ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:17 PM

ತುಳಸೀ...ಬಳಸೀ...

Posted by ekanasu

ದಿನನಿತ್ಯದ ಬದುಕಿನಲ್ಲಿ ತುಳಸೀಯನ್ನು ಯಾಕೆ ಬಳಸಬೇಕು ತಪ್ಪದೆ ಓದಿ ಶೇರ್ ಮಾಡಿ

ತುಳಸಿಯ ಎಲ್ಲಾ ಭಾಗಗಳೂ ಒಂದಲ್ಲ ಒಂದು ಔಷಧೀಯ ಗುಣ ಹೊಂದಿರುವಂತೆಯೇ ತುಳಸಿ ಎಲೆಗಳಲ್ಲಿರುವ ಒಂದು ಬಗೆಯ ವಿಶಿಷ್ಟ ಸುವಾಸನೆಯು ಕ್ರಿಮಿಕೀಟಗಳನ್ನು ವಿಕರ್ಷಣಗೊಳಿಸುವಂತಹ ಗುಣವನ್ನು ಹೊಂದಿದೆ. ಆದ್ದರಿಂದ ತುಳಸಿ ಗಿಡಗಳು ಮನೆಯ ಸುತ್ತ ಮುತ್ತಲೂ ಹೆಚ್ಚಿನ ಪ್ರಮಾಣದಲ್ಲಿದ್ದರೆ ಸೊಳ್ಳೆಗಳ ಕಾಟ ಗಣನೀಯ ವಾಗಿ ಕಡಮೆಯಾಗುತ್ತದೆ.

ಇದರ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ನೀರಿನಲ್ಲಿರುವ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತವೆ. ಗ್ರಹಣ ಕಾಲದಲ್ಲಿ ಮನೆಯೊಳಗೆ ಸಂಗ್ರಹಿಸಿದ ನೀರಿಗೆ ಹಿಂದಿನ ಕಾಲದಲ್ಲಿ ತುಳಸಿ ಎಲೆಗಳನ್ನು ಹಾಕಿಡುತ್ತಿದ್ದರು. ಗ್ರಹಣದ ಸಮಯ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸುವ ವಿಷಯುಕ್ತ ವಿಕಿರಣಗಳು ನೀರಿನಲ್ಲಿ ಸೇರಿಕೊಳ್ಳುವುದನ್ನು ತುಳಸಿ ಹೀರಿಕೊಂಡು ನೀರನ್ನು ಸಂರಕ್ಷಿಸುತ್ತದೆ. ತುಳಸಿಯ ಎಲೆ ಹಾಗೂ ಕಾಂಡಗಳಿಂದ ಸುವಾಸಿತ ಎಣ್ಣೆಯನ್ನೂ ತೆಗೆಯುತ್ತಾರೆ.

ತುಳಸಿ ರಸ ನೆಗಡಿ, ಕೆಮ್ಮುಗಳಲ್ಲಿ ಪರಿಣಾಮಕಾರಿ. ಸೊಳ್ಳೆ ಕಚ್ಚಿದ ದಡ್ಡುಗಳಿಗೆ ತುಳಸಿ ಎಲೆ, ಕಾಂಡ ಹಾಗೂ ಬೇರುಗಳನ್ನು ಅರೆದು ಲೇಪಿಸಿದರೆ ದಡ್ಡು ಗುಣವಾಗುತ್ತದೆ. ಇದರ ರಸ ಹಾವು, ಚೇಳು ಕಚ್ಚಿದ್ದಕ್ಕೆ ಉತ್ತಮ ಮದ್ದು. ಹದಿಹರೆಯದವರನ್ನು ಕಾಡುವ ಮೊಡವೆಗಳಿಗೆ ತುಳಸಿ ಎಲೆಗಳನ್ನು ನೀರಿನಲ್ಲಿ ಅರೆದು ಲೇಪಿಸಬೇಕು. ಕೆಮ್ಮು, ನೆಗಡಿ ಇರುವಾಗ ಎರಡು ಚಮಚ ತುಳಸಿ ಎಲೆಯ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಕೆಮ್ಮು, ನೆಗಡಿ ವಾಸಿಯಾಗುತ್ತದೆ.

ಪ್ರತಿದಿನ ತುಳಸಿ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರ ಎಲೆಗಳಿಂದ ತಯಾರಿಸಿದ ಸುಗಂಧ ತೈಲವು ಬ್ಯಾಕ್ಟೀರಿಯಾ ನಿರೋಧಕ ಗುಣ ಹೊಂದಿದೆ. ತುಳಸಿ ಪವಿತ್ರತೆಗೆ ಹೆಸರಾಗಿ ಪೂಜಿಸಲ್ಪಡುವುದರ ಜೊತೆಗೆ "ಸರ್ವರೋಗ ನಿವಾರಕ' ಎಂಬ ಬಿರುದನ್ನೂ ಪಡಕೊಂಡಿದೆ ಎಂದರೂ ತಪ್ಪಾಗಲಾರದು.

ಏನೇ ಇರಲಿ ತುಳಸಿ ಮನೆಯಂಗಳದ ಸಂಜೀವಿನಿಯಂತೂ ಹೌದು..

0 comments:

Post a Comment