ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಲ್ಲಂಗಡಿ ಜ್ಯೂಸ್ 

ಬೇಕಾಗುವ ಸಾಮಗ್ರಿಗಳು: ಮೀಡಿಯಂ ಸೈಜ್ ಗೆ ಹೆಚ್ಚಿದ ಕಲ್ಲಂಗಡಿ ಹೋಳುಗಳು - 4 ಗ್ಲಾಸ್ ನಷ್ಟು ,ಸಕ್ಕರೆ - 4 ರಿಂದ 5 ಚಮಚ (ಸಿಹಿಯಾಗುವಷ್ಟು),ಚಿಟಿಕೆ ಉಪ್ಪು,ಕಾಳುಮೆಣಸಿನ ಪುಡಿ - 1/2 ಚಮಚ,ಐಸ್ ಕ್ಯೂಬ್ಸ್ - ಬೇಕಿದ್ದರೆ
ಮಾಡುವ ವಿಧಾನ:ಕಲ್ಲಂಗಡಿ ಹೋಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಸೋಸಿಕೊಂಡು ಚರಟವನ್ನು ಬೇರ್ಪಡಿಸಿ.

 ತಯಾರಾದ ಜ್ಯೂಸ್ ಗೆ ರುಚಿಗೆ ತಕ್ಕಷ್ಟು ಸಕ್ಕರೆ, ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕದಡಿ. ಬೇಕಿದ್ದರೆ ಇದನ್ನು ಸ್ವಲ್ಪ ಸಮಯ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿ ಕುಡಿಯಬಹುದು. ಈ ಜ್ಯೂಸ್ ನ್ನು ಸರ್ವಿಂಗ್ ಗ್ಲಾಸ್ ಗೆ ಹಾಕಿ, ಒಂದೆರಡು ಐಸ್ ಕ್ಯೂಬ್ಸ್ ಸೇರಿಸಿ ಕುಡಿಯಲು ಕೊಡಿ.ಬಿಸಿಲಿನಲ್ಲಿ ದಣಿದು ಬಂದಾಗ ತಣ್ಣಗಿನ ಜ್ಯೂಸ್ ಕುಡಿಯಲು ಬಹಳ ಚೆನ್ನಾಗಿರುತ್ತದೆ.ಮಜ್ಜಿಗೆ ನೀರು

ಬೇಕಾಗುವ ಸಾಮಾಗ್ರಿಗಳು:
ಮೊಸರು 1 ಲೀಟರ್, ಕರಿಬೇವು 5 ಎಸಳು, ಸಾಸಿವೆ 1 ಚಮಚ, ನೀರು 2ಲೀಟರ್, ಉಪ್ಪು ರುಚಿಗೆ, ಶುಂಠಿ 1ಚೂರು, ಜೀರಿಗೆ 1 ಚಮಚ, ಹಸಿಮೆಣಸಿನ ಕಾಯಿ 10 ಗ್ರಾಂ., ಕೊತ್ತಂಬರಿ ಸೊಪ್ಪು 1 ಕಂತೆ
ತಯಾರಿಸುವ ವಿಧಾನ:
ಮೊಸರನ್ನು ಕಡೆದು ಮಜ್ಜಿಗೆ ಮಾಡಿ. ಇದಕ್ಕೆ ಸಾಕಷ್ಟು ನೀರು ಬೆರಸಬೇಕು. ಶುಂಠಿ, ಹಸಿಮೆಣಸಿನಕಾಯಿ ಹಾಗೂ ಉಪ್ಪು ಸೇರಿಸಬೇಕು. ನಂತರ ಸಾಸಿವೆ, ಜೀರಿಗೆ, ಕರಿಬೇವು ಒಗ್ಗರಣೆ ಹಾಕಬೇಕು. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಕುಡಿಯಲು ಕೊಡಿ

0 comments:

Post a Comment