ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ-ರಾಷ್ಟ್ರ

ಯುನೈಟೆಡ್ ಸ್ಪಿರಿಟ್ ಕಂಪನಿಯ ಅಧ್ಯಕ್ಷ ಸ್ಥಾನ ತ್ಯಜಿಸುವುದಕ್ಕೆ ಪ್ರತಿಯಾಗಿ ಡಿಯಾಜಿಯೋ ಕಂಪನಿಯಿಂದ 75 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ವಿಜಯ ಮಲ್ಯರಿಗೆ ಪಾವತಿಯಾಗಿತ್ತು. ಈ ಹಣ ತಮಗೆ ಸಿಗಬೇಕು, ಅವನ್ನು ಮಲ್ಯರಿಗೆ ನೀಡಬಾರದು ಎಂದು ಎಸ್‌'ಬಿಐ ಮತ್ತು ಇತರ ಬ್ಯಾಂಕ್‌'ಗಳ ಸಮೂಹ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಡಿಆರ್'ಟಿ ತನ್ನ ತೀರ್ಪು ನೀಡಿದೆ.
ಡಿಯಾಜಿಯೋ ಒಪ್ಪಂದದ ವಿಚಾರದಲ್ಲಿ ವಿಜಯ್ ಮಲ್ಯರಿಗೆ ಹಿನ್ನಡೆ ಉಂಟಾಗಿದೆ. ಡಿಯಾಜಿಯೋದಿಂದ ಸಂದಾಯವಾದ ಹಣವನ್ನು ವಿಜಯ್ ಮಲ್ಯ ವಿತ್'ಡ್ರಾ ಮಾಡಿಕೊಳ್ಳುವಂತಿಲ್ಲ ಎಂದು ಸಾಲ ವಸೂಲಾತಿ ನ್ಯಾಯಮಂಡಳಿ(ಡಿಆರ್'ಟಿ) ಸೋಮವಾರ ತೀರ್ಪು ನೀಡಿದೆ.ವಿಜಯ ಮಲ್ಯರ ಬಂಧನವಾಗಬೇಕು, ಅವರ ಪಾಸ್'ಪೋರ್ಟನ್ನು ವಶಪಡಿಸಿಕೊಳ್ಳಬೇಕು ಎಂದು ಕೇಳಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್'ಬಿಐ) ಒಟ್ಟು ನಾಲ್ಕು ಅರ್ಜಿಗಳನ್ನು ಡಿಆರ್'ಟಿಗೆ ಸಲ್ಲಿಸಿತ್ತು.

0 comments:

Post a Comment