ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಬೆಂಗಳೂರು ಪ್ರತಿನಿಧಿ ವರದಿ
 ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದೆ.ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು  ಶ್ರೀಗಳ ವಿರುದ್ಧದ ಎಲ್ಲಾ ಆರೋಪಗಳನ್ನು ಕೋರ್ಟ್ ಕೈಬಿಟ್ಟು ಆದೇಶ ಹೊರಡಿಸಿದೆ. ಪ್ರಕರಣದಿಂದ ತಮ್ಮನ್ನು ಮುಕ್ತಿಗೊಳಿಸಬೇಕೆಂದು ಶ್ರೀಗಳು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅವರ ಪೀಠ ಶ್ರೀಗಳಿಗೆ ಗುರುವಾರ ಈ ಮಹತ್ವದ ತೀರ್ಪನ್ನು ನೀಡಿದೆ.


ಹರ್ಷತಂಡಿದೆ
ಕೋರ್ಟ್ ತೀರ್ಪು ಶ್ರೀಗಳ ಶಿಷ್ಯವೃಂದಕ್ಕೆ ತೀವ್ರ ಸಂತಸವನ್ನು ತಂದೊಡ್ಡಿದೆ. ಶ್ರೀಗಳು ಆರೋಪ ಮುಕ್ತವಾಗಿ ಹೊರಬಂದದ್ದಕ್ಕೆ ಅಪಾರ ಭಕ್ತಸಮೂಹ ಸಂತಸ ವ್ಯಕ್ತಪಡಿಸಿದ್ದಾರೆ. 
ಸತ್ಯಕ್ಕೆ ಸಂದ ಜಯ
ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲೆ ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ಇದೀಗ ಸೆಷನ್ಸ್ ಕೋರ್ಟ್ ನೀಡಿದ ತೀರ್ಪು ಶ್ರೀಗಳ ಪರವಾಗಿರುವುದರು ಶ್ರೀಗಳ ಭಕ್ತ ಸಮೂಹಕ್ಕೆ ಅತ್ಯಂತ ಸಂತೋಷ ಉಂಟುಮಾಡಿದೆ ಎಂದು ಉಪ್ಪಿನಂಗಡಿ ಹವ್ಯಕ ಮಂಡಲಾಧ್ಯಕ್ಷ ಬಾಲ್ಯ ಶಂಕರ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಸತ್ಯಕ್ಕೆ ಸಂದ ಜಯವಾಗಿದೆ. ಶ್ರೀಗಳ ನಿಷ್ಠೆ, ತ್ಯಾಗ, ಹಾಗೂ ಜನಪರ ಸೇವೆಗೆ ಸಂದ ಜಯವಾಗಿದೆ ಎಂದವರು ಬಣ್ಣಿಸಿದ್ದಾರೆ. ಶ್ರೀಗಳ ವಿರುದ್ಧದ ಎಲ್ಲಾ ಆರೋಪಗಳನ್ನು ಕೋರ್ಟ್ ಕೈಬಿಟ್ಟಿರುವುದು ಸಂತಸ ತಂದಿದೆ ಎಂದವರು ತಿಳಿಸಿದ್ದಾರೆ.


0 comments:

Post a Comment