ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ-ರಾಷ್ಟ್ರ
ಕರ್ನಾಟಕ ಸರ್ಕಾರದ   ಇಂಧನ ಸಚಿವರಾದ   ಡಿ.ಕೆ. ಶಿವಕುಮಾರ್‍ರವರು ಸ್ವಬಳಕೆಗೆ ಸೌರಶಕ್ತಿ ಬಳಸುವುದನ್ನು ಪ್ರೋತ್ಸಾಹಿಸಲು  ಮುಂದಾಗಿದ್ದಾರೆ. ನೆಟ್‍ಮೀಟರಿಂಗ್ ವ್ಯವಸ್ಥೆವುಳ್ಳ ಮೇಲ್ಛಾವಣಿ ಪಿ.ವಿ. ಘಟಕಗಳಿಗೆ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಿಂದ, ಮುಂದಿನ 5 ವರ್ಷಗಳಲ್ಲಿ 25000 ಮೇಲ್ಛಾವಣಿಗಳನ್ನು ಬಳಸಿ ಸರಾಸರಿ 5 ರಿಂದ 10 ಕಿ.ವ್ಯಾ. ಘಟಕಗಳಿಂದ 350 ದಶಲಕ್ಷ ಯೂನಿಟ್‍ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ಸಾಮಥ್ರ್ಯದ ಪೂರ್ಣ ಬಳಕೆಯಾದಲ್ಲಿ, ಬೇಡಿಕೆ ಮತ್ತು ಉತ್ಪಾದನೆಯ ಮಧ್ಯೆ ಇರುವ ಕಂದಕವನ್ನು ಕಡಿಮೆ ಮಾಡಬಹುದಾಗಿದೆ.ಈ ಹಿನ್ನಲೆಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯು ಇಂಧನ ಇಲಾಖೆಯ ಸಹಯೋಗದೊಂದಿಗೆ ಒಂದು ದಿನದ ಮೇಲ್ಛಾವಣಿ “ಸೌರಶಕ್ತಿ ಪಿ.ವಿ. ವಿದ್ಯುತ್ ಘಟಕಗಳು ಮತ್ತು ನೆಟ್ ಮೀಟರಿಂಗ್ ವ್ಯವಸ್ಥೆ” ಕುರಿತ ಕಾರ್ಯಾಗಾರವನ್ನು ನಮ್ಮ ಸಂಸ್ಥೆಯ ಆವರಣ ಶ್ರೀರಾಮಪುರ ಕ್ರಾಸ್, ಜಕ್ಕೂರು ಇಲ್ಲಿ ನವೆಂಬರ್ 29, 2014 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ಆಯೋಜಿಸಲಾಗಿದೆ.

 ಈ ಮೂಲಕ ಜಾಗೃತಿ ಮೂಡಿಸಿ ಶಿಕ್ಷಣ ಕೊಡುವುದಾಗಿದೆ. ಮೇಲ್ಛಾವಣಿ ಪಿ.ವಿ. ವಿದ್ಯುತ್ ಘಟಕಗಳನ್ನು ಅಳವಡಿಸಲು ಬೇಕಾಗಿರುವ ವಿಧಾನಗಳು, ತಂತ್ರಜ್ಞಾನಗಳು, ಸಹಾಯಧನ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸಲಕರಣೆಗಳು, ಸಾಲ ಯೋಜನೆಗಳ ಬಗ್ಗೆ ತಜ್ಞರು ಮಾಹಿತಿ ನೀಡುತ್ತಾರೆ. ಈ ಸಂದರ್ಭದಲ್ಲಿ ಘಟಕಗಳನ್ನು ಅಳವಡಿಸುವವರು ತಮ್ಮ ಉತ್ಪನ್ನಗಳೊಂದಿಗೆ ಲಭ್ಯರಿರುತ್ತಾರೆ. ಶಿಬಿರಾರ್ಥಿಗಳು ನೇರವಾಗಿ ಅವರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಮೇಲ್ಛಾವಣಿ ಪಿ.ವಿ. ಘಟಕಗಳನ್ನು ಅಳವಡಿಸಲು ಉತ್ಸುಕರಾಗಿರುವವರು ಕಾರ್ಯಾಗಾರದಲ್ಲಿ ಭಾಗವಹಿಸಲು ನೋಂದಾಯಿಸಬೇಕು. ಸೀಮಿತ ನೋಂದಣಿಗೆ ಅವಕಾಶವಿರುವುದರಿಂದ, ಮೊದಲು ಬಂದವರಿಗೆ ಆದ್ಯತೆ. ಕೇವಲ 80 ಜನರಿಗೆ ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ವೆಬ್‍ಸೈಟ್‍ನಿಂದ ಪಡೆಯಬಹುದು. ವೆಬ್‍ಸೈಟ್ : www.mgired.kar.nic.in ಅಥವಾ ಇ-ಮೇಲ್  mgrired@gmail.com    ಮಾಡಬಹುದು. ಇಲ್ಲವಾದಲ್ಲಿ ಪ್ರೊ. ಆರ್.ಎಸ್. ವರ್ಮಾ, ಹಿರಿಯ ಪ್ರಬಂಧಕರು ಮೊಬೈಲ್ ಸಂಖ್ಯೆ.9900154715 ಅಥವಾ ಶ್ರೀ ಪ್ರಮೋದ್, ಯೋಜನಾ ವ್ಯವಸ್ಥಾಪಕರು, ಮೊಬೈಲ್ ಸಂಖ್ಯೆ.9620541453 ಇವರನ್ನು ಸಂಪರ್ಕಿಸಬಹುದು.

0 comments:

Post a Comment