಗೆ ಹೊರಳುವ ಮೊದಲು ನಮ್ಮಲ್ಲಿ ಒಂದು ಲೆಕ್ಕ ಇತ್ತು. ಒಂದೆಕರೆ ತೋಟಕ್ಕೆ ಗೊಬ್ಬರಕ್ಕೆ ಒಂದು ಎಮ್ಮೆ, ಕೆಲಸಕ್ಕೆ ಒಂದು ಆಳು. ಇಡೀ ವರ್ಷದ ಕೆಲಸವೆಲ್ಲ ಆ ಒಂದಾಳಿನಿಂದ ಆಗಬೇಕು. ಗದ್ದೆಗಳಿಗೆ ಒಂದು ಮುಡಿ ಬೀಜಕ್ಕೆ  100 ಬುಟ್ಟಿ ಹಟ್ಟಿ ಗೊಬ್ಬರ, 20 ಬುಟ್ಟಿ ಬೂದಿ, 25 ಕಟ್ಟ ಎಂಜಿರು, ಮರುವ ಮರದ ಸೊಪ್ಪು, ಸೊಪ್ಪು ಕೊಚ್ಚಿ ನೀರು ಕಟ್ಟಿದರೆ ಒಂದು ವಾರದಲ್ಲಿ ಗದ್ದೆಯ ನ್ನು ಮತ್ತೆ  ಉತ್ತು ಮಣ್ಣಿಗೆ ಸೇರಿಸಿದರೆ ಮಣ್ಣಿನಿಂದ ಬರುವ ರೋಗಗಳಿಂದ ಬೆಳೆಗೆ ಮುಕ್ತಿ.
ಈಗ ನನ್ನ ಪ್ರಶ್ನೆ ಮೇಲೆ ಹೇಳಿದ ಐರೋಪ್ಯ ಹಿಡುವಳಿದಾರರೆಲ್ಲ ಸಾವಯವ ಗೊಬ್ಬರ ಹಾಕುವುದಕ್ಕಾಗಿ ಎಷ್ಟು ದನ ಸಾಕಿದ್ದರೆ. ಅದು ಸಾವಿರ ಎಕರೆ ಅಂದರೆ 5,000 ದನಗಳಾದರೂ ಬೇಕಲ್ಲ. ಮಾಂಸಕ್ಕಾಗಿ ಕೆಲವು ದನಗಳನ್ನು ಸಾಕಿರಬಹುದು. ಆದರೆ ಗೊಬ್ಬರಕ್ಕಲ್ಲ. 

ಅಲ್ಲಿ ಒಂದು ತುದಿಯಿಂದ ಬೀಜ, ರಾಸಾಯನಿಕ ಗೊಬ್ಬರ, ಕಳೆನಾಶಕ, ರೋಗನಾಶಕಗಳನ್ನು ಹೊತ್ತ ಯಂತ್ರ ಹೊಲಕ್ಕಿಳಿದರೆ ಉತ್ತು, ಬಿತ್ತಿ, ಗೊಬ್ಬರ ಎರಚಿ, ರೋಗ ಕಳೆನಾಶಕಗಳನ್ನು ಸಿಂಪಡಿಸಿ ಮತ್ತೊಂದು ತುದಿಯಿಂದ ಮೇಲೇರುತ್ತದೆ. ಮುಂದೆ ರೈತನಿಗೆ ಕೆಲಸ ಬೀಳುವುದು ಅಗತ್ಯವಾದರೆ ರೋಗ, ಕಳೆನಾಶಕಗಳನ್ನು ಸಿಂಪಡಿಸುವುದು ಮಾತ್ರ. ಅದೂ ಯಂತ್ರಗಳಿಂದಲೇ.
ಬಿಡಿ, ಅದು ಹೊರದೇಶದಲ್ಲಾಯಿತು, ನಮ್ಮಲ್ಲಿಗೆ ಹೋಲಿಕೆಯಾಗದು ಎಂದು ಕೃಷಿ ತಜ್ಞರು ಅಂದಾರು. ಆದರೆ ಇದಕ್ಕೇನೆನ್ನುತ್ತಾರೆ ನೋಡೋಣ. ಮಡಿಕೇರಿಯಿಂದ ಹಿಡಿದು ಚಿಕ್ಕಮಗಳೂರು ವರೆಗೆ ದಕ್ಷಿಣೋತ್ತರವಾಗಿ ಹಬ್ಬಿದ ಲಕ್ಷಾಂತರ ಎಕರೆ ಕಾಫಿ ತೋಟಗಳ ಒಡೆಯರಲ್ಲಿ ಎಷ್ಟೆಷ್ಟು ದನಗಳಿವೆ. ಒಂದೊಂದು ಗಿಡಕ್ಕೆ ಎಷ್ಟು ಸಾವಯವ ಹಾಕುತ್ತಾರೆ. ಅಲ್ಲಿಯ ರಸಗೊಬ್ಬರ ಅಂಗಡಿಗಳಿಂದ ಲೋಡುಗಟ್ಟಲೆ ಗೊಬ್ಬರ ಸಾಗುವುದು ಕಾಣುತ್ತದೆ. ಹಾಗೆ ರಸಗೊಬ್ಬರ ಹಾಕಿದ ಕಾಫಿ ಗಿಡಗಳೆಲ್ಲ ಏನಾಗಿವೆ. ಫಸಲು ನೀಡುತ್ತಿಲ್ಲವೇ. ಮತ್ತೆ ಯಾಕೆ ಕುಲಬಾಹಿರವಾದ ಈ ಸಾವಯವಯ ಹುಚ್ಚು. ಈ ಹುಚ್ಚಿಗೆ ಬಲಿಯಾದ ರೈತ ವಿಷ ಕುಡಿದು ಸಾಯದೆ ಇನ್ನೇನು ಮಾಡಿಯಾನು. ರಾಸಾಯನಿಕ ಉಪಯೋಗದಿಂದ ಸ್ವಾತಂತ್ರ್ಯ ಪೂರ್ವದ  ಇಳುವರಿ ಪಡೆಯುತ್ತಿರುವ ದೇಶ 20ನೇ ಶತಮಾನದ ಆದಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಈಗಿನ 130 ಕೋಟಿ ಜನ ಏನನ್ನು ಉಂಡಾರು. ಇಷ್ಟೂ ಜನಕ್ಕೆ ಆಮದು ಮಾಡಿ ಆಹಾರ ಪೂರೈಸುವುದು ಸಾಧ್ಯವೇ. ಯಾ ಇಷ್ಟು ಜನಕ್ಕೆ ಉಣಿಸುವಷ್ಟು ಮಿಗತೆ ಆಹಾರ ಬೆಳೆಯುತ್ತಿರುವ ದೇಶ ಜಗತ್ತಿನಲ್ಲಿದೆಯೇ.
ಇನ್ನು ಸರಕಾರದ ಸಾವಯವ ಸಿದ್ಧಾಂತ. ಈವರೆಗಿನ ಸರಕಾರಗಳ ಯೋಚನೆಯೆಲ್ಲವೂ ಅಧಿಕಾರದಿಂದ ವಂಚಿತವಾಗಿ ಹಪಹಪಿಸುತ್ತಿರುವ ಪಕ್ಷದ ಅತೃಪ್ತರಿಗೆ ಮೇಯಲು ಹೊಲವೊದಗಿಸುವ ಯೋಚನೆಯಿಂದ ಕೂಡಿದೆಯೇ ಹೊರತು ದೇಶದ ಉದ್ಧಾರಕ್ಕೂ ಅಲ್ಲ. ಪ್ರಜೆಗಳ ಉದ್ದಾರಕ್ಕೂ ಅಲ್ಲ ಎಂದು ಎಲ್ಲರಿಗೂ ಗೊತ್ತಿರುವ ಸತ್ಯ. ನನ್ನ ಅನಿಸಿಕೆ ಇಷ್ಟೇ. ಹೊರದೇಶ ಗಳಲ್ಲಿ ನಮ್ಮಲ್ಲೂ ರಾಸಾಯನಿಕ ಗೊಬ್ಬರ ಸೃಷ್ಟಿಯಾದಂದಿನಿಂದಲು ಅದನ್ನೆ ಬಳಸಿ ಸಾವಿರಾರು ಎಕರೆಗಳಲ್ಲಿ ಸಮೃದ್ಧ ಫಸಲು ಪಡೆಯುತ್ತಿರುವಾಗ ನಾವು ಯಾಕೆ ಅವರನ್ನು ಅನುಸರಿಸಬಾರದು. ಸಸ್ಯಗಳು ಯಾವುದೇ ಗೊಬ್ಬರ ಕೊಟ್ಟರೂ ಹೀರಿಕೊಳ್ಳಬಲ್ಲವು. ಅವಕ್ಕೆ ಪೋಷಕಾಂಶಗಳು ಮುಖ್ಯವೇ ಹೊರತು ಮಾಧ್ಯಮ ಅಲ್ಲ. ಬ್ರಾಹ್ಮಣ ಹಾಕಿದರೂ, ಬಂಟ ಹಾಕಿದರೂ ಗೌಡ ಹಾಕಿದರೂ, ಹರಿಜನ ಹಾಕಿದರೂ ಸರಿ. ಹಾಕಿದ್ದು ಯಾರು ಎಂದು ನೊಡುವುದಿಲ್ಲ. ಅವಕ್ಕೆ ಜಾತಿಭೇಧವೂ ಇಲ್ಲ. ಮೀಸಲಾತಿಯೂ ಇಲ್ಲ. ಹಾಗಿರುವಾಗ ನಾವು ಪೂರ್ವ ಕಾಲದ ಇಂದಿನ ಕಾಲಮಾನಕ್ಕೆ ಎಂದಿಗೂ ಹೊಂದಿಕೆಯಾಗದ ಸಾವಯವ ಕೃಷಿ ಎಂಬ ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳಬೇಕೇ? ಯೋಚಿಸಿ.
ಎದುರ್ಕಳ ಸುಬ್ಬಣ್ಣ ಭಟ್, ಶ್ರೀ ನಿಧಿ, ನೆಕ್ರಾಜೆ, ನೆಲ್ಯಾಡಿ ಅಂಚೆ, ಪುತ್ತೂರು.
(ಪ್ರತಿಕ್ರಿಯೆಗಳಿಗೆ ಸ್ವಾಗತ-ಸಂ.)
ಸುಜಾತ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.

0 comments:

Post a Comment