ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...



ನಿನ್ನೆ ಕೆಮಿಕಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಮೈಸೂರು ರಸ್ತೆ-ತುಮಕೂರು ರಸ್ತೆ ಮಧ್ಯೆ ಬೃಹತ್ ಟ್ಯಾಂಕರ್ ಪಲ್ಟಿಯಾಗಿದೆ.ಇದರಿಂದ 
ಟ್ಯಾಂಕರ್ ನಲ್ಲಿ ಥಯೋನಿಲ್ ಕೆಮಿಕಲ್ ಸಾಗಿಸಲಾಗುತ್ತಿತ್ತು. ಟ್ಯಾಂಕರ್ ಮಧ್ಯಪ್ರದೇಶದಿಂದ ಬೆಂಗಳೂರು ಮಾರ್ಗವಾಗಿ ತಮಿಳುನಾಡಿತ್ತ ತೆರಳುತ್ತಿತ್ತು. 






ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಸ್ಥಳದಲ್ಲಿ 2 ಅಗ್ನಿಶಾಮಕ ವಾಹನಗಳು ಮೊಕ್ಕಾಂ ಹೂಡಿದೆ. ಘಟನಾ ಸ್ಥಳದಲ್ಲಿ ಕೆಂಗೇರಿ ಪೊಲೀಸರೂ ಸಹ ಉಪಸ್ಥಿತರಿದ್ದಾರೆ.

ನಿನ್ನೆ ಸಂಜೆ ವೇಳೆ ನೈಸ್ ರಸ್ತೆಯಲ್ಲಿ ಟ್ಯಾಂಕರ್ ಪಲ್ಟಿಯಾಗಿತ್ತು. ರಾಸಾಯನಿಕ ಇರುವ ಹಿನ್ನೆಲೆಯಲ್ಲಿ ಟ್ಯಾಂಕರ್ ತೆರವು ಕಾರ್ಯ ವಿಳಂಬವಾಗಿದೆ. ಮಧ್ಯಪ್ರದೇಶ ಮೂಲದ ಕಂಪನಿಗೆ ಸೇರಿದ ರಾಸಾಯನಿಕವಾಗಿದೆ. ಸಿಬ್ಬಂದಿಗಳು ಕೆಮಿಕಲ್ ಕಂಪನಿ ಅಧಿಕಾರಿಗಳಿಗಾಗಿ ಕಾಯುತ್ತಿದ್ದಾರೆ.

0 comments:

Post a Comment