ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಹೆಸರುಕಾಳು ಉಸಲಿ
ಬೇಕಾಗುವ ಸಾಮಾಗ್ರಿಗಳು:
250 ಗ್ರಾಂ ಹೆಸರುಕಾಳು, 1/4ಭಾಗ ತೆಂಗಿನಕಾಯಿ, 50 ಗ್ರಾಂ ಈರುಳ್ಳಿ, 4 ಹಸಿಮೆಣಸಿನಕಾಯಿ ಬೇಕಾದರೆ ಕೊತ್ತಂಬರಿ ಸೊಪ್ಪು, ಉಪ್ಪು, ಒಗ್ಗರಣೆಗೆ ಸಾಸಿವೆ ಮತ್ತು ಎಣ್ಣೆ.
ತಯಾರಿಸುವ ವಿಧಾನ:
 ಹೆಸರುಕಾಳನ್ನು ಬಿಸಿ ನೀರಿನಲ್ಲಿ ಹಾಕಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಮಾಡಿ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಅಮೇಲೆ ಬೆಂದ ಹೆಸರುಕಾಳು, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಕಡಲೆ ಕಾಯಿ ಉಸಲಿ:
ಬೇಕಾಗುವ ಸಾಮಾಗ್ರಿಗಳು:
ಬೇಕಾಗುವ ಸಾಮಾಗ್ರಿಗಳು:
250 ಗ್ರಾಂ ಕಡಲೆಕಾಳು, 1/4ಭಾಗ ತೆಂಗಿನಕಾಯಿ, 50 ಗ್ರಾಂ ಈರುಳ್ಳಿ, 4 ಹಸಿಮೆಣಸಿನಕಾಯಿ ಬೇಕಾದರೆ ಕೊತ್ತಂಬರಿ ಸೊಪ್ಪು, ಉಪ್ಪು, ಒಗ್ಗರಣೆಗೆ ಸಾಸಿವೆ ಮತ್ತು ಎಣ್ಣೆ.
ತಯಾರಿಸುವ ವಿಧಾನ:
ಕಡಲೆಕಾಳನ್ನು ಬಿಸಿ ನೀರಿನಲ್ಲಿ ಹಾಕಿ ಬೇಯಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಮಾಡಿ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಅಮೇಲೆ ಬೆಂದ ಕಡಲೆಕಾಳು, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.


ಬಟಾಣಿ ಉಸಲಿ:
ಬೇಕಾಗುವ ಸಾಮಾಗ್ರಿಗಳು:
500 ಗ್ರಾಂ ಬಟಾಣಿ, 1 ಚಮಚ-ಲವಂಗ, ಜೀರಿಗೆ ಮತ್ತು ಮೆಣಸಿನ ಹುಡಿ, 1/4 ತೆಂಗಿನಕಾಯಿ, 100 ಗ್ರಾಂ ಈರುಳ್ಳಿ, ಉಪ್ಪು ಮತ್ತು ಎಣ್ಣೆ.
ತಯಾರಿಸುವ ರೀತಿ:
ಮೊದಲು ಬಟಾಣಿಯನ್ನು 5-8 ಗಂಟೆಗಳ ಕಾಲ ನೆನೆ ಹಾಕಬೇಕು. ನಂತರ ಬೇಯಿಸಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ನಂತರ ಅದಕ್ಕೆ ಸಾಸಿವೆ ಒಗ್ಗರಣೆ ಮಾಡಿ. ಬಳಿ ಹಚ್ಚಿದ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಬೆಂದ ಬಟಾಣಿ, ಹೆಚ್ಚಿದ ಈರುಳ್ಳಿ , ಲವಂಗ, ಜೀರಿಗೆ. ಮೆಣಸು ಪುಡಿ, ಉಪ್ಪು, ತೆಂಗಿನಕಾಯಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಬೀನ್ಸ್ ಉಸಲಿ:
ಬೇಕಾಗುವ ಸಾಮಾಗ್ರಿಗಳು:
500 ಗ್ರಾಂ ಬೀನ್ಸ್, 1/4ಭಾಗ ತೆಂಗಿನಕಾಯಿ, 100 ಗ್ರಾಂ ಈರುಳ್ಳಿ, 4 ಹಸಿಮೆಣಸಿನಕಾಯಿ ಬೇಕಾದರೆ ಕೊತ್ತಂಬರಿ ಸೊಪ್ಪು, ಉಪ್ಪು, ಒಗ್ಗರಣೆಗೆ ಸಾಸಿವೆ ಮತ್ತು ಎಣ್ಣೆ.
ತಯಾರಿಸುವ ವಿಧಾನ:
 ಮೊದಲು ಬೀನ್ಸ್ ನನ್ಉ ಹೆಚ್ಚಿ ಬೇಯಿಸಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಮಾಡಿ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಅಮೇಲೆ ಬೆಂದ ಬೀನ್ಸ್, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಅವರೆಕಾಳು ಉಸಲಿ:
ಬೇಕಾಗುವ ಸಾಮಾಗ್ರಿಗಳು:
500 ಗ್ರಾಂ ಅವರೆಕಾಳು, 1/4ಭಾಗ ತೆಂಗಿನಕಾಯಿ, 100 ಗ್ರಾಂ ಈರುಳ್ಳಿ, 4 ಹಸಿಮೆಣಸಿನಕಾಯಿ ಉಪ್ಪು, ಒಗ್ಗರಣೆಗೆ ಸಾಸಿವೆ ಮತ್ತು ಎಣ್ಣೆ.
ತಯಾರಿಸುವ ವಿಧಾನ:
 ಅವರೆಕಾಳನ್ನು ಬೇಯಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಮಾಡಿ ಹಸಿಮೆಣಸಿನಕಾಯಿ, ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಬೆಂದ ಹೆಸರುಕಾಳು, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.0 comments:

Post a Comment