ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕೃಷಿ ವಿಶೇಷ
ಕರಿಮೆಣಸಿನ ಬಳ್ಳಿಯ ಬುಡ ಭಾಗದ ಮಣ್ಣು ಸವಕಳಿಯಾಗಿ, ಬೇರು ಭಾಗ ಮೇಲೆ ಬಂದು ಅದಕ್ಕೆ ರೋಗಾಣು ಸೋಂಕು ಹಾಗೂ ಬೇರು ಹಾನಿಮಾಡುವ ನಮಟೋಡುಗಳ ಸೋಂಕು ತಗಲುತ್ತದೆ ಎಂಬುದು ಈಗಾಗಾಲೇ ಗೊತ್ತಾಗಿರುವ ಸಂಗತಿ. ಯಾವಾಗಲೂ ರೂಟ್ ಕಾಸ್ ಗೊತ್ತಾದರೆ, ನಂತರ ಅದಕ್ಕೆ ಪರಿಹಾರ ಹುಡುಕುವುದು ಸುಲಭ.


 ಈ ಹಿಂದೆಯೇ ಮೆಣಸಿನ ರೋಗ ತಡೆಗೆ ಬಳ್ಳಿ ನೆಟ್ಟ ಆದಾರದ ಬುಡಕ್ಕೆ ಪ್ಲಾಸ್ಟಿಕ್ ಹಾಳೆ ಹೊದಿಸುವ ತಂತ್ರಜ್ಞಾನವನ್ನು ಪರಿಚಯಿಸಲಾಗಿತ್ತಾದರೂ, ಈ ವಿಚಾರವು ಹೆಚ್ಚಿನ ಬೆಳೆಗಾರರಿಗೆ ತಲುಪಿಲ್ಲ. ಈಗ ಕರಿಮೆಣಸಿನ ಬೆಲೆಯು ಉತ್ತಮ ಸ್ಥಿತಿಯಲ್ಲಿದ್ದು, ರೋಗ ಮುಕ್ತವಾಗಿ ಬೆಳೆ ಉಳಿಸಿಕೊಳ್ಳುವ ಬಗ್ಗೆ ರೈತರು ಯಾವುದೇ ತಂತಜ್ಞಾನವನ್ನೂ ಅಳವಡಿಸಿಕೊಳ್ಳಲು ಸಿದ್ದರಿದ್ದಾರೆ.

ಕರಿಮೆಣಸಿನ ಸೊರಗು ರೋಗಕ್ಕೆ ಮುಖ್ಯ ಕಾರಣ ಅತಿಯಾದ ನೀರು.  ಮಳೆಯ ನೀರಿನ  ನೇರ ಹೊಡೆತದಿಂದಾಗಿ ಬಳ್ಳಿಯ ಬುಡದ  ಮಣ್ಣು ಸಿಡಿತ ಉಂಟಾಗುತ್ತದೆ. ಹೆಚ್ಚಿನೆಲ್ಲಾ ರೋಗ ಕಾರಕಗಳೂ ನೆಲದಲ್ಲಿ ಇರುತ್ತವೆ. ಮಳೆ ನೀರು ಮಣ್ಣಿಗೆ ಬಿದ್ದಾಗ, ಅದು ಸಿಡಿತವಾಗಿ ಎಲೆಗಳಿಗೆ, ಬಳ್ಳಿಗೆ ಮಣ್ಣು ಹಾರುತ್ತದೆ. ಆದು ರೋಗಕ್ಕೆ ಮೂಲ ಕಾರಣ. ಎಲೆಗಳಿಗೆ ನೀರಿನ ಮೂಲಕ ಮಣ್ಣು ಹಾರುವುದು  ತಡೆಯುವ ಉಪಾಯ ಬುಡದಲ್ಲಿ ಪ್ಲಾಸ್ಟಿಕ್ ಹಾಕುವುದು. ಇದು ಸವಕಳಿ ಆಗದಂತೆ ಮಾಡುವುದಕ್ಕೂ ಸಹ. ಬುಡ ಭಾಗದ ಮಣ್ಣು ಸವಕಳಿ (ಕರಗಿ) ಯಾಗಿ ಬೇರು ಘಾಸಿಯಾಗಿಯೂ ರೋಗ ಬರುತ್ತದೆ. ಶಿರಸಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿನ ವಿಜ್ಞಾನಿಗಳು  ಕರಿಮೆಣಸಿನ ರೋಗ ನಿರ್ವಣೋಪಾಯದಲ್ಲಿ  ಬುಡಕ್ಕೆ ಪ್ಲಾಸ್ಟಿಕ್ ಹಾಳೆಯನ್ನು ಹೊದಿಸುವಿಕೆ ಯನ್ನೂ ಹೇಳುತ್ತಾರೆ.
ಮೆಣಸಿನ ಬಳ್ಳಿಯ ಬುಡ ಭಾಗವು ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೀವಾಂಶಕ್ಕೆ ತೆರೆದುಕೊಳ್ಳದಂತೆ ಇದು ತಡೆಯುತ್ತದೆ. ಬುಡ ಭಾಗ ಬೆಚ್ಚಗೆ ಇರುತ್ತದೆ. ರೋಗ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಭಾರತೀಯ ಸ್ಟೇಟ್ ಬ್ಯಾಂಕಿನ ಲೋಗೋ ತರಹದ ಪ್ಲಾಸ್ಟಿಕ್ ಹಾಳೆಯನ್ನು ಬುಡ ಭಾಗಕ್ಕೆ ಸುಮಾರು 2-3 ಅಡಿ ಸುತ್ತಳತೆಗೆ ಬರುವಂತೆ ಹಾಕಿದಾಗ ಬುಡ ಬಾಗಕ್ಕೆ ನೀರಿನ ನೇರ ಹೊಡೆತ ಬೀಳುವುದಿಲ್ಲ. ಬುಡ ಭಾಗದಲ್ಲಿ ಇದ್ದ ಯಾವುದೇ ಗೊಬ್ಬರ ಸವಕಳಿಯಾಗಿ ಸಿಡಿದು ಹೋಗುವುದಿಲ್ಲ. ಮಣ್ಣಿನಲ್ಲಿರುವ ಬೇರಿಗೆ ಮಳೆಗಾಲದಲ್ಲಿ  ಬೇಕಾಗುವ ಬೆಚ್ಚಗಿನ ವಾತಾವರಣ ಲಭ್ಯವಾಗುತ್ತದೆ.
ಇದನ್ನು ಈಗ ಸಿದ್ದ ಉತ್ಪನ್ನವಾಗಿ ತಯಾರಿಸಿ ಕೊಡುವವರೂ ಇದ್ದಾರೆ. ರೈತರೇ ಅದನ್ನು ತಯಾರಿಸಿಕೊಳ್ಳಬಹುದು. ಆದರೆ ಹಾಕುವಾಗ  ಮರದ ಬುಡ ಭಾಗ ಏರಿಕೆಯ ಕ್ರಮದಲ್ಲಿರಬೇಕು. ಒಂದು ವೇಳೆ ಬುಡ ಭಾಗ ತಗ್ಗಾಗಿದ್ದು ಪ್ಲಾಸ್ಟಿಕ್ ಹಾಳೆಗೆ ಬಿದ್ದ ನೀರು ಬುಡ ಬಾಗಕ್ಕೇ ಮರಳಿ ಹೋಗುವಂತಿದ್ದರೆ ಇದು ಪ್ರಯೋಜನಕ್ಕಿಲ್ಲ.  ಇದು ರೋಗ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಮಳೆಗಾಲಕ್ಕೆ ಮುನ್ನ ಬುಡ ಬಾಗಕ್ಕೆ ತರಗೆಲೆ, ಕಾಂಪೋಸ್ಟು, ಉತ್ತಮ ಮಣ್ಣು ಹಾಕಿ ಬುಡ ಭಾಗವನ್ನು ಏರಿಕೆಯಾಗಿರುವಂತೆ ಮಾಡಿರಬೇಕು. ಬುಡ ಭಾಗದಲ್ಲಿ ಬೀಳುವ ಮರದ ಗರಿ, ಎಲೆಯ ನೀರು ಸರಾಗವಾಗಿ  ಕಾಲುವೆಗುಂಟ ಹರಿಯುವಂತಿರಬೇಕು. ಅಂಥಃ ಸ್ಥಿತಿಯಲ್ಲಿರುವ ಮೆಣಸಿನ ಬಳ್ಳಿ ಬುಡಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕುವುದು ಪ್ರಯೋಜನಕಾರಿಯಾಗುತ್ತದೆ.
ಸುಜಾತ ಸಂಚಿಕೆ ಮಾಹಿತಿ
ಕೃಷಿ ಲೇಖನಗಳಿಗಾಗಿ ಸುಜಾತ ಸಂಚಿಕೆ ಓದಿರಿ...

0 comments:

Post a Comment