ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ-ರಾಷ್ಟ್ರ
ಡಿಸೆಂಬರ್ 4 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
  7 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಡಿಸೆಂಬರ್ 4 ರಿಂದ 11 ರವರೆಗೆ ನಡೆಯಲಿದೆ. ಡಿಸೆಂಬರ್ 4 ರಂದು ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದೆ. ನೋಂದಣಿ ಕಾರ್ಯ  ಆರಂಭವಾಗಿದ್ದು, ನಗರದ ನಾಲ್ಕು ಕಡೆ ಆಸಕ್ತರು ಹೆಸರನ್ನು ನೋಂದಾಯಿಸಬಹುದು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್, ಉತ್ಸವ ನಿರ್ದೇಶಕ ಎನ್. ವಿದ್ಯಾಶಂಕರ್ ಹಾಗೂ ಎನ್ ಆರ್ ವಿಶುಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವೆಂಬರ್ 10 ರಿಂದ ನೊಂದಣಿ ಪ್ರಾರಂಭವಾಗಿದ್ದು, ಬಾದಾಮಿ ಹೌಸ್, ವಾರ್ತಾ ಇಲಾಖೆ, ಚಲನಚಿತ್ರ ವಾಣಿಜ್ಯ ಮಂಡಳಿ, ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಆಸಕ್ತರು ಹೆಸರು ನೊಂದಾಯಿಸಬಹುದು. ಸಾಮಾನ್ಯ ಪ್ರತಿನಿಧಿಗಳಿಗೆ 600 ರೂ. ಶುಲ್ಕ ನಿಗದಿಪಡಿಸಿದ್ದು, ವಿದ್ಯಾರ್ಥಿಗಳಿಗೆ, ಫಿಲಂ ಸೊಸೈಟಿ ಸದಸ್ಯರಿಗೆ, ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರಿಗೆ ಮತ್ತು ಹಿರಿಯ ನಾಗರಿಕರಿಗೆ 300 ರೂ. ಶುಲ್ಕ ವಿಧಿಸಲಾಗಿದೆ. ಆನ್ ಲೈನ್ ಮೂಲಕವೂ (www.biffes.in, email-biffesblr@gmail.com) ಹೆಸರನ್ನು ನೊಂದಾಯಿಸಲು ಅವಕಾಶ ನೀಡಲಾಗಿದೆ

ಡಿಸೆಂಬರ್ 5 ರಿಂದ 11 ರವರೆಗೆ 11 ಸ್ಕ್ರೀನ್ ಗಳಲ್ಲಿ ಒಟ್ಟು 44 ದೇಶಗಳ 170 ಚಲನಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಯನ್ನು ನಡೆಸಲಾಗಿದೆ. Fun ಸಿನಿಮಾ, sigma ಮಾಲ್, ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ 3, ಲಿಡೋ ಐನಾಕ್ಸ್, ಹಲಸೂರಿನಲ್ಲಿ 4, ಸುಲೋಚನಾ, ವಾರ್ತಾ ಇಲಾಖೆ, ಇನ್ ಫೆಂಟ್ರಿ ರಸ್ತೆಯಲ್ಲಿ 1, ಬಾದಾಮಿ ಹೌಸ್ ನಲ್ಲಿ 1, ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣ, ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ 1 ಹಾಗೂ ಸಾರ್ವಜನಿಕರಿಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ 1 ಸ್ಕ್ರೀನ್ ಗಳನ್ನು ಅಳವಡಿಸಲಾಗುತ್ತಿದೆ.

ಒಟ್ಟು 44 ದೇಶಗಳ 170 ಚಿತ್ರಗಳ ಪೈಕಿ ವಿಶ್ವದ ಸಿನಿಮಾ ವಿಭಾಗದಡಿ 62, ಏಷ್ಯನ್ ಸಿನಿಮಾ ಸ್ಪರ್ಧೆಯಡಿ 9, ಭಾರತೀಯ ಚಿತ್ರರಂಗದಡಿ 10, ಕನ್ನಡ ಸಿನಿಮಾದಡಿ 10, ಕನ್ನಡ-ಭಾರತೀಯ ವಿಶೇಷ ಪ್ರದರ್ಶನಗಳು- ವಿಭಾಗದಲ್ಲಿ 9, ವಿಶೇಷ ವಿಭಾಗಗಡಿ 11, ಸಿನಿಮಾ ವಿಶೇಷ ವಿಭಾಗದಡಿ-ಫ್ರೆಂಚ್ ಕ್ಲಾಸಿಕ್ಸ್- 6, ಡಾ ಯು. ಆರ್ ಅನಂತಮೂರ್ತಿ ಶ್ರದ್ಧಾಂಜಲಿ ವಿಶೇಷದಡಿ 5, ಕೊರಿಯಾ-ನೆದರ್ ಲ್ಯಾಂಡ್ ದೇಶ ವಿಶೇಷ-13, ಲೈಂಗಿಕ ಹಿಂಸೆ ಚಿತ್ರಗಳ ವಿಭಾಗದಡಿ 6, ವಿಮರ್ಶಕರ ಆಯ್ಕೆಯಡಿ 5, ಏಷ್ಯನ್ ಸ್ಪರ್ಧಾ ವಿಜೇತ ವಿಭಾಗದಡಿ 6, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ವಿಭಾಗದಡಿ ವಿ ಕೆ ಮೂರ್ತಿ ಶ್ರದ್ಧಾಂಜಲಿಯಡಿ 5, ನೆನಪಿನ ಮಾಲೆಯಡಿ ಸಿಆರ್ ಸಿಂಹ, ಕೆ ಎಂ ಶಂಕರಪ್ಪ, ಬಾಲು ಮಹೇಂದ್ರ, ಅಲನ್ ರೆನೆಯರ 4, ಶತಮಾನದ ನೆನಪು ವಿಭಾಗದಡಿ ಹೊನ್ನಪ್ಪ ಭಾಗವತರ್-1, ಹುಣಸೂರು ಕೃಷ್ಣಮೂರ್ತಿ -1 ಹಾಗೂ ಸಾರ್ವಜನಿಕ ಪ್ರದರ್ಶನಕ್ಕೆ 6 ಹಾಸ್ಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ತಿಳಿಸಿದರು.

ಚಿತ್ರೋತ್ಸವದ ವಿಶೇಷತೆಗಳು

ಬರ್ಲಿನ್, ಕಾನ್, ಕಾರ್ಲೋವಿವಾರಿ, ಮಾಸ್ಕೋ, ವೆನಿಸ್, ಟೊರೊಂಟೊ ಮತ್ತಿತರ ಮಹತ್ವದ ಚಿತ್ರೋತ್ಸವಗಳಲ್ಲಿ ಭಾಗವಹಿಸಿದ ಚಿತ್ರಗಳು ಇಲ್ಲಿ ಪ್ರದರ್ಶಿತವಾಗುತ್ತಿರುವುದು ವಿಶೇಷ. ಏಷ್ಯಾ, ಭಾರತೀಯ ಮತ್ತು ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಸ್ಪರ್ಧೆಯಿದ್ದರೆ, ಹಿಂದಿನ ವರ್ಷಗಳಿಗಿಂತ ಬದಲಾಗಿ ಭಾರತ ಸಿನಿಮಾಗಳಿಗೆ ಒಟ್ಟು ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಕನ್ನಡ ಚಿತ್ರಗಳಿಗೆ ಅಂತಾರಾಷ್ಟ್ರೀಯ ಜ್ಯೂರಿಗಳನ್ನು ನೇಮಿಸಲಾಗಿದೆ.

ವಿಶ್ವ ವಿಖ್ಯಾತ ನಿರ್ದೇಶಕರಾದ  Zhang Yimou, Jean Luc Godard, Ken Loach, Krzysztof Zanussi,  Phillip Noyce, Nuri Bilge Ceylan, Robert Bresson, Jacques Tati ಮುಂತಾದವರ ಚಿತ್ರಗಳು ಪ್ರದರ್ಶನವಾಗಲಿದೆ. ಏಷ್ಯಾ ಖಂಡದ ಜಪಾನ್, ಇರಾನ್, ಕೊರಿಯಾ, ಫಿಲಿಫೈನ್ಸ್, ಕಜಗಿಸ್ತಾನ್, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ರಾಷ್ಟ್ರಗಳ ಪ್ರಖ್ಯಾತ ಚಲನಚಿತ್ರಗಳು ಪ್ರದರ್ಶನವಾಗಲಿದೆ.ದಕ್ಷಿಣ ಅಮೆರಿಕಾದ ಉತ್ತಮ ಚಿತ್ರಗಳು, ಸಮಕಾಲೀನ ವಸ್ತುವಾದ ಲೈಂಗಿಕ ಹಿಂಸೆಯ ಬಗೆಗಿನ ವಿಶೇಷ ಚಿತ್ರಗಳು ಹಾಗೂ ಅವುಗಳ ಕುರಿತು ಚರ್ಚೆ ನಡೆಯುತ್ತಿರುವುದು ಈ ಉತ್ಸವದ ವಿಶೇಷ.

0 comments:

Post a Comment