ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

  ಸಾಹಿತ್ಯ
                            
                      
ಅಧಿಕಾರಕ್ಕೆ ಕಣ್ಣಿಲ್ಲವೇ ಎಂದರೆ ಅಧಿಕಾರವೇ ಕಣ್ಣು ಎಂಬ ಸೆಟೆದ ಉತ್ತರವೇ ಪ್ರಾಪ್ತಿ.
ಕಣ್ಣಿಲ್ಲದಿದ್ದರೂ ಕಾಣಲಾಗದೇ ಎಂದರೆ ಒಳಗಣ್ಣು-ತಿಳಿಗಣ್ಣು-ಎಲ್ಲಾ ಹುಣ್ಣಿಗೆ ಸಿದ್ಧೌಷಧಾ ಎಂಬ ಸನಾತನ ಸತ್ಯದ ಅವತಾರ.
ಜಗತ್ತಿನಲ್ಲಿ ಏರು-ಪೇರು ಹೀಗಿದ್ದರೂ ತೇರು ಅಭಿವೃದ್ಧಿಗೆ ಕಂಕಣಬದ್ಧ ಎಂಬಹಠ.
ಅವಿವೇಕ ಎಂದರೆ ಮಾಡಬೇಕಾದುದನ್ನು-ಮಾಡದೇ -ಮಾಡಿಸದೇ ಸತಾಯಿಸುವ  ಸಾಯಿಸುವ ತಂತ್ರ-ಮಂತ್ರ ನಿರಂತರ.
ಜನತಂತ್ರಕ್ಕಂತೂ ಅದರ ಅವಲಂಬನೆ ಮಹತ್ವದ್ದೇ.ನಾವು ಇದರ ವಿಶ್ಲೇಷಣೆಗೆ ಸಮಕಾಲೀನದ ಕೆಲವು ಘಟನೆಗಳನ್ನು ಸೂಚಿಸುತ್ತಾ ಅವುಗಳಮೇಲೆ ಚಿಂತನ ಮಂಥನ ಮಾಡುತ್ತಾ ಈ ಪ್ರಸ್ತುತಿಯನ್ನು ಸಂಪಾದಿಸುತ್ತೇವೆ.
೧.ಕನಾ೯ಟಕದ ಮುಖ್ಯಮಂತ್ರಿಗಳ ಅತಿಕಿಮ್ಮತ್ತಿನ ವಿದೇಶಿ ಕೈಗಡಿಯಾರ-ಕಾಇಗೆ ಕಟ್ಟಿದರು-ಪ್ರಶಿನಿಸಿದವರನ್ನು ಬಾಯಿಮುಚ್ಚಿಸಿದರು-ಬೈದರು-ಹಾರ್‍ಆಡಿದರು-ಹೋರಾಡಿದರು
ಕೊನೆಗೆಸುಸ್ತಾದರು.ವಿಧಾನಸಭೆ ಮುಗ್ಗರಿಸಿತು-ಕೆಲಸ ಕೆಟ್ಟಿತು ಎಂತ ಗಡಿಯಾರ ಕಳಚಿದರು-ಸ್ಪೀಕರ್ ಗೆ ಹಸ್ತಾತರಿಸಿದರು-ನಾಟಕ ಮುಗಿಸಿದರು.


ಆದರೆ ರಾಜ್ಯದ ಹೊಲಸು ಕೇಂದ್ರಕ್ಕೆ ರವಾನೆ ಇನ್ನಲ್ಲಿ ಹೊಲಸನ್ನು ಹೊಸಲೊಳಗೆ ತಂದುಕೊಂಡು-ಬಿಚ್ಚಿ-ಚಚ್ಚಿ-ಕೊಚ್ಚಿ ಕ್ರಿಯೆ-ಪ್ರತಿಕ್ರಿಯೆ-ಪ್ರಕ್ರಿಯೆ-ಪರಾಕ್ರಮ ಮುಂದಿನಕ್ರಮ. ಅಧಿಕಾರದ ಖಾರ-ಅವಿವೇಕದ ಮಾರ ಮೆರೆ ಮೀರಿತು ಮೋರೆ ತೀಡಿತು.
ಈಗಷ್ಟೇ ಕನಾ೯ಟಕದ ರಾಜಧಾನಿಯಲ್ಲಿ ರೈತರ ಹೋರಾಟದ ಪರಾಕಾಷ್ಠತೆಗೆ ಹಿಡಿದ ಕನ್ನಡಿ ಕನ್ನಡ ನೆಲದ ಟ್ರಾಕ್ಟರ್ ರಾಲಿ.
ರಾಜಧಾನಿಯ ರಸ್ತೆಗಳಲ್ಲಿ ಬೆಳಗಿನ ಅವಸರದ ಘಳಿಗೆಗಳಲ್ಲಿ-ಜನಸಾಮಾನ್ಯರಿಗೆ,ಉದ್ಯೋಗಿಗಳಿಗೆ-ವಿದ್ಯಾಥಿ೯-ವಿದ್ಯಾಥಿ೯ನಿಗಳಿಗೆ ಕಂಟಕ ಪ್ರಾಯವಾದ ಪರಮಬಾಧಿತ ರಸ್ತೆ ಸಂಚಾರ-ಎಲ್ಲಕ್ಕೂ ತಂದಿತು ಸಂಚಕಾರ.


ಎಚ್ಚೆತ್ತ ಸರಕಾರ ಅಧಿಕಾರದ ಬಲೆ-ಬೆಲೆ-ಬೇಳೆ ಬೇಯಿಸಿತು ಬಡಿಸಿತು ಹೊಗೆ ಹಿಡಿದ ಖಾದ್ಯವನ್ನು.
ರಣವಾದ್ಯ-ವೈದ್ಯರಿಲ್ಲದ ಗುಣವಾಗದ ರೋಗ ಕನ್ನಡ ಜನತೆಯ ಭಾಗ್ಯ.
ಇಲ್ಲಿ ಇದೆ ಅವಿವೇಕದ ಪರಮಸೌಭಾಗ್ಯ-ಹೇಗೆಂದರೆ-ಪೋಲಿಸ್ ಕಾಯಾ೯ಚರಣೆ ಅನಿವಾಯ೯-ಹಾಗಾಗಿ ಖಾಕಿ ಮೆರೆಯಿತು ಮೊರೆಯಿತು ಮೊಳಗಿತು.
ಪ್ರದಶ೯ನಕಾರಿಗಳು ಒದೆತಿಂದರು-ಒದೆಯಲಾರದೇ ಮುಗ್ಗರಿಸಿದರು.
ಸಮಜಾಯಶಿ ಆಡಳಿತದ ಎತ್ತರದ ರೂವಾರಿಗಳಿಂದ-ಜನಕಷ್ಟ,ಸಮಯನಷ್ಟ,ಆಸ್ತಿನಷ್ಟ,ಆಸ್ಥೆನಷ್ಟ,ಅಸ್ಥಿನಷ್ಟ ಇತ್ಯಾದಿ ನಷ್ಟಗಳ ವ್ಯವಹಾರದ ಜಾಣತನ ಮುತ್ಸದ್ದಿತನ ಬುದ್ಧಿತನ ತನ್ನದಾಗಿಸಿಕೊಂಡ ಆಡಳಿತ ಯಂತ್ರ-ಅತಂತ್ರದಲ್ಲಿಯೂ ಕುತಂತ್ರ-ಅವಿವೇಕದ ಉತ್ತುಂಗ. ಮಾನ್ಯಮುಖ್ಯಮಂತ್ರಿಗಳ ಆಣಿಮುತ್ತು-ಆಂಬುಲೆಂಸ್ ಗಾಡಿಗಳಿಗೆ ತಡೆ ಆರೋಗ್ಯಕ್ಕೆ ಹೊಡೆತ ಆದ್ದರೀಂದ ಪ್ರದಶ೯ನಕಾರಿಗಳಿಗೆ ಪೋಲಿಸ್ ಹೊಡೆತ ಸರಿ.


ಇಡೆ ಜನ ಈ ಮೊದಲು ಬೆಂಗಳುರು ಮಹಾನಗರಪಲಿಕೆ ಸಮಯದ ಚುನಾವಣೆ ವೇಳೆ ನಗರ ವೀಕ್ಷಣೆ ಎಂಬ ಸನ್ನಿಯಲ್ಲಿ ಮಾಡಿದ-ಮಾಡಿಸಿದ ಅನ್ಯಾಯಗಳನ್ನು ದೂರದಶ೯ನ ಮಾಧ್ಯಮದ ಬಂಧುಗಳು ಪ್ರಶ್ನಿಸಿದಾಗ ತಿರುಗಿಬಿದ್ದಮಾನ್ಯಮುಖ್ಯಮಂತ್ರಿಗಳು ಅವೆಲ್ಲ ಅನಿವಾಯ೯ ಎಂತ ತಮ್ಮನ್ನು ಕಿಮ್ಮತ್ತಿನ ಜನಪ್ರತಿನಿಧಿ ಎಂತ ಬಿಂಬಿಸಿಕೊಂಡು ಆಕ್ಷೇಪಣೆಗಳನ್ನು ಮೂಲೆಗುಂಪಾಗಿಸಿದ್ದರು. ತನಗೆ ಒಂದು ನ್ಯಾಯ-ಇನ್ನೊಬ್ಬರಿಗೆ ನ್ಯಾಯಕೇಳಿದರೆ ಅನ್ಯಾಯ-ಇದೇ ಅವಿವೇಕದ ನೀತಿ-ರೀತಿ-ರಿವಾಜು.
೨ನೇ ಘಟನೆ: ಕಳಸ ಬ್ಂಡೂರಿ ನಾಲೆ-ನೀರು-ಬೆವರು ಇಳಿಸಿದಾಗ ಆಡಿದಮಾತು-ಮಾನ್ಯ ಪ್ರಧಾನ ಮಂತ್ರಿಗಳು ಹಿರಿಯ ಮನಸ್ಸು ಮಾಡಿ ಕನ್ನಡದ ಜನೆತೆಗೆ ನ್ಯಾಯ ದೊರಕಿಸಿಕೊಡಲಿ ಎಂತ ಮೃದುವಾಗಿ-ಮೆದುವಾಗಿ-ಮಗುವಾಗಿ ಕೈಮುಗಿದು ಪ್ರಾಥ೯ನೆ-ಯಾಚನೆ-ವಿಧಾನ ಸಭೆ-ಪರಿಷತ್ತುಸಭೆಗಳಲ್ಲಿ
-ಕಳಕಳಿಯ ಬಿನ್ನಹ.ಮುಖ್ಯಮಂತ್ರಿಗಳಸಭೆಕರೆದು ನೀತಿಆಯೋಗದಮುಂದೆ
ಅಗತ್ಯಗಳನ್ನು ಮಂಡಿಸಿ ಚಿಂತನ ಮಂಥನ ಮಾಡಿರಿ ಎಂದರೆ ಕನ್ನಡನೆಲದ ದೊರೆ ತಮ್ಮ ದೊರೆಸಾನಿ ಸಭೆಯಲ್ಲಿ ಭಾಗವಹಿಸುವುಬೇಡಾ ಎಂತ ಆದೇಶ ನೀಡಿದರು ಎಂತ ಕನ್ನಡದ ನಲ್ಮೆಯನ್ನು-ಮೆಲ್ಮೆಯನ್ನು ಬಲಿಗೊಟ್ಟ ಹಿರಿಯ ಮುತ್ಸದ್ದಿ ಈ ಜನಪ್ರತಿನಿಧಿಮಹಾಶಯರು.

ಇಲ್ಲಿ ಅಧಿಕರದ ಅಮಲಿನಲ್ಲಿ ಅವಿವೆಕದ ಅಸಹ್ಯ ಮುಖದಶ೯ನ.ಇವೆಲ್ಲಾ ಪ್ರಜಾಪ್ರಭುತ್ವದಲ್ಲಿ ಸವೇ೯ಸಾಧರಣ- ಕಾರಣ ಪ್ರಜೆ ಸಾಧಾರಣ-ಹೈರಾಣ-ಬೇಡದ ನಗ.
೩ನೆ ಘಟನೆ:
ಇನ್ನಿಶ್ಟೇ ಆರಂಹಗೊಳ್ಲಬೇಕಿರುವ ವಲ್ಡ್೯ ಟಿ-೨೦ ಕ್ರಿಕೆಟ್ ಪಂದ್ಯ-ಧಮ೯ಶಾಲ-ಹಿಮಾಚಲದ ಅಟದ ಮೈದಾನದಲ್ಲಿ ಚಂಡು ದಾಂಡು ಯುದ್ಧ-ಭಾರತ ಪಾಕಿಸ್ಥಾನದ ಮೇರುಕದನ. ಸದನ,ಸದಾ,ಮೀರಿ ವೇದನೆಯ,ಸಂವೇದನೆಯ ಸೂಕ್ಷ್ಮ ಸಂಗತಿ-ಆದರೂ ಸಂಗಾತಿ-ಇದಕ್ಕಾಗಿ ಗತಿ-ಮತಿ ಪ್ರತಿ-ಪ್ರಥಾ ಜಾಥ ಎನೆಲ್ಲಾ ಬೆರಗು ಬಿನ್ನಾಣ.ಇಹಕ್ಕೂ ಇಲ್ಲ ಪ್ರಕ್ಕೂ ಇಲ್ಲ ಆದರೆ ಪರಸ್ಪರಕ್ಕೆ ಇದೆ ಎಲ್ಲಾ-ಬೆಲ್ಲ -ಬೆಲೆ-ಸೆಲೆ-ನೆಲೆ-ನಲ್ಮೆ.ನೊಂದವರಿಗೆ ಬೇಡಾ-ಬೆಂದವರಿಗೆ ಬೇಡ-ಮುಷ್ಟಿ ಜನಕ್ಕೆ ಹಿತ ಸಮಷ್ಟಿ ಜನಕ್ಕೆ ಅಹಿತ.ಸ್ಥಳಿಯ ಆಟದ ಮೈದಾನದ ಧಣಿಗಳಿಗೆ-ಯಾಜಮಾನ್ಯಕ್ಕೆ ಇದು ಅವಮಾನ.
೧೨೫ಕೋಟಿ ಜನದ ಪರಮೋಚ್ಚ ಯಾಜಮಾನ್ಯಕ್ಕೆ  ಒಪ್ಪು-ಒಡವೆ ಹಾಗಾಗಿ ಅದರ ಗೊಡವೆ ಸಹ್ಯ-ಪ್ರಿಯ-ನಿಭ೯ಯಾವರಿಗೆ.
ಕೋಟಿಗೆ ಕೆಟ್ಟ-ಕೊಟ್ಟಿಗೆಗೆ-ಇಷ್ಟ-ಶಿಷ್ಟ-ಪುಷ್ಟ-ಇದೇ ಸಂಕಷ್ಟ-ಕಾರಣ ಇಲ್ಲಿದೆ ಅಧಿಕಾರದ ಸೋಗಿನಲ್ಲಿ ಅವಿವೇಕದ ಸೊಗಡು ಬಗ್ಗಡ.ಹೆಗೇ ನೋಡಿದರೂ-ನೋಡಿಸಿದರೂ ಸತ್ಯವೇ ಸತ್ಯ ಅದಕ್ಕೆ ಸಾವಿಲ್ಲ-ಸಾವಿಗೆ ಸತ್ಯವಿಲ್ಲ.
ಪ್ರಜಾಪ್ರಭುತ್ವ-ಪ್ರಭುತ್ವಕ್ಕೆ ವಿಭುತ್ವವಿಲ್ಲ-ವಿಭುತ್ವಕ್ಕೆ ಪ್ರಭುತ್ವ ವಿಲ್ಲ.ಎಲ್ಲಾ ಬೇಜೋಡು-ಬೇಜಾರು.
ಧಮ೯ಶಾಲ ಶೂಲವೋ-ಶೀಲವೋ ಏನು ಉಣಬಡಿಸುತ್ತದೆ ಎಂಬುದೇ ಈಗ ಬಿಸಿ ಬಿಸಿ ಚಚೆ೯ಯಲ್ಲಿರುವ ಸುದ್ದಿ.
ನೋಡೋಣ ಭಾರತದಲ್ಲಿ-ಏನಿದೆ-ಏನಿರಬೇಕು-ಹೇಗಿದೆ ಹೇಗಿರಬೇಕು ಎಂತ ತೀಮಾ೯ನಿಸಲು ಪರಾತ್ಪರದ ಪ್ರಭುವೇ-ತತ್ಪರ ಪ್ರಭುವೇ ಯಾರು ಯಾವಾಗ ಅವತರಿಸಿ ತತ್ತರಿಸದ ಜನಕ್ಕೆ ಸರಿಯುತ್ತರ ಒದಗಿಸುತ್ತಾರೆ ಎಂತ.
ಹೇಗೂ ಇರಲಿ ಕಾಯುವಿಕೆಯಲ್ಲಿ ಹಿತವಿದೆ ಹಿತದಲ್ಲಿ ಕಾಯುವಿಕೆ ಇದೆ.
ಇದು ಅವಿನಾ ಸಂಭಂಧ.
ಅಧಿಕಾರ ವಿವೇಕ ಮೇಳೈಸುತ್ತದೋ ಮುಗ್ಗರಿಸೊತದೋ-ಇದೇ ಪ್ರಜಪ್ರಭುತ್ವದ ಗಟ್ಟಿತನ.
"ಭಿಯಾ ದೇಯಂ, ಹ್ರಿಯಾ ದೇಯಂ,ಸಂವಿದಾ ದೇಯಂ"

ಆರ್.ಎಂ.ಶರ್ಮ , ಮಂಗಳೂರು.

0 comments:

Post a Comment