ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ-ರಾಷ್ಟ್ರ

ತೋಟವೊಂದರ ತೆರೆದ ಬಾವಿಯಲ್ಲಿ 42 ಫಿರಂಗಿ ಸಿಡಿಗುಂಡುಗಳು ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ಸಂಕೇಶ್ವರದ ಹೊರವಲಯದಲ್ಲಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ನಡೆದಿದೆ.ಬೆಳಗಾವಿ ಜಿಲ್ಲೆ ಸಂಕೇಶ್ವರ ನಗರದಿಂದ 1 ಕಿ.ಮೀ.ದೂರದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕ ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಅವರ ಒಡೆತನದ ತೋಟವಾಗಿದ್ದು, ಈ ತೋಟದಲ್ಲಿ ತೆರೆದ ಬಾವಿಯಿದ್ದು, ಕಳೆದ 3-4 ದಿನಗಳಿಂದ ಅದರೊಳಗಿದ್ದ ಹೂಳು ತೆಗೆಯಲಾಗುತ್ತಿತ್ತು. ತೆರೆದ ಬಾವಿಯಲ್ಲಿದ್ದ ಹೂಳು ತೆಗೆಯುವ ವೇಳೆ ಫಿರಂಗಿಗಳು ಪತ್ತೆಯಾಗಿವೆ.
ಮಲ್ಲಾರಿಗೌಡ ಪಾಟೀಲ ಸಂಕೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸಂಕೇಶ್ವರ ಪಿಎಸ್‌ಐ ಕುಮಾರ ಹಿತ್ತಲಮನಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, 42 ಫಿರಂಗಿ ಸಿಡಿಗುಂಡುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವು 1970ರ ಆಸುಪಾಸಿನದ್ದಾಗಿರಬಹುದು ಎಂದು ಶಂಕಿಸಲಾಗಿದೆ.

0 comments:

Post a Comment