ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಗ್ರಹಣ ಬಿಟ್ಟ ಶೋಭೆ ಅನುಪಮ ... ಅದು ಮೊದಲ ಶೋಭೆಯೇ...ನಾರ್ಮಲ್ ಅನ್ನಿಸ್ತಾ ಇದೆ... ಮಧ್ಯೆ ಅಸಹಜ ಬಂದಿತ್ತು... ಈಗ ಸಹಜತೆ ಮತ್ತೆ ಸಿಕ್ಕಿದೆ. ಯಾವ ಸ್ಥಿತಿಯಲ್ಲೂ ಸಹಜತೆಯನ್ನು ಕಳಕೊಳ್ಳದಿರುವುದೇ ಧೀರತೆ.ನಿಮ್ಮ ಸಂಭ್ರಮ ನಮಗೆ ಸಂಭ್ರಮ ತಂದಿದೆ.ನಿಮ್ಮ ಕಣ್ಣಂಚ ನೀರು ನಮ್ಮ ಕಣ್ಣಂಚಲ್ಲಿ ನೀರು ತಂದಿದೆ..ನಿಮ್ಮ ನಿಷ್ಠೆಯ ಆಳ ತಿಳಿಯಿತು ಇದರಿಂದ. ಎಲ್ಲರ ನಿಜ ಬಣ್ಣ ಗೊತ್ತಾಗಿದೆ. ಇಂದು ಹೊಸದೇನೂ ಬಂದಿಲ್ಲ... ಇರುವುದು ಕಾಣಿಸಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರತಿಕ್ರಿಯಿಸಿದ್ದಾರೆ.ಒಳ್ಳೆಯದು ಮಾಡೋಣ. ನಮಗೆ ಯಾರ ಮೇಲೂ ದ್ವೇಷವಿಲ್ಲ, ಪ್ರತೀಕಾರಭಾವವಿಲ್ಲ ಸಾಧ್ಯವಾದರೆ ಅವರಿಗೂ ಒಳ್ಳೆಯ ಬುದ್ಧಿ ಬರಲಿ.ಮಠ ರಕ್ಷಣೆಯ ವಿಷಯದಲ್ಲಿ ಒಂದು ಹೆಜ್ಜೆಯೂ ಹಿಂದಿಲ್ಲ. ನಿಮ್ಮ ಸಮಾಧಾನ ನೋಡಿ ನಮಗೆ ಸಮಾಧಾನ ಆಗಿದೆ. ನಿಮ್ಮ ಪೀಠ ಅಜರಾಮರವಾಗಿ ಇರಲಿ. ನಿಮ್ಮ ನಗುವಿಗಾಗಿ ನಾವು ತಪಿಸ್ತಾ ಇರ್ತೇವೆ.
ಸಂಭ್ರಮದ ಬದಲು ಸಂಯಮ ಇರಲಿ. ನಮ್ಮ ಕಣ್ಣು ಮುಂದಿದೆ- ಮುಂದೆ ಇನ್ನೇನು ಕಾದಿದೆ ಎಂದು ನೋಡುತ್ತಿದ್ದೇವೆ.
ನಾವು ಎಚ್ಚರಿರೋಣ. ಭಯ ಬೇಡ.. ಇದಕ್ಕಿಂತ ದೊಡ್ಡ ಅಸ್ತ್ರ ಇಲ್ಲ. ಈಗ ನಮ್ಮನ್ನು ಉಳಿಸಿದ್ದು ರಾಮ.
ರಕ್ಷಿಸುವ ಕೈ ದೊಡ್ಡದು. ಸತ್ಯ, ಸಹನೆ ಈ ಎರಡೂ ಜೊತೆ ಇದ್ದರೆ ಗೆಲುವು ನಿಶ್ಚಿತ. ಕಾರ್ಯಕರ್ತರ ರೂಪದಲ್ಲಿ ಇದ್ದದ್ದು ರಾಮನೇ. ಸಮಾಜ ರಾಮನಂತೆ ನಡೆದುಕೊಂಡಿದೆ. ಇದೆಲ್ಲ ಮರೆಯುವಷ್ಟು ಒಳ್ಳೆಯದು ಮಾಡೋಣ... ನೀವು ಜೊತೆಯಾಗಿ. ಒಬ್ಬೊಬ್ಬನೂ ಸರ್ವಶಕ್ತಿಯನ್ನೂ ಮುಂದಿನ ಒಳಿತಿನ ಕಾರ್ಯಕ್ಕೆ ಧಾರೆ ಎರೆಯಬೇಕು. ನಿಮಗಾರಿಗೂ ಇಂತಹ ನೋವು ಬಾರದಿರಲಿ. ನಮ್ಮನ್ನು ಮಾಧ್ಯಮವಾಗಿಸಿಕೊಂಡು ಬರುವ ನೋವೂ ಬಾರದಿರಲಿ.

0 comments:

Post a Comment